ಮೂರು ಜೈವಿಕ ಇಂಧನ ಹಾಡುಗಳು

1. ಜೈವಿಕ ಇಂಧನ ಚಿರಂತನ

 

ಹೊಂಗೆಯ ದೀಪವ ಹೊತ್ತಿಸಬನ್ನಿ

ಬೇವಿನೆಣ್ಣೆಯನು ಬಸಿಯುವ ಬನ್ನಿ

ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ

ಜೈವಿಕ ಇಂಧನ ಒಳ್ಳೆಯದಣ್ಣ

ಡೀಸೆಲ್ ಪೆಟ್ರೋಲ್ ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

ಬೀದಿಯ ಬದಿಯಲಿ ಬೆಳೆಯಲು ಬಹುದು

ಹೊಲಗಳ ಬದುವಲಿ ಬೆಳಯಲು ಅಹುದು

ಬೇವಿನ, ಹೊಂಗೆಯ, ಹಿಪ್ಪೆಯ ಮರಗಳ

ಬೆಳೆಸುವ ಕಾಯಕ ಒಳ್ಳೆಯದಣ್ಣ

ಬರಗಾಲಕ್ಕೆ ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

ನದಿಯ ದಡದಲ್ಲಿ, ಬೇಲಿಗೆ ಬದಲಿ

ಪಾಳು ಭೂಮಿಯಲಿ, ನಾಲೆಯ ಪಕ್ಕ

ಹೊಂಗೆಯ ಮರಗಳ ಬೆಳೆಯೋಣ

ಇಂಧನ ಕ್ರಾಂತಿಯ ಮಾಡೋಣ

ಆಮದು ಪೆಟ್ರೋಲ್ ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

ಬೇವಿನ ಬೀಜವೆ ಔಷಧವಾಗಿ

ಕಷಾಯ ಕೀಟನಾಶಕವಾಗಿ

ಬೇವಿನ ಮರವೇ ಕುರ್ಚಿಗಳಾಗಿ

ಬೇವಿನ ಕೃಷಿಯೇ ಸೋಜಿಗವಣ್ಣ

ಓಟದ ಬದುಕು ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

ಟಿಲ್ಲರ್, ಪಂಪ್ಸೆಟ್, ಜನರೇಟ್ರಲ್ಲಿ

ಬಸ್ಸು ರೈಲು ಟ್ರಾಕ್ಟರಿನಲ್ಲಿ

ಹೊಂಗೆಯ ಡೀಸೆಲ್ ಬಳಸಲೆ ಬಹುದು

ಇಂಧನ ಕ್ರಾಂತಿಯ ಮಾಡಲೆ ಬಹುದು

ಅರ್ಬನ್ ಕಲ್ಚರ್ ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

ಕೈಯಲಿ ತಿರುಗಿಸಿ, ಸೈಕಲ್ ಓಡಿಸಿ

ಜೈವಿಕ ಎಣ್ಣೆಯ ತೆಗೆಯುವ ಬನ್ನಿ

ಹಿಂಡಿಯನೆಲ್ಲ ಹೊಲಕ್ಕೆ ಹಾಕಿ

ಹೆಚ್ಚಿನ ಫಸಲನು  ಪಡೆಯುವ ಬನ್ನಿ

ಡೀಸೆಲ್ ಭ್ರಾಂತಿ ಎಷ್ಟು ದಿನ?

ಜೈವಿಕ ಇಂಧನ ಚಿರಂತನ !

 

2. ನಮ್ಮೂರ ಹೊಂಗೆಯ ಮರವೆ….

(ನಮ್ಮೂರ ಮಂದಾರ ಹೂವೆ ಧಾಟಿಯಲ್ಲಿ)

ನಮ್ಮೂರ ಹೊಂಗೆಯಾ ಮರವೆ

ನಿನ್ನೊಲುಮೆ ಇಂಧನದ ಚೆಲುವೆ

ಬೆಳಕಾಗಿ ಮನೆಯನು ಬೆಳಗು

ನಮ್ಮ ಬರಿದಾದ ಟ್ಯಾಂಕನ್ನು ತುಂಬು

ಬೆಳೆದಿರುವ ನೀನು, ಬಳಲಿರುವೆ ನಾನು

ಡೀಸೆಲ್ಲು ಮರೆಯಾದ ಯುಗದಿ

ನಿನ್ನನ್ನೆ ಬಳಸಿ, ಇಂಧನವ ಗಳಿಸಿ

ವಾಹನವಾ ಚಲಿಸುವೆನು ನಾನು

ನಮ್ಮೂರ ಸಿಮರೂಬ ಮರವೆ

ನೀನೆನ್ನ ನೆರಳಾಗಿ ಬರುವೆ

ಹಸಿರಾಗಿ ಬರಗಾಲ ನೀಗಿ

ನಮ್ಮ ಭೂತಾಯಿ ಬವಣೆಗಳ ಕಳೆವೆ

ಸವಕಳಿಯ ತಡೆದು, ಭೂಸಾರ ಹಿಡಿದು

ಬೆಳೆಗಳಿಗೆ ಹೊಸ ಜೀವ ಕೊಡುವೆ

ಇಂಧನವಾ ನೀಡಿ, ಬದುಕನ್ನೆ ಚಲಿಸಿ

ನಮಗೆಲ್ಲ ಮರುಜನ್ಮ ಕೊಡುವೆ

3. ದೇಶವ ಕಟ್ಟೋಣ

(ಜಾನಪದ ಧಾಟಿ)

ಹೊಂಗೆಯ ಬೆಳೆಯೋಣ|ನಾವು| ಹಿಪ್ಪೆಯ ಬೆಳೆಸೋಣ

ಬೇವನ್ನು ಬೆಳೆದು|ಸಿಮರೂಬ ನೆಟ್ಟು|

ಡೀಸೆಲ್ಲು ಪಡೆಯೋಣ|ನಾವು| ಡೀಸೆಲ್ಲು ಪಡೆಯೋಣ

ಡೀಸೆಲ್ಲು ಖಾಲಿಯಾಗಿ | ಪೆಟ್ರೋಲು ಇಲ್ಲವಾಗಿ

ಊರೆಲ್ಲ ವಾಹನ ನಿಂತಾಗ ನಾವು

ಟ್ರಾಕ್ಟರ್ರು ನಡೆಸೋಣ|ನಾವು ಬಸ್ಸನ್ನೆ ಓಡಿಸೋಣ

ಬರಗಾಲ ಬರದಂತೆ|ನಾವು|ಭರವಸೆಯಾಗೋಣ

ಬರಡೆಂಬ ಭೂಮೀಲಿ ಹೊಂಗೇಯ ಬೆಳೆದು

ಡೀಸೆಲ್ಲು ಎತ್ತೋಣ|ನಾವು ಹಸಿರನ್ನು ಬಿತ್ತೋಣ

ಸಂಾವ ಕಟ್ಟೋಣ|ನಾವು|ಒಟ್ಟಾಗಿ ಬೆಳೆಯೋಣ

ಜೈವಿಕ ಇಂಧನ ಪೂರೈಕೆ ಮಾಡಿ

ದೇಶಾವ ಕಟ್ಟೋಣ | ನಾವು | ನಾಡನ್ನು ಬೆಳೆಸೋಣ

ಜೈವಿಕ ಇಂಧನವಾ|ನಾವು|ಎಲ್ಲೆಲ್ಲೂ ಬಳಸೋಣ

ಪಾಳೆಂಬ ಭೂಮಿಯು | ಹಾಳೆಂಬ ಶಾಪವ

ನೀಗಿಸಿ ಬೆಳೆಯೋಣ|ನಾವು|ಹೊಂಗೇಯ ಬೆಳೆಯೋಣ

(ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದ ಬಳಿಯ ಗುಂಗರಗಟ್ಟಿಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವತಿಯಿಂದ ನಡೆದ ಜೈವಿಕ  ಇಂಧನ ಲೇಖಕರ ಕಾರ್ಯಾಗಾರದಲ್ಲಿ ಬರೆದ ಕವನಗಳು)

4 thoughts on “ಮೂರು ಜೈವಿಕ ಇಂಧನ ಹಾಡುಗಳು

  1. 1. ಒಳ್ಳೆ ಸರ್ಕಾರೀ ಜಾಹೀರಾತಿನ ಹಾಡು! ಜನರನ್ನ ಎಜುಕೇಟ್ ಮಾಡೋದಕ್ಕೆ ಸರಳ ಮತ್ತು attractive.
    2. ನಿಜ್ವಾಗ್ಲೂ ಅದೇ ರಾಗದಲ್ಲಿ ಓದಿಕೊಂಡು ಎಂಜಾಯ್ ಮಾಡುವಂತಾಯ್ತು 🙂
    3. ಈ ಮೂರು ತಲುಪಬೇಕಾದವರನ್ನ ತಲುಪಿದೆಯಾ? ರೈತರನ್ನ? ಹಾಗಾದ್ರೆ ಚೆಂದ…
    ಜೈವಿಕ ಇಂಧನ ಲೇಖಕರ ಕಾರ್ಯಾಗಾರ ಸಾರ್ಥಕ!! (kidding 🙂 )

Leave a Reply