ಕಿಟಕಿ

Short story published in Hosadigantha  Yugadi Special issue 2006 ನನಗೆ ಕಚೇರಿಯಲ್ಲಿ ಅಪರಾತ್ರಿಯಲ್ಲೂ ಇರುವ ಕೆಟ್ಟ ಚಟ. ಹಗಲು ಲೇಟು. ರಾತ್ರಿಯೂ ಲೇಟು. ಸುತ್ತೋಲೆ, ಪತ್ರ ವ್ಯವಹಾರ, ಆಡಳಿತ ಮಂಡಳಿ ಸಭೆಗೆ ತಯಾರಿ, ಯಾವುದೇ  ಇದ್ದರೂ ನಾನು ಕಚೇರಿಗೆ ಹೋಗುವುದು ಹನ್ನೆರಡರ ಮೇಲೆಯೇ. ಆಮೇಲೆ ಊಟದ ಹೊತ್ತಿಗೆ ಎಲ್ಲ ವ್ಯವಹಾರಗಳನ್ನೂ ಕಂಪ್ಯೂಟರಿನಲ್ಲಿ ಹಾಯಿಸಿ ರೆಡಿ ಮಾಡುತ್ತೇನೆ. ಇದ್ದಬದ್ದ ಇಂಟರ್‌ನೆಟ್ ಪಡಿತರವನ್ನೆಲ್ಲ ನಾನೇ ಖಾಲಿ ಮಾಡುತ್ತ ಕುಳಿತುಕೊಳ್ಳುತ್ತೇನೆ.  ತಿಂಗಳಿಗೆ ನಾಲ್ಕು ಗೈಗಾಬೈಟ್ ಎಂದರೆ ಸಾಮಾನ್ಯವಲ್ಲ. ಈಗ ನೋಡಿ, ಆಸ್ಕರ್ ಪಡೆದ ದಿ ಕಾನ್‌ಸ್ಟಂಟ್  ಗಾರ್ಡನರ್ ಸಿನೆಮಾವನ್ನೇ ಡೌನ್‌ಲೋಡ್ ಮಾಡಲು ಹೆಣಗುತ್ತಿದ್ದೇನೆ. Please follow and like us:

"ಕಿಟಕಿ"

Nagaveni, a short story

ನಾಗವೇಣಿ Short story   published in Karmaveera Deepavali Special issue 2006 ಅರೆ, ಎಂಟೂವರೆ ಆಗೋಯ್ತಲ್ಲ ಎಂದು ನಾಗವೇಣಿ ದಢಕ್ಕನೆ ಎದ್ದಳು. ಹೊರಗೆ ಮಳೆ ಜಿನುಗುತ್ತಿದೆ.. ಎಲ್ಲೆಲ್ಲೂ ಮಬ್ಬು ಆವರಿಸಿದೆ. ಕಂಪ್ಯೂಟರ್ ಟೇಬಲ್ ಈಗ ಕೊಂಚ ಬಿಳುಪಾಗಿ ಕಾಣಿಸುತ್ತಿದೆ. ನಿನ್ನೆಯಿಂದ ಯಾವುದೋ ಪುಸ್ತಕವನ್ನು ಕಳ್ಳರ ಥರ ಇನ್ನೊಂದು ಕಂಪ್ಯೂಟರಿನಿಂದ ಶೇರ್ ಆಝಾ ಸಾಫ್ಟ್‌ವೇರ್ ಮೂಲಕ ಡೌನ್‌ಲೋಡ್ ಮಾಡಲು ಇಟ್ಟಿದ್ದು ನೆನಪಾಗಿ  ಮಾನಿಟರ್ ಆನ್ ಮಾಡಿದರೆ….. ಅರೆ… ಬರೀ ಎಂಟು ಮೆಗಾಬೈಟ್‌ಗಳ ಪುಸ್ತಕ ಅಂತೂ ಇವತ್ತು ಪೂರ್ಣವಾಗಿದೆ. ಮೂರು ದಿನಗಳಿಂದ ಹಾಕಿದ ಶ್ರಮ ಸಾರ್ಥಕವಾಯ್ತು. ಈ ಪುಸ್ತಕಾನ ಆ ರಾಂಗ್‌ನಾಥ್‌ಗೆ ಒಪ್ಪಿಸಿದರೆ ಸೈ. ಇವತ್ತೇನೋ ಪಾರ್ಟಿಗೆ ಕರೆದಿದಾರೆ. ಯಾಕೆ? Please follow and like us:

"Nagaveni, a short story"

Basil Oppanda

This short story was published in Udayavani. There was mixed reaction to this story. I request you to read it and get me a critical feedback. ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು,  ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ ನಮ್ಮಿಬ್ಬರನ್ನೂ ಹೊತ್ತುಕೊಂಡ ಮಂಚ ಮಾತ್ರ ಸುಮ್ಮನೆ ಅಂಗಾತ ಮಲಗಿತ್ತು. Please follow and like us:

"Basil Oppanda"