ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!

ನನ್ನ ಹಳೆಯ ಕಾಗದದ ನೋಂದಣಿ ಇತ್ಯಾದಿ ದಾಖಲೆಗಳನ್ನು ಜೋಡಿಸಲೆಂದು ನಾಗಂದಿಗೆಯ ಮೇಲಿನ ‘ಹರಗಣ’ವನ್ನು ಕೆಳಗಿಳಿಸಿದೆ. ಕಂಪ್ಯೂಟರನ್ನು ಸ್ಮಾರ್ಟ್‌ ಟಿವಿಗೆ ಜೋಡಿಸಿ ಯೂಟ್ಯೂಬ್‌ ಹಚ್ಚಿ ಸುಲ್ತಾನ್‌ ಖಾನ್‌ ಆಲ್ಬಮ್‌ನ್ನು ಶುರು ಮಾಡಿದೆ. ಇದ್ದ ಐದಾರು ಕಾಗದದ ರಾಶಿಗಳಲ್ಲಿ ಮೊದಲ ಹತ್ತೇ ನಿಮಿಷದಲ್ಲಿ ನನಗೆ ೨೦ ವರ್ಷಗಳಿಂದ ಸಿಗದಿದ್ದ ಮದ್ರಾಸು ವಿವಿ ಗಣಿತ ಪದವಿಯ ಮೊದಲ ವರ್ಷದ ಅಂಚೆ ತೆರಪಿನ ಕೋರ್ಸಿನ ಒರಿಜಿನಲ್‌ ಅಂಕಪಟ್ಟಿ ಸಿಕ್ಕಿತು! ಅದಾಗಿ ಅಗೆದಂತೆ ನಾನು ಹಾಕಿದ್ದ ಕಾರ್ಮಿಕ ಕೇಸಿನ ದಾವೆಯೂ, ಅದರ ತೀರ್ಪೂ ಸಿಕ್ಕಿದವು; ನಾನು ಮುಳಬಾಗಿಲಿನಲ್ಲಿ ಎದುರಿಸಿದ್ದ ಮಾನಹಾನಿ ಮೊಕದ್ದಮೆ ಕೇಸಿನ ತೀರ್ಪೂ ಸಿಕ್ಕಿತು. ಇದಿಷ್ಟೇ ಆಗಿದ್ದರೆ ನಾನು ಈ ಬ್ಲಾಗ್‌ ಬರೆಯುತ್ತಿರಲಿಲ್ಲ!

"ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!"

ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ

೧೯೮೭ರಿಂದ ೨೦೦೭ರವರೆಗೆ ಹತ್ತಿರವಿದ್ದೂ ದೂರ ನಿಂತ ಕಟು ಅನುಭವ. ೨೦೦೭ರಿಂದ ನಿನ್ನೆವರೆಗೆ ಮಧುರ ನೆನಪುಗಳ ಸಾಲು. ಇಂಥ ಕಟುಮಧುರ ಸಹವಾಸದ ಭಾಗ್ಯವನ್ನು ಕೊಟ್ಟ ಶ್ರೀ ಮೈ ಚ ಜಯದೇವರು ಇನ್ನಿಲ್ಲ.

"ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ"

ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ

  ತಾವೀಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದೀರಿ. `ಈ ಪ್ರಶಸ್ತಿಯು ನನ್ನ ಸಂಘಟನೆ ಮತ್ತು ಕಾರ್ಯಕರ್ತರಿಗೆ ಸೇರಿದ್ದು‘ ಎಂದು ಆಗಲೇ ತಿಳಿಸಿದ್ದೀರಿ. ಇಷ್ಟಾಗಿಯೂ ವೈಯಕ್ತಿಕವಾಗಿ ನಿಮಗೆ ಈ ಪ್ರಶಸ್ತಿ ಬಂದ ಕ್ಷಣ ಏನನ್ನಿಸಿತು?  ನನಗೆ ಪ್ರಶಸ್ತಿ ಬರುವುದು ತಿಳಿದಾಗ ನನಗೆ ಸಂಸ್ಕೃತ ಭಾರತಿಯ ಕಾರ್ಯಕರ್ತರು ಮಾಡಿದ ಕೆಲಸ, ಅದರಲ್ಲೂ  ವಿಶೇಷವಾಗಿ ಆರಂಭದ ದಿನಗಳಲ್ಲಿ ಶ್ರೀ ಜನಾರ್ಧನ ಹೆಗಡೆ, ಶ್ರೀ ವಿಶ್ವಾಸ, ಶ್ರೀ ವಸುವಜ್‌  ಮುಂತಾದ ಕಾರ್ಯಕರ್ತರು ಕೈಗೊಂಡ ಅವಿರತ ಶ್ರಮ ನೆನಪಾಯ್ತು. ಈ ಪ್ರಶಸ್ತಿಯು ನಿಜಕ್ಕೂ ಇವರೆಲ್ಲರ ತಪಸ್ಸಿನ ಪರಿಣಾಮವೇ ಹೌದು. ಆರಂಭದಲ್ಲಿ ನನಗೆ ಈ ಪ್ರಶಸ್ತಿ ತೆಗೆದುಕೊಳ್ಳುವ ಬಗ್ಗೆ ಸಮ್ಮತಿ ಇರಲಿಲ್ಲ. ನಾನಂತೂ ಕಳೆದ ೨೦ ವರ್ಷಗಳಿಂದ ಯಾವುದೇ ಪುರಸ್ಕಾರಗಳನ್ನೂ ಪಡೆಯುತ್ತಿರಲಿಲ್ಲ. ಪದ್ಮಶ್ರೀ ಕುರಿತು  ಹಿರಿಯರ…

"ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ"

`ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!

ಬರೆದೇ ಬದುಕಲು ಆಗಲ್ಲ ಕಣೋ…ಭ್ರಮೆಯಲ್ಲಿರಬೇಡ. ಹಾಗಂತ ಸವಿತಾ (ಈಗ ಸವಿತಾ ನಾಗಭೂಷಣ) ನನಗೆ ಬುದ್ಧಿ ಹೇಳಿ, ಊಟ ಹಾಕಿ ಕಳಿಸಿ ಸುಮಾರು ೩೩ ವರ್ಷಗಳೇ ಕಳೆದಿವೆ. ಈಗ ಫೇಸ್‌ಬುಕ್‌ನಲ್ಲಿ ಸವಿತಾ – ನನ್ನ ಫ್ರೆಂಡ್‌ಶಿಪ್‌ ಕುರಿತು ಸವಿತಾ ಕಾಮೆಂಟ್‌ ನೋಡಿದಾಗ, ಹಳೆಯ ನೆನಪುಗಳು ಹಾಗೇ ಮೆದುವಾಗಿ ಹಾದುಹೋದವು.

"`ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!"

The Lefts I respect in my life

Nowadays, social media is flooded with ideological discussions. Neo-literates, who do not even know computers, are commenting on national issues through their smartphones. There is an equal forum: rich and poor, academician and uneducated, male-female-transgender – anybody can comment on anybody. It is a paradox. And all this is happening on a network created by a visionary called Time Berners Lee, who never sought copyright over his invention of www protocol. But the present discussions…

"The Lefts I respect in my life"

ನವ ಲಿಬರಲ್‌ಗಳ ನಕಲಿ ಬದುಕು!

ನೀವು ವಿವೇಕ್‌ ಅಗ್ನಿಹೋತ್ರಿಯವರ  `ಬುದ್ಧ ಇನ್‌ ಎ ಟ್ರಾಫಿಕ್‌ ಜಾಮ್‌’ ಸಿನೆಮಾ ನೋಡಿದ್ದರೆ ಅಲ್ಲೊಂದು ದೃಶ್ಯ ಬರುತ್ತದೆ. ಅದರಲ್ಲಿ ಚಿತ್ರದ ನಾಯಕ ಬಾರಿನಲ್ಲಿ ಇರುತ್ತಾನೆ. ಅವನನ್ನು ದೇಶಭಕ್ತನೊಬ್ಬ (ಭಕ್ತ ಎಂದೂ ಅಂದುಕೊಳ್ಳಿ) ಛೇಡಿಸುತ್ತಾನೆ. ಊರಲ್ಲೆಲ್ಲ ಕ್ರಾಂತಿ ಮಾತಾಡೋನಿಗೆ ಬಾರಿನಲ್ಲೇನು ಕೆಲಸ ಎಂಬುದು ಅವನ ವಾದ. ನವ ಕ್ರಾಂತಿಕಾರಿಗಳು ಅತ್ಯಾಧುನಿಕ ಬಾರಿನಲ್ಲೇ ಕ್ರಾಂತಿಯ ವಿವರಗಳನ್ನು ಚರ್ಚಿಸುತ್ತಾರೆ ಎಂಬುದು ಅವನಿಗೆ ಗೊತ್ತಿಲ್ಲ ಪಾಪ!! ಎಡ-ಬಲದ ಚರ್ಚೆ ಮಾಡುತ್ತಾ ಕೊನೆಗೆ ಬಲಕ್ಕೆ ಹೊರಳಿಕೊಳ್ಳುವ ನಾಟಕೀಯ ಚಿತ್ರಣದ ಈ ಸಿನೆಮಾ ಏನು ಹೇಳಿದೆ ಅನ್ನೋದನ್ನು ಬಿಟ್ಟುಬಿಡೋಣ. ಹೊರಗೆ ಬಂದು ನೋಡಿ, ನಮ್ಮ ನವ ಲಿಬರಲ್‌ಗಳ ಬದುಕು ಎಷ್ಟು ನಕಲಿಯಾಗಿದೆ ಎಂದು ಗಮನಿಸಿ.

"ನವ ಲಿಬರಲ್‌ಗಳ ನಕಲಿ ಬದುಕು!"

ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!

ಸ್ಥಾವರಕ್ಕಳಿವಿಲ್ಲ: ನಿಜ, ವಸುಂಧರೆಯ ಒಡಲಿನ ಮೇಲಿನ ಹುಣ್ಣಾದ ಛಿದ್ರ ಪರಮಾಣು ಸ್ಥಾವರಗಳಿಗೂ…. ಈ ಮನುಷ್ಯರು ಕೆಲವೊಮ್ಮೆ ಏನೆಲ್ಲ ದಾಖಲೆಗಳನ್ನು ಸ್ಥಾಪಿಸುತ್ತಾರೆ ಎಂದರೆ… ಮೂವತ್ತೊಂದು ವರ್ಷಗಳ ಹಿಂದೆ ಇಡೀ ಜಗತ್ತೇ ತತ್ತರಿಸುವಂತಹ ಚೆರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಕ್ಕೆ ಈ ಮನುಷ್ಯರೇ ಕಾರಣರಾದರು. ಸ್ಥಾವರದ ೨೦೦೦ ಟನ್‌ ಭಾರದ ಕವಚವೇ ಸಿಡಿದು, ಹಿರೋಶಿಮಾ ಬಾಂಬ್‌ಗಿಂತ ೯೦ ಪಟ್ಟು (ಇನ್ನೊಂದು ಸಾಕ್ಷ್ಯಚಿತ್ರದಲ್ಲಿ ೪೦೦ ಹಿರೋಶಿಮಾ ಬಾಂಬ್‌ಗೆ ಸಮ ಎಂಬ ಉಲ್ಲೇಖವಿದೆ) ಹೆಚ್ಚಿನ ಪ್ರಮಾಣದ ವಿಕಿರಣವು ಎಲ್ಲೆಡೆ ಆವರಿಸಿತ್ತು. ಅಧಿಕೃತವಾಗಿ ೨೫೦ ಚಿಲ್ಲರೆ ಜನರು ಸತ್ತರೆಂದು ರಶಿಯಾ ಪ್ರಕಟಿಸಿ ಕೈ ತೊಳೆದುಕೊಂಡಿತು. ನಿಜವಾಗಿ ಸತ್ತವರು ೫ ಸಾವಿರಕ್ಕೂ ಹೆಚ್ಚು ಜನರು. ಸ್ಫೋಟಗೊಂಡ ೪ ನೇ ಕ್ರಮಸಂಖ್ಯೆಯ ಸ್ಥಾವರದ ಮೇಲೆ ಅವಸರದಿಂದ ಒಂದು…

"ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!"

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ ಮೇಲೆ ಅನ್ನಿಸಿದ್ದು: ಕೆಲಸ ಬಿಟ್ಟದ್ದಕ್ಕೆ ಏನಾದರೂ ನೆನಪಿನ ಕಾಣಿಕೆಯನ್ನು ನನಗೆ ನಾನೇ ಕೊಟ್ಟುಕೊಳ್ಳಬೇಕು.

"ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  "

ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!

`ಡಿಸೆಂಟಿಂಗ್‌ ಡಯಾಗ್ನೊಸಿಸ್‌’ ಎಂಬ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದ ವಿಮರ್ಶೆಯನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಬರೋ ಹಾಸ್ಕಿಟಲ್‌ ಗೈಡ್‌ ಫೌಂಡೇಶನ್‌ ಎಂಬ ಸಂಸ್ಥೆಯ ಬಗ್ಗೆ ಕೊಂಚ ವಿವರವಾಗಿ ಮಾಹಿತಿ ಕೊಡಲು ಈ ಬ್ಲಾಗ್‌ ಬರೆಯುತ್ತಿದ್ದೇನೆ. ನಿಮಗೆ, ಅಥವಾ ನಿಮ್ಮ ಬಂಧು-ಬಳಗ, ಸ್ನೇಹಿತವರ್ಗದಲ್ಲಿ ಯಾರಿಗಾದರೂ ದೊಡ್ಡ ಕಾಯಿಲೆ ಇದ್ದರೆ, ನಿಮಗೆ ನೈತಿಕ ಪ್ರಜ್ಞೆ ಇರುವ ನೀತಿವಂತ ವೈದ್ಯರನ್ನು ಹುಡುಕಿಕೊಡಲು ಈ ಸಂಸ್ಥೆಯು ಯತ್ನಿಸುತ್ತದೆ.

"ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!"

Are we above Supreme Court?

By filing a writ petition (Writ Petition (Civil) No. 888/1996), Almitra Patel of Bengaluru won the case concerning managing solid waste in urban areas. She was just a citizen without any political background. As a result of this, the whole nation was forced to establish a system for managing solid waste scientifically. I had an opportunity to spend few hours with her a couple of years ago. She is still fighting for the complete and…

"Are we above Supreme Court?"