ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ

ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
ಬಾ ಹುಡುಗಿ ಕೊಡುವೆ ನಿನಗೆ.
ನನ್ನ ದುಃಖದ ಜಾಡು ಕಡಿದು ತಂದಿರುವೆ
ನಡೆದುಬಿಡು ಒಂದು ಗಳಿಗೆ.

ಹುದುಗಿರೋ ಗತಬಿಂದುಗಳನ್ನ
ಪೋಣಿಸುವೆ ಸರದ ಹಾಗೆ.
ತೊಡಿಸುವೆನು ಹೀಗೆ ನಿನ್ನೆದೆ ತುಂಬ
ಇರಲಿಬಿಡು ನೆನಪು ಕೊಡುಗೆ.

ನನ್ನ ಒಂದೇ ಭುಜವ ಹೀಗೆ ತಟ್ಟುವೆಯೇನೆ
ಹಗುರವಾಗುವೆ ನಿನ್ನ ಜತೆಗೆ.
ಕೊಂಚ ಎಡವಿದರೂನು ನಡೆಯುವೆನು
ನಿನ್ನೆದುರು ಬರದ ಹಾಗೆ.

ಎಂಥ ಗೆಲುವಿದೆ ನಿನ್ನ ಕಣ್ಣುಗಳಲ್ಲಿ
ಕೊಡುವೆಯಾ ಹೇಳು ಪ್ರೀತಿ
ಅಲ್ಲಿ ಕಲ್ಲಿನ ಮೇಲೆ ಕುಳಿತೇ
ಅಳೆಯೋಣ ಮುಸ್ಸಂಜೆಯ ಗತಿ.

Leave a Reply