ಊಹೆಗಳು

ಕಾನು ಕತ್ತಲು ಬತ್ತಿ, ಧಗೆಯ ಬಿಗಿ ಹಗುರಾಗಿ, ಹೊಗೆ ಮಂಜು ಹರಡುತ್ತ ; ನೆತ್ತಿಯ ಪಕ್ಕ ಎದ್ದಿರುವ ಬೆಳ್ಳಿ ಚುಕ್ಕೆ ; ನೋಡುವಳು ಅವಳು ಹೊರಗೆ ಕಟ್ಟೆಯ ಮೇಲೆ ಕೂಡುವಳು ಹೂವ ಕಡೆಗೆ ಚಿಗುರು ನಾಚಿಕೆಯಲ್ಲಿ ಅರಳುತ್ತ, ಯೌವ್ವನದಲ್ಲಿ ನರಳುತ್ತ ; ಎಲೆಯ ತುಟಿ ತುದಿಯಲ್ಲಿ ಹನಿ. ಹನಿಯ ಮೌನದ ಬಗ್ಗೆ ಹಾಡುತ್ತ ಅಲ್ಲಿ ಅಂಗಳದಲ್ಲಿ ; ನಡೆಯುತ್ತ ನೆನಪಿನಲ್ಲಿ ಅವಳು ಕಾಯುವಳೇನೋ..ನೆನಪೊಳಗೆ ನನ್ನ ಮುತ್ತಿನ ಹೊತ್ತು ಬರುವುದನ್ನ. ಬಳೆ ಸರಿಸಿ ಬೆರಳುಗಳ ಮೇಳವಿಸಿ ತನ್ನ ಹಿಂಗೈ ಮೇಲೆ ತುಟಿಯೊತ್ತಿ ತುಡಿವುದನ್ನ. ದಾರಿಗಳ ದೂರ ಹೇಳಿದರೆ ಜಾರುವಳು ಎದೆಯೊಳಗೆ ನಡುಗುವಳು ಛಳಿ ಹಿಡಿದ ನಕ್ಷತ್ರದಂತೆ. ಈ ಬಾರಿ ಮತ್ತೆ ಹೇಳಿದಳು “ ಕಾಗದದೊಳಗೆ ಸುಡುಮುತ್ತು ಇಡಬೇಡ…

"ಊಹೆಗಳು"

ನಾಳೆ ಬರಬಹುದೇ ?

ನಿನ್ನ ಗುರ್ತಿದೆ ನನಗೆ ಎದೆ ಕಳಚಿ ನಡೆದವಳೆ ಸ್ವಪ್ನಸೂಕ್ಷ್ಮದ ಸಮಯ ಬೇಡವೆಂದೆ. ಅಪಮುಹೂರ್ತದ ಹೊತ್ತು ಕಳೆದೆ ಮುತ್ತಿನ ಗುರ್ತು ಕೆನೆಮಾತು, ತುಟಿಗೀತ ತೊರೆದುಬಿಟ್ಟೆ ಸಾಲುಬೆಟ್ಟದ ನೆರಳುಸಂಜೆಗೆ ಮುನ್ನ ಕಡಿದಿದ್ದೆ ಬೆರಳು- ದಿಕ್ಕುಗಳು ತೆಕ್ಕೆಮುಕ್ಕೆ. “ಹೆಜ್ಜೆ  ಹಿತವಿಲ್ಲ ಸಖ, ನಿನ್ನ ಜತೆ ಸಾಕು” ಹೌದು ಬಿಡು ಎದೆ ಕವಾಟಕ್ಕೆ ಧಕ್ಕೆ. ಏಕಾಂತದೆದೆ ಕೊಟ್ಟು ಹೋಗಿಬಿಟ್ಟೆಯ ಹುಡುಗೀ ಹಣೆಗೆ ನೆನಪಿದೆ ಹೂವು ನಿನ್ನ ಗಲ್ಲ. ಆ ದಿನಾಂತದ ಗಳಿಗೆ ಈ ಸುಗಂಧದ ಹೆರಳು ಅಯ್ಯೊ ಅಂಗೈ ತೊರೆದು ಹಾರಿತಲ್ಲ ? ಹಾಗೆಯೇ ಇರಬಹುದೆ ಹೇಳಬಾರದ ನೋವು ಹೇಳಿಬಿಡು ಗೆಳತೀ ನಾಳೆ ಬರಬಹುದೇ – ನನ್ನ ಕಣ್ತೆರೆ ಸರಿಸಿ ನೀನು ಹೊರಟಾಗ ? ನಿನ್ನ ನೆನಪೇ ನಾಳೆ ಬೇಡವೆಂದಾಗ ?…

"ನಾಳೆ ಬರಬಹುದೇ ?"

ಹಾಡು

ನನಗೆ ಹಾಡು ಕಚಗುಳಿಯಿಟ್ಟು ಕೇಳುವುದಿಷ್ಟ ಸ್ಪಷ್ಟ ಪದಗಳ ಕಟ್ಟು ನನಗೆ ಹಾಡು. ನೀನೂ ಹಾಡು ದನಿ ಹರಿಸುವುದಿಷ್ಟ ಕಷ್ಟವಿದೆಯೇ ಹೇಳು ? ನೀನು ಹಾಡು. ಅವಳು ಹಾಡು ತನಿ ಬೆರೆಸಿ ಎರೆಯುವಳಲ್ಲ ನಷ್ಟವಿದೆಯೇ ಹಾಡು ? ಅವಳು ಹಾಡು. ಅವರು ಹಾಡು ಹಂದರದಲ್ಲಿ ಬೆಳೆದದ್ದು ದಿಟ- ಬಯಕೆಗಳು. ಸತ್ಯವೇ ಅವರ ಹಾಡುಗಳು. ನಾವು ಹಾಡುಗಳು ಇಲ್ಲ ಎಂದವರಲ್ಲ ನಮಗಿಷ್ಟ ನಾವು ಹಾಡುಗಳು. Please follow and like us:

"ಹಾಡು"

ಓದಬೇಡ

ನನ್ನ ಕವನ ಓದಬೇಡ ಯಾಕೆ ಗೊತ್ತ ಹುಡುಗೀ ಅಕ್ಷರಗಳ ಆಟದಲ್ಲಿ ನಾನು ಇರುವುದಿಲ್ಲ. ಪದಗಳಲ್ಲಿ ಪವನಪತ್ರ ನೋಡಿ ನಲಿಯಬೇಡ ನದಿ ಹರಿಸುವೆ, ನಾನು ತೇಲಿ ಬರುವುದಿಲ್ಲ. ಯಾವುದೋ ವಿಷಾದಗಾನ ಎದೆಯ ತೀಡಿದಾಗ ಸಖೀ ನೆಲದ ಮೇಲೆ ಮಲಗುವಾಸೆ ಅದೂ ನಡೆವುದಿಲ್ಲ. ಎಲ್ಲಿಯೋ ಕಳೆದ ನೆನಪು ಎದೆಯ ತುಂಬಿದಾಗ ಈಗ ಬಿಲ ಸೇರುವ ಬಯಕೆ ಗೊತ್ತ, ಬಯಲೆ ಇಲ್ಲಿ ಎಲ್ಲ ? ಅವರ ಇವರ ಮಾತುಗಳಿಗೆ ಕಥೆ ಕಟ್ಟುವೆ ಸುಮ್ಮನೇ ಗೀತೆಗಳಿಗೆ ಪೊಳ್ಳುಹರುಷ ತುಂಬಲೆಣಿಸಿ ಇಷ್ಟು. ಹುಸಿಗನಸಿನ ಅರಮನೆಯಲಿ ಸುತ್ತುವುದೂ ಸುಮ್ಮನೇ ಬಿಸಿಯೇರದ ಭಾವಗಳಿಗೆ ಕೃತಕತೆಗಳ ಕಟ್ಟು. ಇದೇ ಕವನ, ಇದೇ ರಾಗ, ಇದೂ ಅದೇ ದಹನ. ಇದೇ ಮಾತು, ಇದೇ ಮೌನ, ನಾನೇ ಇಲ್ಲಿ ಕವನ.…

"ಓದಬೇಡ"

ನಾಳೆಯೇ ಮುಂಜಾನೆ

ಧುಮ್ಮಿಕ್ಕದಿರು ಹುಡುಗಿ ರಭಸ ಗೆಲ್ಲದು ನಿನ್ನ ಎದೆಗೆ ಒಬ್ಬಂಟಿತನ ಕೆಲವು ಸಂಜೆ. ತಟದಲ್ಲಿ ನಡೆವಾಗ ಕಣ್ಣು ತೀಡಲಿ ಗಾಳಿ ತೇಲಿಬಿಡು ವೇದನೆಗಳ ತಡವರಿಸದಿರು ಇನ್ನು ಕೆಲವೇ ಹೊತ್ತು ಕಾದಿರಿಸು ಕಾಮನೆಗಳ. ತುಟಿಯಲ್ಲಿ ತುಡಿವ ನೂರು ಏಕಾಂತಗಳು ಹಣೆಗೆ ಮುತ್ತಿಡುವಂಥ ಕಟು ದುಃಖಗಳು ಬರಲಿ ಬರಲೀ ಹುಡುಗಿ……..ಬರಲಿ ಜಾರಿಹೋಗಲಿ ನೆನಪು ಕಮರಿಯಲ್ಲಿ. ಬೆಚ್ಚಗೆ ಸುಡುವ ಹುಡುಗರು ಇರಲಿ ಸುಖಶಿಖರ ತಿವಿಯಲಿ ನಿನ್ನ ಬೆವರಿಗೆ ಬಿದ್ದು ಅಂಗೈಗಳು ನಡುಗಲಿ ಸಹನೆ ಮೀರದೆ ನಿಲ್ಲು ಕೆಲವೆ ಹೊತ್ತು. ಕಾಲಕ್ಕೆ ತುಟಿಯಿದ್ದು ಒಂದಷ್ಟು ಜೀವವೂ ನಿನಗೆ ಸ್ಪಂದಿಸುವಂಥ ಅನುರಣನ ಭಾವವೂ ಇದ್ದಿದ್ದರಾಗಿತ್ತು ಸೌಗಂಧಿಯೇ …. ಚಳಿಗೆ ತಲ್ಲಣಗೊಂಡ ಪಾರಿವಾಳವೆ ಕೇಳು ನಡುಗದಿರು ನಕ್ಷತ್ರವೇ … ಧುಮ್ಮಿಕ್ಕದಿರು-ರಭಸ ಗೆಲ್ಲದು-ಒಬ್ಬಂಟಿತನ-ಕೆಲವು ಸಂಜೆ. ನಾಳೆಯೇ ಮುಂಜಾನೆ…

"ನಾಳೆಯೇ ಮುಂಜಾನೆ"

ದ್ವೇಷದ ಹಾದಿ

ದ್ವೇಷದ ಹಾದಿ ಗೊತ್ತ ಬಾ ಹೇಳಿಕೊಡುತ್ತೇನೆ ಹೇಗೆ ಸಿಗರೇಟು  ಸುಡುತ್ತ ಕರಗಿಸುತ್ತೆ ನೋವನ್ನು ಫುಟ್‌ಪಾತ್ ಕಳಕೊಂಡಿದೆ ಸೂಕ್ಷ್ಮತೆಯನ್ನ ಲಕ್ಷ ಲಕ್ಷ ಹೆಜ್ಜೆಗಳಿಂದ ಮೆಟ್ಟಿಸಿಕೊಂಡು ಗೊತ್ತೇನೇ ಸಮುದ್ರೋಪಾದಿಯಲ್ಲಿ ಹರಡಿದ ಸುಖದ ಕಣಗಳೆಲ್ಲ ದ್ವೇಷದ ಹೊಗೆಯೊಳಗಿಂದ ಮೂಡಿವೆ ಹೇಳಿಕೊಡುತ್ತೇನೆ ಬಾ ಇಲ್ಲಿ ಈ ಎದೆಕಟ್ಟೆ ಮೇಲೆ ಕೂತುಕೋ ಕೇಳು. ಸಹಸ್ರಾರು ಕ್ಷಣಗಳ ಕೆಳಗೆ ನಾನು ಈ ಮರದೊಳಗೆ ಬೇರಾಗಿದ್ದೆ ಒಳಗೊಳಗೇ ಬೀಜ ಬಿಡುವ ಹಣ್ಣಾಗಿದ್ದೆ ಪ್ರೀತಿಯ ಬಲೆ ಹೊಸೆವ ಕರುಣೆಯ ಹಣೆ ಮುತ್ತಿಡುವ ಅಕ್ಕರೆಯ ಹಾಸಿ ಹೊದೆಸುವ ಹಸಿರೆಲೆಯಾಗಿದ್ದೆ ಕೇಳು. ಈಗಷ್ಟೆ ಬಿದ್ದ ಮಳೆಯಲ್ಲಿ ಯಾವ ದುಷ್ಟ ನಕ್ಷತ್ರದ ಕಣ್ಣಿತ್ತೋ ಈಗಷ್ಟೇ ಬೀಸಿದ ಗಾಳಿಯಲ್ಲಿ ಎಂಥ ಕೇಡುಮಣ್ಣಿತ್ತೋ ಈಗಷ್ಟೇ ಬಿದ್ದ ಆಲಿಕಲ್ಲಿನಲ್ಲಿ ಎಂಥ ಕಟುವಿಷವಿತ್ತೋ ಯಾವ ಹೊತ್ತೋ ಗೊತ್ತಿಲ್ಲ…

"ದ್ವೇಷದ ಹಾದಿ"

ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ

ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ ಬಾ ಹುಡುಗಿ ಕೊಡುವೆ ನಿನಗೆ. ನನ್ನ ದುಃಖದ ಜಾಡು ಕಡಿದು ತಂದಿರುವೆ ನಡೆದುಬಿಡು ಒಂದು ಗಳಿಗೆ. ಹುದುಗಿರೋ ಗತಬಿಂದುಗಳನ್ನ ಪೋಣಿಸುವೆ ಸರದ ಹಾಗೆ. ತೊಡಿಸುವೆನು ಹೀಗೆ ನಿನ್ನೆದೆ ತುಂಬ ಇರಲಿಬಿಡು ನೆನಪು ಕೊಡುಗೆ. ನನ್ನ ಒಂದೇ ಭುಜವ ಹೀಗೆ ತಟ್ಟುವೆಯೇನೆ ಹಗುರವಾಗುವೆ ನಿನ್ನ ಜತೆಗೆ. ಕೊಂಚ ಎಡವಿದರೂನು ನಡೆಯುವೆನು ನಿನ್ನೆದುರು ಬರದ ಹಾಗೆ. ಎಂಥ ಗೆಲುವಿದೆ ನಿನ್ನ ಕಣ್ಣುಗಳಲ್ಲಿ ಕೊಡುವೆಯಾ ಹೇಳು ಪ್ರೀತಿ ಅಲ್ಲಿ ಕಲ್ಲಿನ ಮೇಲೆ ಕುಳಿತೇ ಅಳೆಯೋಣ ಮುಸ್ಸಂಜೆಯ ಗತಿ. Please follow and like us:

"ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ"

ನಿನ್ನ ಹುಡುಕಿದ ಮೇಲೆ

 ನಿನ್ನ ಹುಡುಕಿದ ಮೇಲೆ ನನಗೆಷ್ಟೋ ಸಮಾಧಾನ. ನನ್ನನ್ನೆ ನಾನು ಹುಡುಕಿದ ಹಾಗೆ. ನಿನ್ನನ್ನೇ ನಿನಗೆ ತೋರಿಸಿದ ಹಾಗೆ. ನಾನೇನಂಥ ಕನ್ನಡಿಯಲ್ಲ ಬಿಡು ಬಿಂಬ ಕೆಲವೊಮ್ಮೆ ಮಸಕಾಗುವುದು ಸಹಜ ಕಣೆ ನಮ್ಮೊಳಗೆ ಹೊರಗೆ ಕಾಣಿಸೋ ಧೂಳು ಬಿಸಿಲಿಲ್ಲದೆಯೆ ಬಿದ್ದ ನೆರಳು. ಎಷ್ಟು ಸಲ ಕಣ್ಣೊಳಗೆ ಬಿದ್ದ ಛಾಯೆಗಳಲ್ಲಿ ಕಾಣಲೇ ಇಲ್ಲ ಅನಾಥ ನೋವು. ನಿನ್ನ ಅಂಗೈಯಲ್ಲಿ ಕಂಡ ಗೆರೆಗಳ ಹಾಗೆ ನಾನೂ ತಿರುಗಿದ್ದೇನೆ ಎಲ್ಲ ಕಡೆ ಕೊನೆಗೆ ಮಸಕಾಗಿ ಹೋದ ದಾರಿಗಳ ತುದಿಯಲ್ಲಿ ನಿಂತು ಅತ್ತಿದ್ದೂ ಇದೆ ಬಿಡು ತೋಳಂಚಿನಿಂದ ಒರೆಸಿಕೊಂಡೇ ನಡೆದಿದ್ದೇನೆ ಫುಟ್‌ಪಾತಿನಲ್ಲಿ  ಹಗಲು,ರಾತ್ರಿ. ನಿನ್ನ ಭುಜ ಹಿಡಿದು ನಡೆವ ಈ ಹೊತ್ತಿನಲ್ಲಿ ಎಲ್ಲವೂ ನೆನಪಾಗಿ ವಿಷಾದದ ಮಳೆ ಹೊಳವಾಗಿ ಅರೆ, ಎಲ್ಲಿದ್ದೀಯ ಹೇಳೆ… ನಮಗೆ…

"ನಿನ್ನ ಹುಡುಕಿದ ಮೇಲೆ"