ಆರ್ ಜಿ ಹಳ್ಳಿ ನಾಗರಾಜ್ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಕಮ್ಯುನಿಸ್ಟ್ ಮಿತ್ರ! ೨೦೧೭ ನವೆಂಬರ್ ೨೪. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶಿನಿಯಲ್ಲಿ ಅಡ್ಡಾಡುತ್ತಿದ್ದಾಗ ಥಟ್ಟನೆ ಎದುರಾಗಿದ್ದು `ಅನ್ವೇಷಣೆ’ಯ ಆರ್ ಜಿ ಹಳ್ಳಿ ನಾಗರಾಜ್ ಮಳಿಗೆ. ಅವರೇ ಒಂದು ಕುರ್ಚಿ ಹಾಕಿಕೊಂಡು ಕೂತಿದ್ದರು. ಕಂಡೊಡನೆ `ಏನ್ ಸುದರ್ಶನ್’ ಎಂದು ಅದೇ ಆತ್ಮೀಯತೆಯಿಂದ ಕರೆದು ಮಾತನಾಡಿಸಿ, ಖರೀದಿಸುವೆ ಎಂದು ಹೇಳಲೂ ಆಸ್ಪದ ಕೊಡದೆ (ಅವರ ಭೇಟಿಗಿಂತ ಮುನ್ನ ಇನ್ನೊಬ್ಬ ಪ್ರಕಾಶಕರು ಉಚಿತ ಕೊಡಲು ಯತ್ನಿಸಿದರೂ ದುಡ್ಡು ಕೊಟ್ಟೇ ಬಂದಿದ್ದೆ ಎನ್ನಿ!) ತಮ್ಮ ಹೊಸ ಪುಸ್ತಕವನ್ನು (ಹೆದ್ದಾರಿ ಕವಲು) ತೆರೆದು ಆಟೋಗ್ರಾಫ್ ಕೊಟ್ಟೇಬಿಟ್ಟರು. ಆದರೆ ಬೆಂಗಳೂರಿನಲ್ಲಿ ೧೯೮೬ರ ಕೊನೆಯ…
"ಆರ್ ಜಿ ಹಳ್ಳಿ ನಾಗರಾಜ್ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!"Category: ಸುದ್ದಿ
ಕಳೆದ ೧೦ ವರ್ಷಗಳಿಂದ ಗಡದ್ದಾಗಿ, ಜಾಣ ಮೂರ್ಛೆ ತಪ್ಪಿದ್ದ ಎಫ್ಸಿಆರ್ಎ (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್ FCRA) ವೆಬ್ಸೈಟ್ಗೆ ಈಗ ಜೀವ ಬಂದಿದೆ. ವಿದೇಶಿ ದೇಣಿಗೆ ಪಡೆಯುತ್ತಿದ್ದ ಸಂಸ್ಥೆಗಳನ್ನು ಮೋದಿ ಸರ್ಕಾರ ಶೋಷಿಸುತ್ತಿದೆ ಎಂಬ ದೂರುಗಳನ್ನು ನೀವು ಓದಿರಬಹುದು. ಈ ತಾಣಕ್ಕೆ ಈಗ ನೀವು ಭೇಟಿ ಕೊಟ್ಟರೆ, ದೇಶದೊಳಕ್ಕೆ ಹರಿದು ಬರುತ್ತಿರುವ ವಿದೇಶಿ ದೇಣಿಗೆಯ ಲೆಕ್ಕ ಸಂಪೂರ್ಣವಾಗಿ ಸಿಗುತ್ತದೆ. ೭೦೭ ಜಿಲ್ಲೆಗಳಿಗೆ ಹರಿದು ಬರುತ್ತಿರುವ ಸಾವಿರಾರು ಕೋಟಿ ರೂ.ಗಳ ಲೆಕ್ಕ ಮೊದಲ ಸಲ ಸಾರ್ವಜನಿಕರಿಗೆ ಖಚಿತವಾಗಿ ಸಿಗುತ್ತಿದೆ.
"ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!"
ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು ನನಗೆ ಸೂಚಿಸಿದರು. ಅತ್ಯಂತ ಸಂತೋಷದಿಂದ ಈ ಕೆಲಸವನ್ನು ನನ್ನ ತಿಳಿವಿನ ಮಟ್ಟಿಗೆ ಮಾಡಿಕೊಟ್ಟಿದ್ದೇನೆ. ಸಾರ್ವಜನಿಕರು ಈ ವರದಿಯನ್ನು ಬೆಂಬಲಿಸಿ ಇದನ್ನು ಹೆಚ್ಚು ಬಲಪಡಿಸುವ ದೃಷ್ಟಿಯಿಂದ ಸಲಹೆಗಳನ್ನು ಕೊಡಲು ವಿನಂತಿ. ಈ ವರದಿಯನ್ನು ರಚಿಸಿ ಕೊಡಲು ನನಗೆ ಸಂಪೂರ್ಣ ಬೆಂಬಲ ಕೊಟ್ಟ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರಿಗೆ, ಕಾರ್ಯದರ್ಶಿ ಶ್ರೀ ಮುರಳೀಧರ, ಈ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ ನಾಗರಾಜ ಇವರಿಗೆ ನನ್ನ ಕೃತಜ್ಞತೆಗಳು.
"ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )"ಸುಮನಾ ಎಂಬ ಅಚ್ಚ ಕೇರಳದ ಪುಟ್ಟ ಹುಡುಗಿಯನ್ನು ನಾನು ನೋಡಿದ್ದು 1977 ರಲ್ಲಿ; ದಾವಣಗೆರೆಗೆ 1977 ರಲ್ಲಿ ಬಂದಾಗ. ಮೊನ್ನೆ, 2017 ರ ಜುಲೈ 9 ರಂದು ಮತ್ತೆ ಅವಳನ್ನು – 34 ವರ್ಷಗಳ ನಂತರ – ಭೇಟಿಯಾಗಬಹುದು ಎಂದು ಊಹಿಸಿರಲೇ ಇಲ್ಲ! ಅವಳನ್ನು ನಾನು ಕಡೆಯ ಬಾರಿ ಭೇಟಿಯಾಗಿದ್ದು 1983 ರಲ್ಲಿ. ಅವಳ ಅಮ್ಮ ಲೀಲಾ/ಲೀಲಕ್ಕ, ಅಪ್ಪ ಶಿವನ್ – ಇವರನ್ನು ಮರೆಯಲಾದೀತೆ? ಅವಳ ಆಗಿನ ತುಂಟ ತಮ್ಮ ಸುನಿಲ್ ಕೂಡಾ ನನಗೆ ಅಚ್ಚುಮೆಚ್ಚಾಗಿದ್ದ. ಮೊನ್ನೆ ಸುಮನಾ (ನಾವೆಲ್ಲ ಅವಳನ್ನು ಸುಮ ಎಂದೇ ಕರೆಯುತ್ತೇವೆ) ಬಂದು `ಸುದರ್ಶನಣ್ಣ’ ಎಂದು ಕರೆದಾಗ ಮನಸ್ಸು ದಾವಣಗೆರೆಯ `ಆ ದಿನಗಳ’ ಕಾಲಕ್ಕೆ ಹೋಗಿದ್ದು ನಿಜ. ಪದವಿ ಶಿಕ್ಷಣ ಪಡೆಯುತ್ತಿರುವ…
"ದಾವಣಗೆರೆಯ ಸೋದರಿ ಸುಮನಾ: ೪೦ ವರ್ಷಗಳ ಈ ಬಂಧ!! "ವಿಜ್ಞಾನಕ್ಕೆ ಆರೆಸೆಸ್ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್ನ್ಯೂಸ್ ಎಂಬ ವೆಬ್ಸೈಟಿನ ಸುದ್ದಿ ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!!
"“ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್ “: ವರದಿಗಾರಿಕೆಯಲ್ಲೇ ಕಲಬೆರಕೆ!!"
ಮುಕ್ತ ಮತ್ತು ಕೇವಲ ಯುನಿಕೋಡ್ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್ ಜಗಲಿ’ಸ್ಥಾಪನೆಗೆ ಎಸ್ ಜಿ ಸಿದ್ಧರಾಮಯ್ಯ ಒಲವು
ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ನಡೆಸಿದ ಸಭೆಯಲ್ಲಿ ಪ್ರಕಟಿಸಿದ್ದಾರೆ. ಅಂದರೆ ಇನ್ನುಮುಂದೆ ನುಡಿ ತಂತ್ರಾಂಶವನ್ನು ಸಮುದಾಯದ ತಂತ್ರಜ್ಞರು ಸುಧಾರಿಸಬಹುದಾಗಿದೆ. ಹಳೆಯ ತಂತ್ರಾಂಶಗಳನ್ನೇ ಬಳಸುವುದಕ್ಕೆ ಕುಮ್ಮಕ್ಕು ಕೊಡುವ ಆಸ್ಕಿ ಫಾಂಟ್ಗಳನ್ನು ನಿರುತ್ತೇಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಧರಿಸಿರುವುದು ಒಂದು ಅತ್ಯುತ್ತಮ ಬೆಳವಣಿಗೆಯಾಗಿದೆ.
"ಮುಕ್ತ ಮತ್ತು ಕೇವಲ ಯುನಿಕೋಡ್ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್ ಜಗಲಿ’ಸ್ಥಾಪನೆಗೆ ಎಸ್ ಜಿ ಸಿದ್ಧರಾಮಯ್ಯ ಒಲವು"
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ ಹೀಗಿದೆ: ಮಾನ್ಯರೇ: ವಿಷಯ: ಯುನಿಕೋಡ್ ಬಳಕೆ ಅನುಷ್ಠಾನ ಮತ್ತು ಇತರೆ ಕನ್ನಡ ಮಾಹಿತಿ ತಂತ್ರಜ್ಞಾನ ಕುರಿತ ಬೇಡಿಕೆಗಳು
"ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ"Objective– To showcase that diesel automobile can be powered fully/partially by an alternate eco-friendly fuel- biodiesel blend without any modifications to the existing engine. This is in line with the ‘Swachh Bharat Abhiyan’ initiated by Government of India.
"ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!"
ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್ನಲ್ಲಿ ಭಾಗವಹಿಸಿ! ಅಬ್ದುಲ್ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
ಫೆಬ್ರುವರಿ ೧೭ರಿಂದ ೧೯ರವರೆಗೆ ನಡೆಯೋ ಈ ಎಕೋ ಡ್ರೈವಥಾನ್ನಲ್ಲಿ ನೀವು ಮಾಡಬೇಕಾದ್ದು ಇಷ್ಟೆ: ಬೆಂಗಳೂರಿನಿಂದ ಶೃಂಗೇರಿಗೆ (೩೩೩ ಕಿಮೀ) ಹಾಸನ ಮಾರ್ಗವಾಗಿ ಹೋಗುವುದು ಮತ್ತು ವಾಪಸು ಬರುವುದು. ಆದರೆ ಒಂದೇ ಒಂದು ಪ್ರಮುಖ ಶರತ್ತಿದೆ: ನಿಮ್ಮ ವಾಹನವು ೨೬೦೦ ಸಿಸಿ ಒಳಗಿನ ಡೀಸೆಲ್ ವಾಹನ ಆಗಿರಬೇಕು ಮತ್ತು ಅದರಲ್ಲಿ ಶೇಕಡಾ ೧೦,೨೦ ಅಥವಾ ೩೦ರಷ್ಟು ಜೈವಿಕ ಇಂಧನವನ್ನು ಡೀಸೆಲ್ಗೆ ಬೆರೆಸಿರಬೇಕು! ಇದಲ್ಲದೆ ಹಲವು ನಿಗದಿತ ಚೆಕ್ ಪಾಯಿಂಟ್ಗಳನ್ನು ಭೇಟಿ ಮಾಡಬೇಕು; ಹಾಸನದ ಮಡೇನೂರಿನಲ್ಲಿರುವ ಜೈವಿಕ ಇಂಧನ ಪಾರ್ಕ್ನಲ್ಲಿ ಜೈವಿಕ ಇಂಧನ ಸಸ್ಯಗಳನ್ನು ನೆಡಬೇಕು. ಶೃಂಗೇರಿಯಲ್ಲಿ ನಡೆಯುವ ಕ್ವಿಜ್ ಕಾರ್ಯಕ್ರಮದಲ್ಲಿಯೂ ಅಂಕ ಪಡೆಯಬೇಕು!
"ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್ನಲ್ಲಿ ಭಾಗವಹಿಸಿ! ಅಬ್ದುಲ್ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!"ಭಾರತದಲ್ಲಿ ಮಾರಾಟವಾಗುವ ಎಲ್ಲ ಐಟಿ ಸಾಧನಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸುವ ತಂತ್ರಾಂಶಗಳನ್ನು ಮಾರಾಟಕ್ಕೆ ಮೊದಲೇ ಅಳವಡಿಸಿರಬೇಕು ಎಂಬ ಒತ್ತಾಯವನ್ನು ಮಾಡಿದ ಆನ್ಲೈನ್ ಅರ್ಜಿಯನ್ನು ನಾನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ ಪ್ರಸಾದ್ ಅವರಿಗೆ ಇಂದು (೯ ಡಿಸೆಂಬರ್ ೨೦೧೬) ಹೊಸದಿಲ್ಲಿಯ ಎಲೆಕ್ಟ್ರಾನಿಕ್ಸ್ ಸದನದ ಅವರ ಕಚೇರಿಯಲ್ಲಿ ಖುದ್ದಾಗಿ ತಲುಪಿಸಿದೆ. ಈ ಅರ್ಜಿಗೆ ೪೭೫ ಜನರು ಸಹಿ ಹಾಕಿರುವುದನ್ನು ಅವರ ಗಮನಕ್ಕೆ ತಂದೆ. ಮಿತ್ರಮಾಧ್ಯಮ ಟ್ರಸ್ಟ್ ಮತ್ತು ಡೆವಲಪ್ಮೆಂಟ್ ಫೌಂಡೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾನು ಈ ಅರ್ಜಿಯನ್ನು ಹಲವು ನೀತಿ ನಿರೂಪಕರಿಗೆ ಸಲ್ಲಿಸಿದೆ.
"ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್ಲೈನ್ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ"