ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!

ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಕಮ್ಯುನಿಸ್ಟ್‌ ಮಿತ್ರ! ೨೦೧೭ ನವೆಂಬರ್‌ ೨೪. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶಿನಿಯಲ್ಲಿ ಅಡ್ಡಾಡುತ್ತಿದ್ದಾಗ ಥಟ್ಟನೆ ಎದುರಾಗಿದ್ದು `ಅನ್ವೇಷಣೆ’ಯ ಆರ್‌ ಜಿ ಹಳ್ಳಿ ನಾಗರಾಜ್‌ ಮಳಿಗೆ. ಅವರೇ ಒಂದು ಕುರ್ಚಿ ಹಾಕಿಕೊಂಡು ಕೂತಿದ್ದರು. ಕಂಡೊಡನೆ `ಏನ್‌ ಸುದರ್ಶನ್‌’ ಎಂದು ಅದೇ ಆತ್ಮೀಯತೆಯಿಂದ ಕರೆದು ಮಾತನಾಡಿಸಿ, ಖರೀದಿಸುವೆ ಎಂದು ಹೇಳಲೂ ಆಸ್ಪದ ಕೊಡದೆ (ಅವರ ಭೇಟಿಗಿಂತ ಮುನ್ನ ಇನ್ನೊಬ್ಬ ಪ್ರಕಾಶಕರು ಉಚಿತ ಕೊಡಲು ಯತ್ನಿಸಿದರೂ ದುಡ್ಡು ಕೊಟ್ಟೇ ಬಂದಿದ್ದೆ ಎನ್ನಿ!) ತಮ್ಮ ಹೊಸ ಪುಸ್ತಕವನ್ನು (ಹೆದ್ದಾರಿ ಕವಲು) ತೆರೆದು ಆಟೋಗ್ರಾಫ್‌ ಕೊಟ್ಟೇಬಿಟ್ಟರು.   ಆದರೆ ಬೆಂಗಳೂರಿನಲ್ಲಿ ೧೯೮೬ರ ಕೊನೆಯ…

"ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!"

ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ

ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ ವಿರುದ್ಧ ಬರುವ ಹಲವು ಲೇಖನಗಳನ್ನು, ಹೊಸ ಜಾಲತಾಣಗಳಲ್ಲಿ ಬರುವ ತನಿಖಾ ವರದಿಗಳನ್ನು ಓದಿ; ಕ್ವಿಕ್ರ್‌ನಲ್ಲಿ (quikr.com) ನಿಮ್ಮ ಹಳೆಯ ವಸ್ತುವನ್ನು ಮಾರಿ; ಮೊಬೈಲ್‌ನಲ್ಲಿ ಭಾರತೀಯ ಭಾಷೆಗಳೇ ಇರಬೇಕೆಂದು ಹಟ ಹಿಡಿದು ಇಂಡಸ್‌ಓಎಸ್ (indusos.com) ಸ್ಮಾರ್ಟ್‌ಫೋನ್ ಖರೀದಿಸಿ; ರಾಜಕಾರಣಿಗಳ ಭ್ರಷ್ಟಾಚಾರ – ಅಕ್ರಮ ಸಂಪತ್ತು – ಅಪರಾಧಗಳ ಬಗ್ಗೆ ತಿಳಿಯಲು (adrindia.org) ಹೊರಡಿ; ಉದ್ಯಮ ಆರಂಭಿಸಿ ಸಾಲಕ್ಕಾಗಿ ಹುಡುಕಾಡಿ : – ನಿಮ್ಮ ಇಂದಿನ ಇಂಥ ಹಲವು ಚಟುವಟಿಕೆಗಳಲ್ಲಿ ಅಮೆರಿಕಾದ…

"ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ"

Attention NGOs: Transparency and probity begins from you!

India receives a huge sum of money through FCRA (Foreign Contribution Regulation Act) approved organizations. The FCRA portal was non-functional for more than 10 years, courtesy UPA 1 and 2. Now, the NDA government has made it functional by strictly implementing the rule book. It is true that many of its measures are questioned and termed as oppressive, but there is another truth: these organizations are always trying to hide their source of funds, their…

"Attention NGOs: Transparency and probity begins from you!"

ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!

ಕಳೆದ ೧೦ ವರ್ಷಗಳಿಂದ ಗಡದ್ದಾಗಿ, ಜಾಣ ಮೂರ್ಛೆ ತಪ್ಪಿದ್ದ ಎಫ್‌ಸಿಆರ್‌ಎ (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್ FCRA) ವೆಬ್‌ಸೈಟ್‌ಗೆ ಈಗ ಜೀವ ಬಂದಿದೆ. ವಿದೇಶಿ ದೇಣಿಗೆ ಪಡೆಯುತ್ತಿದ್ದ ಸಂಸ್ಥೆಗಳನ್ನು ಮೋದಿ ಸರ್ಕಾರ ಶೋಷಿಸುತ್ತಿದೆ ಎಂಬ ದೂರುಗಳನ್ನು ನೀವು ಓದಿರಬಹುದು. ಈ ತಾಣಕ್ಕೆ ಈಗ ನೀವು ಭೇಟಿ ಕೊಟ್ಟರೆ, ದೇಶದೊಳಕ್ಕೆ ಹರಿದು ಬರುತ್ತಿರುವ ವಿದೇಶಿ ದೇಣಿಗೆಯ ಲೆಕ್ಕ ಸಂಪೂರ್ಣವಾಗಿ ಸಿಗುತ್ತದೆ. ೭೦೭ ಜಿಲ್ಲೆಗಳಿಗೆ ಹರಿದು ಬರುತ್ತಿರುವ ಸಾವಿರಾರು ಕೋಟಿ ರೂ.ಗಳ ಲೆಕ್ಕ ಮೊದಲ ಸಲ ಸಾರ್ವಜನಿಕರಿಗೆ ಖಚಿತವಾಗಿ ಸಿಗುತ್ತಿದೆ. Please follow and like us:

"ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!"

ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )

ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು ನನಗೆ ಸೂಚಿಸಿದರು. ಅತ್ಯಂತ ಸಂತೋಷದಿಂದ ಈ ಕೆಲಸವನ್ನು ನನ್ನ ತಿಳಿವಿನ ಮಟ್ಟಿಗೆ ಮಾಡಿಕೊಟ್ಟಿದ್ದೇನೆ. ಸಾರ್ವಜನಿಕರು ಈ ವರದಿಯನ್ನು ಬೆಂಬಲಿಸಿ ಇದನ್ನು ಹೆಚ್ಚು ಬಲಪಡಿಸುವ ದೃಷ್ಟಿಯಿಂದ ಸಲಹೆಗಳನ್ನು ಕೊಡಲು ವಿನಂತಿ.  ಈ ವರದಿಯನ್ನು ರಚಿಸಿ ಕೊಡಲು ನನಗೆ ಸಂಪೂರ್ಣ ಬೆಂಬಲ ಕೊಟ್ಟ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರಿಗೆ, ಕಾರ್ಯದರ್ಶಿ ಶ್ರೀ ಮುರಳೀಧರ, ಈ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ ನಾಗರಾಜ ಇವರಿಗೆ ನನ್ನ ಕೃತಜ್ಞತೆಗಳು.…

"ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )"

ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  

ಸುಮನಾ ಎಂಬ ಅಚ್ಚ ಕೇರಳದ ಪುಟ್ಟ ಹುಡುಗಿಯನ್ನು ನಾನು ನೋಡಿದ್ದು 1977 ರಲ್ಲಿ; ದಾವಣಗೆರೆಗೆ  1977 ರಲ್ಲಿ ಬಂದಾಗ. ಮೊನ್ನೆ, 2017 ರ ಜುಲೈ 9 ರಂದು ಮತ್ತೆ ಅವಳನ್ನು  – 34 ವರ್ಷಗಳ ನಂತರ – ಭೇಟಿಯಾಗಬಹುದು ಎಂದು ಊಹಿಸಿರಲೇ ಇಲ್ಲ! ಅವಳನ್ನು ನಾನು ಕಡೆಯ ಬಾರಿ ಭೇಟಿಯಾಗಿದ್ದು 1983 ರಲ್ಲಿ. ಅವಳ ಅಮ್ಮ ಲೀಲಾ/ಲೀಲಕ್ಕ, ಅಪ್ಪ ಶಿವನ್‌ – ಇವರನ್ನು ಮರೆಯಲಾದೀತೆ? ಅವಳ ಆಗಿನ ತುಂಟ ತಮ್ಮ ಸುನಿಲ್ ಕೂಡಾ ನನಗೆ ಅಚ್ಚುಮೆಚ್ಚಾಗಿದ್ದ. ಮೊನ್ನೆ ಸುಮನಾ (ನಾವೆಲ್ಲ ಅವಳನ್ನು ಸುಮ ಎಂದೇ ಕರೆಯುತ್ತೇವೆ) ಬಂದು `ಸುದರ್ಶನಣ್ಣ’ ಎಂದು ಕರೆದಾಗ ಮನಸ್ಸು ದಾವಣಗೆರೆಯ `ಆ ದಿನಗಳ’ ಕಾಲಕ್ಕೆ ಹೋಗಿದ್ದು ನಿಜ. ಪದವಿ ಶಿಕ್ಷಣ ಪಡೆಯುತ್ತಿರುವ…

"ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  "

ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು

ಜೀವವೈವಿಧ್ಯ, ಭಾಷಾವೈವಿಧ್ಯ, ಸಂಸ್ಕೃತಿ–ಪರಂಪರೆ–ಆಚರಣೆಯ ವೈವಿಧ್ಯ, ಉಡುಗೆ ತೊಡುಗೆಗಳ ವೈವಿಧ್ಯ – ಹೀಗೆ ಹತ್ತಾರು ಆಯಾಮಗಳಲ್ಲಿ ಭಾರತವು ವೈವಿಧ್ಯದ ದೇಶವಾಗಿದೆ. ಇಂಥ ವಿಷಯ ಸಮೃದ್ಧ ನಾಡಿನಲ್ಲಿ ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳು ಮತ್ತು ಹೊಸ ಕಾಲದ ಅಂತರಜಾಲದ (ಆನ್‌ಲೈನ್‌) ಅಭಿವ್ಯಕ್ತಿ ವೇದಿಕೆಗಳು ಮುಕ್ತ ಜ್ಞಾನದ ವೇದಿಕೆಗಳಾಗಲು ಸಾಕಷ್ಟು ಅವಕಾಶಗಳಿವೆ. Please follow and like us:

"ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು"

ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಿಂಪ್ಯೂಟರ್‌ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್‌ (www.simputer.org)ಆ ಕಾಲಕ್ಕಿಂತ ಮುಂದಿತ್ತೇನೋ! ಅದರಲ್ಲಿ ಭಾರತೀಯ ಭಾಷೆಗಳಲ್ಲಿ ಕಡ್ಡಿಯಿಂದಲೇ ಬರೆಯಬಹುದಾಗಿತ್ತು; ಗೀಚಿದ ಅಕ್ಷರಗಳನ್ನು ಅದು ಗುರುತಿಸುತ್ತಿತ್ತು. ಟೊಮ್ಯಾಟೋ ಧಾರಣೆಯನ್ನು ಕನ್ನಡದಲ್ಲೇ ಘೋಷಿಸುತ್ತಿತ್ತು;ಅಪ್ಪಟ ಭಾರತೀಯವಾದ `ಇಂಡಿಯನ್‌ ಮಾರ್ಕ್‌ ಅಪ್‌ ಲಾಂಗ್ವೇಜ್‌ ‘ (IMLI-ಇಮ್ಲಿ) ನ್ನು ಅಳವಡಿಸಿಕೊಂಡಿತ್ತು. ಹದಿನೈದು ವರ್ಷಗಳ ಹಿಂದೆಯೇ ಸಿಂಪ್ಯೂಟರ್ ರೂಪಿಸಿದ ನಮ್ಮ ಗತಿ ಹೀಗಿದೆ! “ಆಪಲ್‌ನ ಟೈಟಾನಿಯಂ ಪವರ್‌ಬುಕ್‌, ಮೈಕ್ರೋಸಾಫ್ಟ್‌ನ ವಿಂಡೋಸ್‌ ಎಕ್ಸ್‌ಪಿಗಿಂತ ಮುಖ್ಯವಾದ ಸಂಶೋಧನೆ ಎಂದರೆ ಭಾರತೀಯ ವಿಜ್ಞಾನಿಗಳು ರೂಪಿಸಿದ ಸಿಂಪ್ಯೂಟರ್‌. ಇದು ತೃತೀಯ ಜಗತ್ತಿನಲ್ಲಿ ಕಂಪ್ಯೂಟರ್‌ ಕ್ರಾಂತಿಯನ್ನೇ ಮಾಡಲಿದೆ”…

"ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ"

“ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!

ವಿಜ್ಞಾನಕ್ಕೆ ಆರೆಸೆಸ್‌ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್‌‌ ಎಂಬ ವೆಬ್‌ಸೈಟಿನ ಸುದ್ದಿ  ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!! Please follow and like us:

"“ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!"