ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು

ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್‌ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್‌ ಜಿ ಸಿದ್ಧರಾಮಯ್ಯನವರು ನಡೆಸಿದ ಸಭೆಯಲ್ಲಿ ಪ್ರಕಟಿಸಿದ್ದಾರೆ. ಅಂದರೆ ಇನ್ನುಮುಂದೆ ನುಡಿ ತಂತ್ರಾಂಶವನ್ನು ಸಮುದಾಯದ ತಂತ್ರಜ್ಞರು ಸುಧಾರಿಸಬಹುದಾಗಿದೆ. ಹಳೆಯ ತಂತ್ರಾಂಶಗಳನ್ನೇ ಬಳಸುವುದಕ್ಕೆ ಕುಮ್ಮಕ್ಕು ಕೊಡುವ ಆಸ್ಕಿ ಫಾಂಟ್‌ಗಳನ್ನು ನಿರುತ್ತೇಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಧರಿಸಿರುವುದು ಒಂದು ಅತ್ಯುತ್ತಮ ಬೆಳವಣಿಗೆಯಾಗಿದೆ. Please follow and like us:

"ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು"

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ ಹೀಗಿದೆ: ಮಾನ್ಯರೇ: ವಿಷಯ: ಯುನಿಕೋಡ್‌ ಬಳಕೆ ಅನುಷ್ಠಾನ ಮತ್ತು ಇತರೆ  ಕನ್ನಡ ಮಾಹಿತಿ ತಂತ್ರಜ್ಞಾನ ಕುರಿತ ಬೇಡಿಕೆಗಳು Please follow and like us:

"ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ"

ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.

ಬಗೆಬಗೆಯ ಯುನಿಕೋಡ್‌ ಅಕ್ಷರಗಳಲ್ಲಿ ಮುಕ್ತ ಮತ್ತು ಉಚಿತ ಡಿಟಿಪಿ ತಂತ್ರಾಂಶಗಳನ್ನು ಬಳಸಿ ಯಾವುದೇ ಹಿಂಜರಿಕೆಯಿಲ್ಲದೆ ಕನ್ನಡದಲ್ಲೇ ಪುಟವಿನ್ಯಾಸ ಮಾಡಬಹುದು ಎಂಬ ಹೊಸ ಬೆಳವಣಿಗೆ ನಮಗೆಲ್ಲರಿಗೂ ಸಂತೋಷ ತರಬೇಕಾದ ವಿಚಾರವಾಗಿದೆ. ಸ್ಕ್ರೈಬಸ್‌ ಎಂಬ ಮುಕ್ತ ಡಿಟಿಪಿ ವಿನ್ಯಾಸ ತಂತ್ರಾಂಶದಲ್ಲಿ ಕನ್ನಡದ ಯುನಿಕೋಡ್‌ ಅಕ್ಷರಗಳನ್ನು ಬಳಸಿ, ವಿನ್ಯಾಸ ಮಾಡಿದ ನನ್ನದೇ ಅನುಭವದ ಆಧಾರದಲ್ಲಿ ಹೇಳುವುದಾದರೆ: ಇನ್ನುಮುಂದೆ ಪೇಜ್‌ಮೇಕರ್‌ನಂತಹ ಕಾಲಬಾಹಿರ ತಂತ್ರಾಂಶವೂ ಬೇಡ;ಇನ್‌ಡಿಸೈನ್‌ನಂತಹ ದುಬಾರಿ ವಿನ್ಯಾಸ ಸಾಧನವೂ ಬೇಡ ಎಂದು ನಾವು ನಿರ್ಧರಿಸಬಹುದಾಗಿದೆ. ಸ್ಕ್ರೈಬಸ್‌ ತಂತ್ರಾಂಶವು ನಮ್ಮನ್ನು ಖಾಸಗಿ ಸಂಸ್ಥೆಗಳ ಲೈಸೆನ್ಸ್‌ ರಾಜ್ಯದ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದೆ. ಈ ಉತ್ತೇಜನಕಾರಿ ಬೆಳವಣಿಗೆಯು ಕನ್ನಡ ತಂತ್ರಾಂಶಗಳ ಸಂಶೋಧನೆಗಳ ಮುಂದಿನ ಹಾದಿಗೂ ಹಲವು ಮಹತ್ವದ ಸಂದೇಶಗಳನ್ನು ನೀಡಿದೆ. Please follow and like us:

"ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ."

ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!

ಸವಿನೆನಪುಗಳು ಒಂದೇ ಎರಡೇ! Please follow and like us:

"ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!"

`ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ

ಸುಮಾರು ೨೭೦೦ ವರ್ಷಗಳ ಹಿಂದೆ `ನಿರುಕ್ತ’ ಬರೆದ ಸಂಸ್ಕೃತ ನಿಘಂಟುಕಾರ ಯಾಸ್ಕರಿಗೂ, ೨೪೦೦ ವರ್ಷಗಳ ಹಿಂದೆ ಅಣುಸಿದ್ಧಾಂತವನ್ನು ಬೋಧಿಸಿದ ಗ್ರೀಕ್ ತತ್ವಜ್ಞಾನಿ ಎಪಿಕ್ಯೂರಸ್‌ಗೂ, ೨೦೦೦ ವರ್ಷಗಳ ಹಿಂದೆ ‘ಡಿ ರೆರಮ್ ನೇಚುರಾ (ಸರಳಗನ್ನಡದಲ್ಲಿ `ವಸ್ತುಗಳ ಗುಣಗಳ ಕುರಿತು’ ಎನ್ನಬಹುದೇನೋ..) ಕಾವ್ಯವನ್ನು ಬರೆದ ಲ್ಯೂಕ್ರಿಶಿಯಸ್‌ಗೂ, ಐನೂರು ವರ್ಷಗಳ ಹಿಂದೆ ಬಾಳಿದ ಪೋಗ್ಗಿಯೋ ಬ್ರಾಶಿಯೋಲಿನಿಗೂ … ಯುರೋಪಿನ ನವೋದಯಕ್ಕೂ (ರಿನೈಸಾನ್ಸ್)… Please follow and like us:

"`ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ"

ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!

ನನ್ನ ಹಳೆಯ ಕಾಗದದ ನೋಂದಣಿ ಇತ್ಯಾದಿ ದಾಖಲೆಗಳನ್ನು ಜೋಡಿಸಲೆಂದು ನಾಗಂದಿಗೆಯ ಮೇಲಿನ ‘ಹರಗಣ’ವನ್ನು ಕೆಳಗಿಳಿಸಿದೆ. ಕಂಪ್ಯೂಟರನ್ನು ಸ್ಮಾರ್ಟ್‌ ಟಿವಿಗೆ ಜೋಡಿಸಿ ಯೂಟ್ಯೂಬ್‌ ಹಚ್ಚಿ ಸುಲ್ತಾನ್‌ ಖಾನ್‌ ಆಲ್ಬಮ್‌ನ್ನು ಶುರು ಮಾಡಿದೆ. ಇದ್ದ ಐದಾರು ಕಾಗದದ ರಾಶಿಗಳಲ್ಲಿ ಮೊದಲ ಹತ್ತೇ ನಿಮಿಷದಲ್ಲಿ ನನಗೆ ೨೦ ವರ್ಷಗಳಿಂದ ಸಿಗದಿದ್ದ ಮದ್ರಾಸು ವಿವಿ ಗಣಿತ ಪದವಿಯ ಮೊದಲ ವರ್ಷದ ಅಂಚೆ ತೆರಪಿನ ಕೋರ್ಸಿನ ಒರಿಜಿನಲ್‌ ಅಂಕಪಟ್ಟಿ ಸಿಕ್ಕಿತು! ಅದಾಗಿ ಅಗೆದಂತೆ ನಾನು ಹಾಕಿದ್ದ ಕಾರ್ಮಿಕ ಕೇಸಿನ ದಾವೆಯೂ, ಅದರ ತೀರ್ಪೂ ಸಿಕ್ಕಿದವು; ನಾನು ಮುಳಬಾಗಿಲಿನಲ್ಲಿ ಎದುರಿಸಿದ್ದ ಮಾನಹಾನಿ ಮೊಕದ್ದಮೆ ಕೇಸಿನ ತೀರ್ಪೂ ಸಿಕ್ಕಿತು. ಇದಿಷ್ಟೇ ಆಗಿದ್ದರೆ ನಾನು ಈ ಬ್ಲಾಗ್‌ ಬರೆಯುತ್ತಿರಲಿಲ್ಲ! Please follow and like us:

"ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!"

ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ

೧೯೮೭ರಿಂದ ೨೦೦೭ರವರೆಗೆ ಹತ್ತಿರವಿದ್ದೂ ದೂರ ನಿಂತ ಕಟು ಅನುಭವ. ೨೦೦೭ರಿಂದ ನಿನ್ನೆವರೆಗೆ ಮಧುರ ನೆನಪುಗಳ ಸಾಲು. ಇಂಥ ಕಟುಮಧುರ ಸಹವಾಸದ ಭಾಗ್ಯವನ್ನು ಕೊಟ್ಟ ಶ್ರೀ ಮೈ ಚ ಜಯದೇವರು ಇನ್ನಿಲ್ಲ. Please follow and like us:

"ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ"

ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ

  ತಾವೀಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದೀರಿ. `ಈ ಪ್ರಶಸ್ತಿಯು ನನ್ನ ಸಂಘಟನೆ ಮತ್ತು ಕಾರ್ಯಕರ್ತರಿಗೆ ಸೇರಿದ್ದು‘ ಎಂದು ಆಗಲೇ ತಿಳಿಸಿದ್ದೀರಿ. ಇಷ್ಟಾಗಿಯೂ ವೈಯಕ್ತಿಕವಾಗಿ ನಿಮಗೆ ಈ ಪ್ರಶಸ್ತಿ ಬಂದ ಕ್ಷಣ ಏನನ್ನಿಸಿತು?  ನನಗೆ ಪ್ರಶಸ್ತಿ ಬರುವುದು ತಿಳಿದಾಗ ನನಗೆ ಸಂಸ್ಕೃತ ಭಾರತಿಯ ಕಾರ್ಯಕರ್ತರು ಮಾಡಿದ ಕೆಲಸ, ಅದರಲ್ಲೂ  ವಿಶೇಷವಾಗಿ ಆರಂಭದ ದಿನಗಳಲ್ಲಿ ಶ್ರೀ ಜನಾರ್ಧನ ಹೆಗಡೆ, ಶ್ರೀ ವಿಶ್ವಾಸ, ಶ್ರೀ ವಸುವಜ್‌  ಮುಂತಾದ ಕಾರ್ಯಕರ್ತರು ಕೈಗೊಂಡ ಅವಿರತ ಶ್ರಮ ನೆನಪಾಯ್ತು. ಈ ಪ್ರಶಸ್ತಿಯು ನಿಜಕ್ಕೂ ಇವರೆಲ್ಲರ ತಪಸ್ಸಿನ ಪರಿಣಾಮವೇ ಹೌದು. ಆರಂಭದಲ್ಲಿ ನನಗೆ ಈ ಪ್ರಶಸ್ತಿ ತೆಗೆದುಕೊಳ್ಳುವ ಬಗ್ಗೆ ಸಮ್ಮತಿ ಇರಲಿಲ್ಲ. ನಾನಂತೂ ಕಳೆದ ೨೦ ವರ್ಷಗಳಿಂದ ಯಾವುದೇ ಪುರಸ್ಕಾರಗಳನ್ನೂ ಪಡೆಯುತ್ತಿರಲಿಲ್ಲ. ಪದ್ಮಶ್ರೀ ಕುರಿತು  ಹಿರಿಯರ…

"ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ"

ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!

Objective– To showcase that diesel automobile can be powered fully/partially by an alternate eco-friendly fuel- biodiesel blend without any modifications to the existing engine. This is  in  line with the  ‘Swachh Bharat Abhiyan’ initiated by Government of India. Please follow and like us:

"ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!"