‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು

೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ‘ದಿ ಕ್ಯೂಬ್.’ ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನೆಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ. ಆದರೂ ಹಾಲಿವುಡ್‌ನ ಮಿಸ್ಟರಿ ಸಿನೆಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ ಸಿನೆಮಾ ಆಗಿ ದಿ ಕ್ಯೂಬ್ ಪ್ರಸಿದ್ಧವಾಯಿತು. ಆಮೇಲೆ ‘ಹೈಪರ್‌ಕ್ಯೂಬ್’ ಎಂಬ ಸಿಖ್ವೆಲ್ ಬಂತು. (ಸಿಖ್ವೆಲ್: ಒಂದು ಸಿನೆಮಾದ ಮುಂದಿನ ಭಾಗದ ಕಥೆ). ಅದಾದ ಮೇಲೆ ‘ಕ್ಯೂಬ್ ಝೀರೋ’ ಎಂಬ ಶೀರ್ಷಿಕೆಯ ಪ್ರಿಖ್ವೆಲ್ ಬಂತು. (ಪ್ರಿಖ್ವೆಲ್: ಒಂದು ಸಿನೆಮಾದ ಕಥೆಯ ಹಿಂದಿನ ಕಾಲಘಟ್ಟದ ಕಥೆ). Please follow and like…

"‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು"

“ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ

ನಿಕೋಲಾಸ್ ಕೇಜ್ ನನ್ನ ನೆಚ್ಚಿನ, ಮೊದಲ ದರ್ಜೆಯ ಹಾಲಿವುಡ್ ನಟ. ಅವನಿಗೆ ತುಂಬಾ ಅಭಿಮಾನಿಗಳಿದ್ದಾರೆ. ನೋಡಲು ಹಾಲಿವುಡ್ ಫಾರ್ಮುಲಾದ ಸ್ಫುರದ್ರೂಪಿಯಾಗೇನೂ ಕಾಣುವುದಿಲ್ಲ. ಕೆಲವೊಮ್ಮೆ ಬೋಳು ಬೋಳು ತಲೆ ಕಾಣಿಸುವುದೂ ಇದೆ. ಏನೇ ಹೇಳಿ, ನಿಕೋಲಾಸ್ ಕೇಜ್ ನಿಜಕ್ಕೂ ಅದ್ಭುತ ಕಲಾವಿದ. ಅವನ ೮ಎಂಎಂ ಸಿನಿಮಾ ನೋಡಿದರೆ ನಿಮಗೆ ಕಣ್ಣೀರು ಬರದಿದ್ದರೆ ಕೇಳಿ ಅಥವಾ ಕಾನ್ ಏರ್ನಲ್ಲಿ ಅವನ ಸಾಹಸಗಳು ನಿಮ್ಮ ಮೈ ನವಿರೇಳಿಸದಿದ್ದರೆ ಕೇಳಿ. ಅಥವಾ ಫೇಸ್ ಆಫ್ ನಲ್ಲಿ ಜಾನ್ ಟ್ರವೋಲ್ಟಾನಿಗೆ ಸವಾಲೊಡ್ಡಿದ ಅವನ ಪರಿಗೆ ನೀವು ಮೆಚ್ಚದಿದ್ದರೆ ಕೇಳಿ. Please follow and like us:

"“ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ"

ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್

ಪಾಲೋ ಕೊಯೆಲ್ಹೋ ಬರೆದ ಕಾದಂಬರಿಗಳೆಲ್ಲವೂ ತುಂಬಾ ಚೆನ್ನಾಗಿವೆ ಅಂತೇನಿಲ್ಲ. ನಾನು ಇತ್ತೀಚೆಗೆ ಅವನ ಬ್ರೈಡಾ, ಬೈ ದಿ ರಿವರ್ ಪೆಡ್ರಾ, ಐ ಸ್ಯಾಟ್ ಎಂಡ್ ವೆಪ್ಟ್ ಮತ್ತು `ದಿ ವಿನ್ನರ್ ಸ್ಟಾಂಡ್ಸ್ ಅಲೋನ್’ ಕಾದಂಬರಿಗಳನ್ನು ಓದಿದೆ. ಮೊದಲೆರಡೂ ಕಾದಂಬರಿಗಳೂ ಹಳೆಯವೇ. ವಿನ್ನರ್ ಮಾತ್ರ ಹೊಸತು. Please follow and like us:

"ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್"

ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು

ಕೆಲವೇ ದಿನಗಳ ಹಿಂದೆ ಬರೆದಿದ್ದೆ: ನಾನು ಕೊಳಲು ಕ್ಲಾಸ್ ಮುಗಿಸಿಕೊಂಡು ಬರುವಾಗೆಲ್ಲ ಹತ್ತಾರು ಸಲ ರಾಜಲಕ್ಷ್ಮಿ ಮನೆಗೆ ಹೋಗಿ ಗಮ್ಮತ್ತಾದ ಮಾತುಕತೆ ನಡೆಸಿ ಚಾ ಕುಡಿದು ಬರುತ್ತಿದ್ದೆ ಎಂದು. ಈ ತಿಂಗಳ ಮೊದಲ ವಾರದಲ್ಲಿ ರಾಜಲಕ್ಷ್ಮಿಯ ಕಥಾ ಸಂಕಲನದ ಬಿಡುಗಡೆಗೆ ಹೋದಾಗಲೂ ಅದೇ ಗಮ್ಮತ್ತಿನ ಅನುಭವ. ಹೊಸ್ತಿಲಲ್ಲೇ ನಿಂತಿದ್ದ ರಾಜಲಕ್ಷ್ಮಿಗೆ ಶುಭ ಹಾರೈಸುವ ಹೊತ್ತಿಗೆ ಎಂದಿನಂತೆ ಕಥೆ, ಕಥಾಸಂಕಲನಗಳು, ಕವಿತೆಯ ಸುತ್ತಲೇ ಭಾವುಕತೆಯಿಂದ ಸದಾ ಮಂಡಲ ಹಾಕುವ ಚ.ಹ.ರಘುನಾಥ, ತಂಪು ಮಾತುಗಳ ವಿಶಾಖ, ಎಲ್ಲರೂ ಹೇಳುವಂತೆ ಸಂಕೋಚದ ಮುದ್ದೆ ಸೃಜನ್, –  ಎಲ್ಲರೂ ಸಿಗುತ್ತಲೇ ಹೋದರು. ಬಿಡುಗಡೆ ಸಮಾರಂಭದಲ್ಲೇ ಗೋಚಾರಫಲ ಎಂಬ ಚರ್ಚಾಗೋಷ್ಠಿಯೂ ಇತ್ತು ಎನ್ನಿ. ರಾಜಲಕ್ಷ್ಮಿಯ ಗೆಳತಿಯರು, ಆಫೀಸಿನ ಸಹೋದ್ಯೋಗಿಗಳು, ಅವಳ ಸಂಘಟನಾ ಒಡನಾಡಿಗಳು,…

"ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು"