ಹಿತ್ತಲ ಗಿಡ ಮದ್ದಲ್ಲ

ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ನಾಣ್ಣುಡಿಯ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ. ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ  ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ. ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಗಾಯಕ್ಕೆ ಸೂಕ್ತವಾಗ ಔಷಧವನ್ನು ಹಚ್ಚುವುದೇ ಸರಿಯಾದ ಮಾರ್ಗ. 

ಹಾಗೆಯೇ ಬದುಕಿನಲ್ಲಿ ನಾವು ಎದುರಿಸುವ ಹಲವು ಸಮಸ್ಯೆಗಳಿಗೆ  ನಾವು ತಾತ್ಕಾಲಿಕ ಪರಿಹಾರವನ್ನು ಹುಡುಕುವುದು ಸರಿಯಲ್ಲ ಎಂಬುದೂ ಈ ಗಾದೆಯ ಅರ್ಥ. ಉದಾಹರಣೆಗೆ ಹಣದ ಸಮಸ್ಯೆ ಬಂದಾಗ ತಕ್ಷಣ ಸಾಲ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ ದುಡಿದು ಸಂಪಾದಿಸುವುದೇ ಹಣದ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಉತ್ತರವಾಗಿದೆ. ಹೀಗೆ ನಾವು ಬದುಕಿನಲ್ಲಿ ಹಠಾತ್ ನಿರ್ಧಾರಗಳನ್ನು ಮಾಡುವ ಬದಲು ಖಾಯಂ ಪರಿಹಾರಕ್ಕಾಗಿ ಪ್ರಯತ್ನಿಸಬೇಕು. ಕೈಗೆ ಸಿಕ್ಕಿದ್ದೇ ಪರಿಹಾರ ಎಂದುಕೊಳ್ಳಬಾರದು.

Please follow and like us:

0 thoughts on “ಹಿತ್ತಲ ಗಿಡ ಮದ್ದಲ್ಲ

  1. ನಮಸ್ತೆ
    “ಹಿತ್ತಲ ಗಿಡ ಮದ್ದಲ್ಲ” ಇದರ ಅರ್ಥ ನೀವಂದಂತೆ ಅಲ್ಲ ಅನಿಸ್ತದೆ ಸರ್ , ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ ….ಉದಾಹರಣೆಗೆ ನಮ್ಮೂರಲ್ಲೇ ಇರುವ ಕವಿ/ಕವಯತ್ರಿಯರು,ನಾಟಕಕಾರರು,ಕಲಾವಿದರು ನಮಗೆ ಕಾಣಿಸೋದೆ ಇಲ್ಲ,ಅದೇ ಬೇರೆ ಊರಿನವರಾದರೆ ತುಂಬ ಒಳ್ಳೆಯವರೆನಿಸುತ್ತಾರೆ,ನಮಗೆ ಹತ್ತಿರವಿರುವ ಕಾರ್ಕಳದ ಗೊಮ್ಮಟೇಶ್ವರ ಬೆಟ್ಟಕ್ಕೆ 12 ವರ್ಷಕ್ಕೊಮ್ಮೆ ಮಹಾಮಸ್ತಕಾಬಿಷೆಕಕ್ಕೆಮಾತ್ರ ನಾವು ಹೋಗೋದು,ಅದೇ ದಿನಂಪ್ರತಿ ಬರುವ ಪ್ರವಾಸಿಗರನ್ನು ನೋಡಿದರೆ ಏನಿದೆ ಅಲ್ಲಿ ಅನಿಸ್ತದೆ, ಈ ಅರ್ತದಲ್ಲಿಯೇ ಹುಟ್ಟಿದ ಗಾದೆ ” ಹಿತ್ತಲ ಗಿಡ ಮದ್ದಲ್ಲ”!

Leave a Reply