Prashant Kishor : Disruptive, Harmful

I hereby declare that Prashant Kishor (let us call him shortly as PK), the so-called poll strategist, is dangerous to the idea of a democratic India. He is disrupting the Indian politics in a manner which threatens the very social development model he preaches. I am writing this piece after studying his moves. Please follow and like us:

"Prashant Kishor : Disruptive, Harmful"

ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಜಾತಂತ್ರ ರಕ್ಷಣೆಗಾಗಿ ಹೋರಾಡುತ್ತಿದ್ದ ಸಂದರ್ಭದಲ್ಲೇ ನನಗೂ ಬದುಕಿನ ಪಾಠ ಆರಂಭಿಸಿತು. ಆಗ ನಾನು ಐದನೇ ಕ್ಲಾಸು (೧೯೭೫) ! ಅಂದಿನಿಂದ ಇಂದಿನವರೆಗೂ ನಾನು ಸಂಘವನ್ನು ಒಳಗಿನಿಂದಲೂ, ಹೊರಗಿನಿಂದಲೂ ಗಮನಿಸಿದ್ದೇನೆ. ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿ ನಿಲ್ಲುವ ಬಗೆಯನ್ನು ಸಂಘವು ಮೊದಲಿನಿಂದಲೂ ಆವಿಷ್ಕರಿಸುತ್ತ, ಸುಧಾರಿಸುತ್ತ ಬಂದಿದೆ. ದೇಶದ ಮೂಲಾಧಾರವಾದ ಪ್ರಜಾಪ್ರಭುತ್ವವೇ   ತುರ್ತುಸ್ಥಿತಿಯ ಅಂಧಕಾರದಲ್ಲಿ, ಒಬ್ಬ ವ್ಯಕ್ತಿಯ ಸರ್ವಾಧಿಕಾರದಲ್ಲಿ ಅಡ್ಡ ಮಲಗಿದ್ದಾಗ, ಪುರಾತನ ಕಾಲದಿಂದಲೂ ಬಾಯಲ್ಲಿ ಸಮಾಜವಾದ ಉದ್ಗರಿಸುತ್ತ , ವರ್ತನೆಯಲ್ಲಿ ಬಂಡವಾಳಶಾಹಿಗಳನ್ನು, ಸರ್ವಾಧಿಕಾರಿಗಳನ್ನು ಓಲೈಸುತ್ತ ಬಂದಿರುವ ಈಗಿನ ಬುಜೀಗಳು ಹೊದ್ದು ಮಲಗಿದ್ದಾಗ ದೇಶದಲ್ಲಿ ಹೊಸ ಚೈತನ್ಯ ತಂದು ಪ್ರಜಾತಂತ್ರವನ್ನು ಜನತೆಗೆ ಮರಳಿಸಿ ಕೊಟ್ಟು ತನ್ನ ಪಾಡಿಗೆ ಶಾಖೆ ನಡೆಸುತ್ತ ಬದಿಗೆ ಸರಿದ ಸಂಘವನ್ನು ದೂಷಿಸುವವರು…

"ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು"

`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?

ಯಾವ್ಯಾವುದೋ ಹಳೆಯ ಕಡತಗಳನ್ನೆಲ್ಲ ತೆರೆತೆರೆದು ನೋಡುತ್ತಿದ್ದಾಗ ಜೀತ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ಮಾಡಲೆಂದು ಬಂದ ಅಮೆರಿಕಾದ ತಂಡದ ಛಾಯಾಗ್ರಾಹಕ ರಾಬಿನ್‌ ರೊಮಾನೋ ತೆಗೆದ ಚಿತ್ರಗಳು ಕಂಡವು. ನನ್ನ `ಜೀತ’  ಕಥೆಯು ಒಂಥರ ಈ ಸಾಕ್ಷ್ಯಚಿತ್ರದ ಸಾಕ್ಷ್ಯಕಥೆಯೇ ಆಗಿದೆ. ಅದರಲ್ಲಿ ಬರೋ ರಾಬಿನ್‌, ಈತ ಇಬ್ಬರೂ ಒಂದೇ. ಐದೂ ದಿನಗಳ ಕಾಲ ಛಾಯಾಗ್ರಹಣ, ವಿಡಿಯೋಗ್ರಫಿಯಲ್ಲಿ ಮುಳುಗಿ ಏನೊಂದೂ ಸುದ್ದಿ ಹೇಳದ ರಾಬಿನ್‌ ಆ ರಾತ್ರಿ ಚಾಮರಾಜನಗರದಿಂದ ಬೆಂಗಳೂರಿಗೆ ಮರಳುವಾಗ ಕತ್ತಲಿನಲ್ಲೇ ಎಷ್ಟೆಲ್ಲ ಮಾತನಾಡಿದ. ಕೊನೆಗೆ `ನನ್ನ ಅಮ್ಮನಿಗೆ ಹುಷಾರಿಲ್ಲ; ಅವಳು ಹುಚ್ಚು ಹಿಡಿದಂತೆ ಇರ್‍ತಾಳೆ. ಅದಕ್ಕೇ ನಾನು ಅರ್ಜೆಂಟಾಗಿ ಮರಳಬೇಕಿದೆ’ ಎಂದು ಒಂದೇ ವಾಕ್ಯ ಹೇಳಿ ನನ್ನನ್ನು ನಡುಗಿಸಿದ್ದ. ಸಾವಿರಾರು ಮೈಲಿಗಳ ದೂರದಲ್ಲಿ ಕೆಲಸ ಮುಗಿಸಿದ ಮೇಲೆ…

"`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?"

ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!

ಇತ್ತೀಚೆಗಷ್ಟೆ ಆನ್‌ಲೈನ್ ಸಂವಹನದ ಮೂಲಕ ಪರಿಚಯವಾಗಿರುವ ಪತ್ರಕರ್ತ ಮತ್ತು ಬೈಸಿಕಲ್ ಅಭಿಯಾನಿ ಶ್ರೀ ಸಿ ಎಸ್ ಚರಣ್‌ರ ಈ ಕಥಾ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ನಿರ್ಧರಿಸಿದ್ದು ನನ್ನ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಗಮನಿಸಿ ಎಂಬುದು ಅಚ್ಚರಿಯ ಮತ್ತು ಅಪರೂಪದ ವಿಷಯ. Please follow and like us:

"ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!"

ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ

೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್‌ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ ಈ ದುರಂತ ಘಟಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರು ಟ್ವೀಟ್ ಮಾಡಿದ್ದು ಹೀಗೆ: ನಿಜ, ಇಂಥ ಹುಟ್ಟುಹಬ್ಬವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರಾಕೆಟ್ ಸ್ಫೋಟಗೊಂಡಿದ್ದು ಏಕೆ ಎಂಬುದಕ್ಕೆ ಸಾವಿರಾರು ಗಂಟೆಗಳ ಕಾಲದ ತನಿಖೆಯ ನಂತರವೂ ಕಾರಣ ಗೊತ್ತಾಗಿಲ್ಲ ಎಂದು ಅವರು ತಿಳಿಸಿದ್ದಾರೆ. Please follow and like us:

"ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ"

ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!

ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ ಅಪರಾಧ ನಮ್ಮದು. ದೇಶ-ವಿದೇಶದ ಸಂಶೋಧಕರೂ ಇದನ್ನೇ ಹೇಳುತ್ತಾರೆ. Please follow and like us:

"ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!"

ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!

`ಚಿತ್ರದುರ್ಗದಲ್ಲಿ ಒಂದು ಬಿಸ್ಕಿಟ್‌ ಫ್ಯಾಕ್ಟರಿ ಇತ್ತು. ಅಲ್ಲಿ ನಾನು ಬಿಸ್ಕಿಟ್‌ ಮಾಡಲು ಬೇಕಾದ ಕಚ್ಚಾ ಆಹಾರ ಪದಾರ್ಥಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದೆ. ಮೂಟೆ ಹೊರುವುದೂ ಸೇರಿದಂತೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡುತ್ತಿದ್ದೆ. ಆಗ ನನಗೆ ಹಣದ ಅವಶ್ಯಕತೆ ತುಂಬಾ ಇತ್ತು. ಒಂದು ಶಿಫ್ಟಿಗೆ ೧೮ ರೂ. ಕೊಡ್ತಾ ಇದ್ದರು. ನಾನು ಕಾಲೇಜಿಗೆ ರಜೆ ಇದ್ದಾಗೆಲ್ಲ ನಿರಂತರವಾಗಿ ಮೂರು ಶಿಫ್ಟ್‌ ಕೆಲಸ ಮಾಡಲು ಮುಂದಾಗಿದ್ದೆ. ಆಗಿನ ಮ್ಯಾನೇಜರ್‌ ಮಂಜುನಾಥ್‌ ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನನ್ನ ಶಿಫ್ಟ್‌ಗಳನ್ನು ವಾರದ ಇತರೆ ದಿನಗಳಿಗೂ ಹಂಚಿ ನೆರವಾದರು. ಸೆಕೆಂಡ್‌ ಪಿಯುಸಿಯಿಂದ ಶುರುವಾದ ಈ ಕೆಲಸದ ಮೂಲಕವೇ  ನಾನು ಡಿಗ್ರಿ ಮುಗಿಸಿದೆ! ‘ Please follow and like us:

"ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!"

ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!

ನನ್ನ ಮಗ, ಸುಧಾಂಶು ಮಿತ್ರನಿಗೆ ಈಗ ೨೩ರ ಹರೆಯ. ಅವನು ಎರಡು ವರ್ಷಗಳ ಹಿಂದಷ್ಟೆ ಇಂಜಿನಿಯರಿಂಗ್‌ ಪದವಿ ಶಿಕ್ಷಣ ಮುಗಿಸಿದ. ಝಿಂಗಾ ಎಂಬ ಹೊಸ ಕಾಲದ ಕಂಪನಿ ಸೇರಿದ. ಅಲ್ಲಿ ಎರಡು ವರ್ಷಗಳನ್ನು ಕಳೆದ ಮೇಲೆ ಯಾವುದೇ ಆತಂಕವಿಲ್ಲದೆ ಮತ್ತು ಹೆಚ್ಚಿನ ಸಂಬಳದ ಆಕರ್ಷಣೆಯೂ ಇಲ್ಲದೆ ರಾಜೀನಾಮೆ ಕೊಟ್ಟ. ಈಗ ಹರ್‍ಯಾನಾದ ಸೋನಿಪತ್‌ನಲ್ಲಿರುವ ಅಶೋಕ ಯೂನಿವರ್ಸಿಟಿಯಲ್ಲಿ ಒಂದು ವರ್ಷದ `ಲಿಬರಲ್‌ ಸ್ಟಡೀಸ್‌’ ಸ್ನಾತಕೋತ್ತರ  ಕೋರ್ಸಿಗೆ ಸೇರಿದ್ದಾನೆ. ಜುಲೈ ೧೫ರಿಂದ ಅವನ ಕಲಿಕೆ ಆರಂಭ. ಈ ಕೋರ್ಸಿಗೆ ಯಂಗ್‌ ಇಂಡಿಯಾ ಫೆಲೋಶಿಪ್‌ ಎಂದೂ ಕರೆಯುತ್ತಾರೆ. Please follow and like us:

"ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!"

ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!

೨೦೧೫ರ ವರ್ಷದ ವಿಶ್ವ ಪರಿಸರ ದಿನದ ಲಾಂಛನವನ್ನು ರೂಪಿಸಿದವರು ಭಾರತೀಯ, ಕೇರಳದ ಶಿಬಿನ್‌! ವೃತ್ತಿಯಲ್ಲಿ ಕೇರಳ ಸರ್ಕಾರದಲ್ಲಿ ಕಂಪ್ಯೂಟರ್‌ ವಿಜ್ಞಾನದ ಶಿಕ್ಷಕರಾಗಿರುವ ಶಿಬಿನ್‌ ವಿಶೇಷ ಸಂದರ್ಶನದಲ್ಲಿ ಲಾಂಛನದ ಬಗ್ಗೆ, ತಮ್ಮ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. Please follow and like us:

"ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!"

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ.…

"ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!"