ರಿಸೆಶನ್ ಬಂದಿದೆ, ಎಚ್ಚರವಿರಲಿ!

ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆಯಾಗ್ತಾ ಇದೆ; ಅಂದ್ರೆ ಏನು? ಇಷ್ಟು ದಿನ ಶೇ. ೨.೪ ರ ಗತಿಯಲ್ಲಿ ಬೆಳೆಯುತ್ತಿದ್ದ ಆ ದೇಶದ ಆರ್ಥಿಕತೆ ಈಗ ಶೇ. ೧.೯ಕ್ಕೆ ಕುಸಿದಿದೆ. ೨೦೦೮ರ ಈ ಹನ್ನೊಂದನೇ ಆರ್ಥಿಕ ಹಿನ್ನಡೆ (ರಿಸೆಶನ್)ಯ ಸಾಧ್ಯತೆ ಶೇ. ೬೦ರಷ್ಟಿದೆಯಂತೆ. ಅಮೆರಿಕಾದಲ್ಲಿ ೪.೪೮ ಲಕ್ಷ ಜನ ಈಗಾಗಲೇ, ಈ ವರ್ಷವೇ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ವರ್ಷ ೪೩ ಲಕ್ಷ ಜನ ಅರೆಕಾಲಿಕ ಕೆಲಸಗಾರರು ಇದ್ದರೆ ಈ ವರ್ಷ ಈ ಸಂಖ್ಯೆ ೫೩ ಲಕ್ಷ ದಾಟಿದೆ. ಈ ಹಿನ್ನಡೆ/ಕುಸಿತ/ರಿಸೆಶನ್ ಕಳೆದ ಡಿಸೆಂಬರಿನಲ್ಲೇ ಗಮನಕ್ಕೆ ಬಂದಿತ್ತು. ಆಗ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡು ಹಿನ್ನಡೆಯನ್ನು ತಡೆದಿತ್ತು. ೨೦೦೧ರ ನಂತರ ಇದೇ ಮೊದಲ ಬಾರಿಗೆ ಇಂಥ ಆರ್ಥಿಕ ಹಿನ್ನಡೆ ಕಂಡುಬಂದಿದೆಯಂತೆ.…

"ರಿಸೆಶನ್ ಬಂದಿದೆ, ಎಚ್ಚರವಿರಲಿ!"

ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ

ಲೋಪೆಜ್ ಲೋಮೊಂಗ್ ಸತ್ತೇ ಹೋಗಿದ್ದ ಎಂದೇ ಎಲ್ಲರೂ ಭಾವಿಸಿದ್ದರು. ಸುಡಾನ್ ದೇಶದ ಕಿಮೋಟೋಂಗ್‌ನಲ್ಲಿದ್ದ ತನ್ನದೇ ಗೋರಿಗೆ ಲೊಮೊಂಗ್ ಕಳೆದ ಡಿಸೆಂಬರಿನಲ್ಲಿ ಭೇಟಿ ಕೊಡಬೇಕಾಯಿತು! ಅವನು ಬಳಸುತ್ತಿದ್ದ ಸರ ಮತ್ತಿತರೆ ಪ್ರಿಯ ವಸ್ತುಗಳೂ ಈ ಗೋರಿಯಲ್ಲಿ ಹೂತುಹೋಗಿದ್ದವು. Please follow and like us:

"ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ"

ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!

ಎರಡು ವಾರಗಳ ಕೆಳಗೆ ಪಿ೨ಪಿ ಎಂಬ ಕಡತ ಹಂಚಿಕೆ ವಿಷಯದ ಬಗ್ಗೆ ಬರೆದಿದ್ದೆ. ನಾವು ಯಾವುದೇ ಸಿನೆಮಾವನ್ನು ಹೇಗೆ ಖಾಸಗಿ ಬಳಕೆಗೆ ಜಗತ್ತಿನ ಇನ್ನೊಂದು ಗಣಕದಿಂದ ಪಡೆಯಬಹುದು, ಕದಿಯುವುದಕ್ಕೆ ಸಮಾನವೇ ಆದರೂ ಹೇಗೆ ಈ ಬಳಕೆಯಿಂದ ನಮ್ಮ ಗಣಕದಲ್ಲೇ ಜಗತ್ತಿನ ಎಲ್ಲ ಪುಸ್ತಕಗಳನ್ನು ಇಳಿಸಿಕೊಳ್ಳಬಹುದು, ಇತ್ಯಾದಿ ವಿವರಿಸಿದ್ದೆ. ಹಂಚಿ ಉಂಡರೆ ಹಸಿವಿಲ್ಲ ಎಂದೂ ಬರೆದಿದ್ದೆ. ಹೌದು, ಮಹಾರಾಯ್ರೆ, ನಿಮ್ಮ ಕಂಪ್ಯೂಟರನ್ನು ಬಳಸಿಕೊಳ್ಳಲು ನಮಗೂ ಬಿಡಿ, ಜಗತ್ತಿನ ಒಳಿತಿಗಾಗಿ ನಮ್ಮ ಸಂಶೋಧನೆಗೆ ನಿಮ್ಮ ಕಂಪ್ಯೂಟರನ್ನು ನಾವು ಬಳಸುವೆವು ಎಂದು ಯಾವುದಾದರೂ ಸಂಸ್ಥೆ ಕೇಳಿಕೊಂಡರೆ? ಇಂಥ ನೂರಾರು ಪ್ರಯತ್ನಗಳು, ಪ್ರಕಲ್ಪಗಳು ನಡೆಯುತ್ತಲೇ ಇವೆ. Please follow and like us:

"ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!"

ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!

ಪರಮಾಣುಶಕ್ತಿಯ ಬಳಕೆ ಮಾಡುತ್ತ ಈಗಾಗಲೇ ಅರ್ಧ ಶತಮಾನ ಕಳೆದಿದ್ದೇವೆ. ವಿಶ್ವದ ಬಲಾಢ್ಯ ದೇಶಗಳಲ್ಲಿ ಪರಮಾಣು ಸ್ಥಾವರಗಳಿವೆ. ಭಾರತವೂ ಇಂಥ ಶಕ್ತಿಯುತ ದೇಶಗಲ್ಲೊಂದು. ಎಲ್ಲ ಸರಿ. ಆದರೆ ಪರಮಾಣು ಕಸವನ್ನು ಎಲ್ಲಿ ಎಸೆಯುತ್ತಿದ್ದಾರೆ? ಕಸದ ಬುಟ್ಟಿ ಎಲ್ಲಿದೆ? ಪರಮಾಣು ಶಕ್ತಿಯ ಸದ್ಬಳಕೆಯೋ, ದುರ್ಬಳಕೆಯೋ ಏನಾದರಾಗಲಿ, ಕಸವಂತೂ ಹುಟ್ಟಿಕೊಳ್ಳುತ್ತದೆ. ಪರಮಾಣು ಸ್ಥಾವರಗಳಲ್ಲಿ ಬಳಸುವ ಕಸಬರಿಗೆ, ಮೇಜು, ಕುರ್ಚಿಗಳಿಂದ ಹಿಡಿದು ಎಲ್ಲ ಬಗೆಯ ಕಸವನ್ನೂ ಸುಮ್ಮನೆ ಕಸದ ಗುಂಡಿಗೆ ಎಸೆಯುವಂತಿಲ್ಲ. ಅವೆಲ್ಲ ಪರಮಾಣು ವಿಕಿರಣಕ್ಕೆ ತುತ್ತಾಗಿವೆ. ಅವುಗಳಲ್ಲಿರೋ ವಿಕಿರಣ ನಿಲ್ಲೋದಕ್ಕೆ ಸಾವಿರಾರು, ಲಕ್ಷಗಟ್ಟಳೆ ವರ್ಷಗಳೇ ಬೇಕು. Please follow and like us:

"ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!"

ಕದಿಯೋಣು ಬಾರಾ, ಕಲಿಯೋಣು ಬಾ !

ಬಹುದಿನಗಳಿಂದ ಬರೆಯಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ವಿಷಯವನ್ನು ಈಗ ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಇಡುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಮೊದಲೇ ಹೇಳಿಬಿಡುತ್ತೇನೆ: ವಾಣಿಜ್ಯದ, ಹಣಕಾಸಿನ ಕಾರಣಕ್ಕಾಗಿ ಕದಿಯುವುದು ಅಪರಾಧ. ಪುಸ್ತಕಗಳನ್ನು, ಸಿನೆಮಾ ಸಿಡಿಗಳನ್ನು ಲೈಬ್ರರಿಗಳಿಂದ ಕದಿಯುವುದು ಅಕ್ಷಮ್ಯ. ಇನ್ನೊಬ್ಬರು ಖರೀದಿಸಿದ್ದನ್ನು ಅವರಿಗೂ ಒಂದು ಪ್ರತಿಯನ್ನು ಬಿಡದೆ ಲಪಟಾಯಿಸುವುದು ತರವಲ್ಲ. ಮುಖ್ಯವಾಗಿ ಕದಿಯುವುದೇ ತಪ್ಪು. ಅಕಸ್ಮಾತ್ ಕದ್ದರೆ ಅದನ್ನು ಆಸಕ್ತರಿಗೆ, ಯೋಗ್ಯರಿಗೆ ಹಂಚಬೇಕು. ಹಂಚಿ ಉಂಡರೆ ಹಸಿವಿಲ್ಲ! Please follow and like us:

"ಕದಿಯೋಣು ಬಾರಾ, ಕಲಿಯೋಣು ಬಾ !"

ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!

ನಮ್ಮಲ್ಲಿ ಡೆಸ್ಕ್‌ಟಾಪ್ ಪಬ್ಲಿಶಿಂಗ್ (ಡಿಟಿಪಿ) ಬಂದು ಸುಮಾರು ಇಪ್ಪತ್ತು ವರ್ಷಗಳಾದವು. ಆಗಿನಿಂದಲೂ ಪುಸ್ತಕಗಳ ಪುಟವಿನ್ಯಾಸ ಮಾಡಲು ಪೇಜ್‌ಮೇಕರ್ ಎಂಬ ತಂತ್ರಾಂಶವನ್ನು ಬಳಸುತ್ತಲೇ ಇದ್ದೇವೆ. ಇದರೊಂದಿಗೇ ಇನ್ನಷ್ಟು ತಂತ್ರಾಂಶಗಳನ್ನೂ ನಾವು ಬಳಸಿಕೊಳ್ಳಬಹುದು. ನನ್ನ ಅನುಭವದಲ್ಲಿ ಕಂಡ ಕೆಲವು ತಂತ್ರಾಂಶಗಳನ್ನು ಇಲ್ಲಿ ನಮೂದಿಸುತ್ತಿದ್ದೇನೆ. ಪೇಜ್‌ಮೇಕರ್ ಬಿಟ್ಟರೆ ಉಳಿದೆಲ್ಲವೂ ಹೆಚ್ಚು ಬಳಕೆಯಲ್ಲಿ ಇಲ್ಲ. ದಿನಪತ್ರಿಕೆಗಳು ಸಾಮಾನ್ಯವಾಗಿ ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು ಅಡೋಬ್ ಇನ್‌ಡಿಸೈನ್ ತಂತ್ರಾಂಶವನ್ನು ಹೆಚ್ಚಾಗಿ ಬಳಸುತ್ತವೆ. Please follow and like us:

"ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!"

ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!

ಹಾವೇರಿಯ ಗಲಭೆಯಲ್ಲಿ ನಮ್ಮ ಅನ್ನದಾತ ಸಿದ್ದಲಿಂಗಪ್ಪ ಚೂರಿ ಮೃತರಾದರು. ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಸಿದ್ದಲಿಂಗಪ್ಪನವರು ಪ್ರಾಣ ತೆರಬೇಕಾಯಿತು. ನಿಮಗೆ ಗೊತ್ತಿದೆಯೋ ಇಲ್ಲವೋ….  ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದ ವೆಬ್‌ಸೈಟಿನಲ್ಲಿ ರಸಗೊಬ್ಬರ ಇಲಾಖೆಯು ದೇಶದ ಎಲ್ಲ ರೈತರಿಗೆ ರಸಗೊಬ್ಬರವನ್ನು ಪೂರೈಸುವುದು ತನ್ನ ಹೊಣೆಗಾರಿಕೆ ಎಂದು ಸಾರ್ವಜನಿಕವಾಗಿ ಘೋಷಿಸಿದೆ. Making available fertilizers to farmers at the door steps on affordable prices(ರೈತರಿಗೆ ಅವರ ಮನೆಬಾಗಿಲಿಗೆ ಕೈಗೆ ಎಟಕುವ ದರದಲ್ಲಿ ರಸಗೊಬ್ಬರವನ್ನು ಪೂರೈಸುವುದು) ತನ್ನ ಒಂದು ಬದ್ಧತೆ ಎಂದು ಸಚಿವಾಲಯವು ಹೇಳಿಕೊಂಡಿದೆ. ಆದರೆ ರಸಗೊಬ್ಬರದಲ್ಲಿ ರಾಜಕೀಯ ಬೆರೆತುಹೋಯಿತು. ನಿಂತಮೆಟ್ಟಿನಲ್ಲೇ ರಾಜ್ಯ ಸರ್ಕಾರವು ಸಮಸ್ಯೆಯನ್ನು ಬಗೆಹರಿಸಬೇಕೆಂದು ಎಲ್ಲರೂ ಪಟ್ಟು ಹಿಡಿದರು. Please follow and…

"ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!"

ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ

ಅಂತರಜಾಲ ಅಥವಾ ಇಂಟರ್‌ನೆಟ್ ಬಗ್ಗೆ ಎಷ್ಟು ಬಗೆಯ ಕಿವಿಮಾತುಗಳನ್ನು ಹೇಳಿದರೂ ಸಾಕಾಗುವುದಿಲ್ಲ. ಯಾಕೆಂದರೆ ಹೊಸ ಬಳಕೆದಾರರು ಬರುತ್ತಲೇ ಇದ್ದಾರೆ. ಕಂಪ್ಯೂಟರ್ ನಿರಕ್ಷರತೆಯೂ ಒಂದು ಸಮಸ್ಯೆಯೇ. ಆದ್ದರಿಂದ ಮತ್ತೆ ಮತ್ತೆ ಈ ಅಂಕಣದಲ್ಲಿ ಅಂತರಜಾಲದ ಬಗ್ಗೆ ಬರೆಯುವ ಅಗತ್ಯವಿದೆ. ನಾವೀಗ ಕಂಪ್ಯೂಟರನ್ನಷ್ಟೇ ಕಲಿತರೆ ಸಾಕಾಗದು. ಕಂಪ್ಯೂಟರ್ ಸಂಸ್ಕೃತಿಯನ್ನು ಬೆಳೆಸಬೇಕು. ಅಂದರೆ ಮತ್ತಷ್ಟು ಹೊತ್ತು ಗಣಕದ ಮುಂದೆ ಕುಳಿತುಕೊಳ್ಳುವುದಲ್ಲ. ನಮ್ಮ ಸಮಾಜದ ಪರಂಪರೆ, ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಮತ್ತು ನಮ್ಮೆಲ್ಲ ವಾಸ್ತವ ಬದುಕಿನ ಸತ್ಯಗಳನ್ನು ಮರೆಯದಿರಲು, ನಮ್ಮಲ್ಲೇ ಬದುಕಿನ ಶಿಸ್ತನ್ನು ರೂಪಿಸಿಕೊಳ್ಳಲು ಈ ಕಿವಿಮಾತುಗಳು ಅಗತ್ಯ. Please follow and like us:

"ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ"

ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ

ಅವರಿಗೆ ಶಿಕ್ಷಣವಿಲ್ಲ, ನಕಾಶೆ ಗೊತ್ತಿಲ್ಲ; ಗ್ರಾಫ್ ಅರಿವಿಲ್ಲ, ರೂಲರ್ ತಿಳಿದೇ ಇಲ್ಲ. ಆದರೂ ಅವರೆಲ್ಲ ಗಣಿತದಲ್ಲಿ ಮುಂದು! ಬ್ರೆಝಿಲ್ ದೇಶದ ಅಮೆಝಾನ್ ನದೀತಟದ ಮುಂಡುರುಕು ಬುಡಕಟ್ಟು ಜನರನ್ನು ನೋಡಿದರೆ, ಮನುಷ್ಯನ ತಿಳಿವಳಿಕೆಯೆಲ್ಲ ಮೊದಲೇ ಇದ್ದಿದ್ದೇ ಹೊರತು ಕಾಲಾನುಕ್ರಮ ಅರಿವಿಗೆ ಬಂದಿದ್ದೇನಲ್ಲ ಎಂದೇ ಅನಿಸುತ್ತದೆ. Please follow and like us:

"ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ"

ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು

ಕರ್ನಾಟಕದ ವಿಧಾನಸಭಾ ಚುನಾವಣೆಗಳ ನಡುವೆಯೇ ತೂರಿಬಂದ ಐ ಪಿ ಎಲ್ ಟಿ೨೦ ಕ್ರಿಕೆಟ್ ಪಂದ್ಯಾವಳಿಗಳ ವರದಿಗಳಲ್ಲಿ , ಛಾಯಾಚಿತ್ರಗಳಲ್ಲಿ ಕಂಡುಬಂದಿದ್ದು ದಾಂಡಿಗರಲ್ಲ; ಚೀರು ಚಿಂಗಾರಿಯರು! ಅರ್ಥಾತ್ ಚೀರ್‌ಗರ್ಲ್ಸ್. ಪಂದ್ಯದಲ್ಲಿ ಸ್ಕೋರ್ ಮಾಡಿದವರಿಗಿಂತ ಈ ಚಿಂಗಾರಿಯರ ಚಿತ್ರಗಳೇ ಪತ್ರಿಕೆಗಳಲ್ಲಿ ರಾರಾಜಿಸಿದವು. ಇವರೆಲ್ಲ ಚೀರಿದ್ದಕ್ಕೇ ನಮ್ಮ ಕ್ರಿಕೆಟ್ ಕಲಿಗಳು ರನ್ ಗಳಿಸಿದರು ಎಂಬಂತೆ, ಸೇರಿದ್ದ ಜನಸಮೂಹಕ್ಕೂ ಈ ಚಿಂಗಾರಿಯರೇ ಸ್ಫೂರ್ತಿ ತುಂಬಿದರು ಎನ್ನುವಂತೆ ವರದಿಗಳು ಬಂದವು. Please follow and like us:

"ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು"