ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಓಸಿಆರ್‌  (ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌: ಅಚ್ಚಾಗಿರುವ ಪಠ್ಯದ ಪುಟಗಳನ್ನು ಗಣಕದಲ್ಲಿ ಯುನಿಕೋಡ್‌ ಪಠ್ಯವಾಗಿ   ಪರಿವರ್ತಿಸುವ ತಂತ್ರಜ್ಞಾನ ಎಂದು ಸರಳವಾಗಿ ವಿವರಸಿಬಹುದು) ತಯಾರಕರ ಪ್ರಾತ್ಯಕ್ಷಿಕೆ, ಅಭಿಪ್ರಾಯ ಸಂಗ್ರಹ ಮತ್ತು ಸಂಬಂಧಿತ ತಂತ್ರಜ್ಞಾನ ಸಂಗತಿಗಳ  ಕುರಿತು ಒಂದು ಮಹತ್ವದ ಸಮುದಾಯ ಸಭೆಯು ೨೦೧೫ರ ಫೆಬ್ರುವರಿ ೭ರಂದು ಬೆ ಳಗ್ಗೆ ೧೧.೦೦ ಗಂಟೆಗೆ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಗೆ ಕನ್ನಡದ ಯುವ ತಂತ್ರಜ್ಞರು ಬಂದು ಸರ್ಕಾರಕ್ಕೆ ಸಮುದಾಯದ ಬೆಂಬಲ, ಸಹಾಯ, ತಾಂತ್ರಿಕ ನೆರವು,  ಎಲ್ಲವೂ ಇದೆ ಎಂಬುದನ್ನು ಪ್ರಕಟಿಸಲು ಕೋರುತ್ತಿದ್ದೇವೆ. ದಯವಿಟ್ಟು ಈ ನೋಂದಣಿ ಅರ್ಜಿಯನ್ನು ತುಂಬಿ; ಫೆಬ್ರುವರಿ ೭ರ ಸಭೆಗೆ ತಪ್ಪದೇ ಬನ್ನಿ. ಹೆಚ್ಚಿನ ವಿವರಗಳಿಗಾಗಿ ತಮಗೆಲ್ಲರಿಗೂ ಮಿಂಚಂಚೆ (ಈಮೈಲ್‌) ಕಳಿಸಲಾಗುವುದು. ಇದು ಓಸಿಆರ್‌ ಬಗ್ಗೆಯೇ ವಿಶೇಷವಾಗಿ ಕರೆದ ಸಭೆಯಾಗಿದ್ದು,  ಈ ಕುರಿತೇ ತಮ್ಮ ಅಭಿಪ್ರಾಯ ಬೇಕಾಗಿದೆ. ಈ ಹಿಂದೆ ಸರ್ಕಾರವು ಓಸಿಆರ್‌ ತಯಾರಿಕೆ ಕುರಿತಂತೆ ಕರೆದಿದ್ದ ಟೆಂಡರಿನ ಬದಲಿಗೆ ಈ ಯತ್ನದ ಮೂಲಕ ಪರಿಹಾರ ಹುಡುಕಲು ಯತ್ನಿಸಲಾಗುತ್ತಿದೆ.

ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ|| ಚಿದಾನಂದಗೌಡ, ಸದಸ್ಯರಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ|| ಚಂದ್ರಶೇಖರ ಕಂಬಾರ, ಸಮಿತಿಯ ಸದಸ್ಯರು, ಓಸಿಆರ್‍ ತಯಾರಿಸಿರುವ / ತಯಾರಿಸುತ್ತಿರುವ ಸಂಸ್ಥೆಗಳು, ಕನ್ನಡ ತಂತ್ರಾಂಶ ಕುರಿತ ಆಸಕ್ತ ತಂತ್ರಜ್ಞರು, ತಂತ್ರಜ್ಞಾನ ಸಂಘಟಕ/ಆಸಕ್ತ  ಸಮುದಾಯ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಇದು ನಮ್ಮ ತಿಳಿವಿನ ಮಟ್ಟಿಗೆ ಕರ್ನಾಟಕ ಸರ್ಕಾರವು ಹೀಗೆ ಸಮುದಾಯದೊಂದಿಗೆ ಚರ್ಚಿಸಲು ಕರೆದಿರುವ ಮೊದಲ ಸಭೆ. ಆದ್ದರಿಂದ ಈ ಸಭೆಗೆ ಸಂಬಂಧಿತ ತಜ್ಞರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿ  ವಿನಂತಿ.  ಸಭೆಯ ಇತರೆ ವಿವರಗಳನ್ನು ಕ್ರಮೇಣವಾಗಿ ಇಲ್ಲಿ ಮತ್ತು ಇತರೆ ಆನ್‌ಲೈನ್‌ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು. 

  1. ಬೇಳೂರು ಸುದರ್ಶನ  
  2. ಡಾ|| ಸಿ ಎಸ್‌ ಯೋಗಾನಂದ 
  3. ಶ್ರೀ ಆನಂದ್‌, ಸೈಬರ್‌ಸ್ಕೇಪ್‌ 
  4. ಶ್ರೀ ಎನ್‌ ಎ ಎಂ ಇಸ್ಮಾಯಿಲ್‌
  5. ಶ್ರೀ ಟಿ ಜಿ ಶ್ರೀನಿಧಿ 
  6. ಶ್ರೀ ಓಂಶಿವಪ್ರಕಾಶ್‌ 
  7. ಡಾ|| ಸತ್ಯನಾರಾಯಣ 
  8. ಶ್ರೀ ಟಿ ಎಸ್‌ ಶ್ರೀಧರ 
  9. ಶ್ರೀ ಹರಿಪ್ರಸಾದ್‌ ನಾಡಿಗ್‌

(ಸರ್ಕಾರದಿಂದ ಈ ಸಭೆಯನ್ನು ಸಂಘಟಿಸಲು ಹೊಣೆಗಾರಿಕೆ ವಹಿಸಿಕೊಂಡಿರುವ ಕನ್ನಡ ತಂತ್ರಾಂಶ ಕುರಿತ ಸಾಮಾಜಿಕ ಕಾರ್ಯಕರ್ತರು).

ಸಭೆಯಲ್ಲಿ ಭಾಗವಹಿಸಲು ದಯವಿಟ್ಟು  ಈ ಅರ್ಜಿಯನ್ನು ತುಂಬಿರಿ.

Leave a Reply