ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!

ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಬಗ್ಗೆ ೨೦೦೯ರಲ್ಲಿ ನಾನು ಮಾಹಿತಿ ಹುಡುಕುತ್ತ ಹೋದಾಗ ಅಂತರಜಾಲದಲ್ಲೇ ಸಿಕ್ಕವರು ಶ್ರೀ ಶಂಕರ ಶರ್ಮ. ಈ ಸ್ಥಾವರವು ಇನ್ನೆಲ್ಲಾದರೂ ವಕ್ಕರಿಸಲಿದೆ ಎಂದು ಅವರು ೨೦೦೬ರಲ್ಲೇ ಎಚ್ಚರಿಸಿದ್ದರು; ಅದರಂತೆ ಅದು ಬಿಜಾಪುರದ ಕೂಡಿಗಿಯಲ್ಲಿ ವಕ್ಕರಿಸಿದ್ದು ನಿಮಗೆಲ್ಲ ಗೊತ್ತೇ ಇದೆ!

ಅಂದಿನಿಂದ ಆರಂಭವಾದ ನನ್ನ ಮತ್ತು ಶ್ರೀ ಶಂಕರ ಶರ್ಮರ ಸ್ನೇಹ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಲೇ ಇದೆ. ೨೦೧೦ರಲ್ಲಿ ಆಗಿನ ಮುಖ್ಯಮಂತ್ರಿಯವರಿಗೆ ಇಂಧನ (ಮುಖ್ಯವಾಗಿ ವಿದ್ಯುತ್)  ನೀತಿಯ ಕುರಿತು ಒಂದು ಬಹಿರಂಗ ಪತ್ರವನ್ನು ಬರೆದೆವು; ಅದನ್ನು ರಾಜ್ಯದ ಐದು ಪ್ರಮುಖ ದಿನಪತ್ರಿಕೆಗಳು ಒಂದೇ ದಿನ ಪ್ರಕಟಿಸಿ ವ್ಯಾಪಕ ಪ್ರಚಾರ ಕೊಟ್ಟವು. ಅದನ್ನೇ ಮುಂದುವರಿಸಿಕೊಂಡು ನಾವು ಆಗಿನ ಬಿಜೆಪಿ ರಾಜ್ಯ ಸರ್ಕಾರದ ವಿದ್ಯುತ್‌ ನೀತಿಯಲ್ಲಿ ಸುಸ್ಥಿರ ಚಿಂತನೆಯನ್ನು ಅಳವಡಿಸಬೇಕೆಂದು ಇನ್ನಿಲ್ಲದ ಪ್ರಯತ್ನವನ್ನು ಮಾಡಿದೆವು. ಅದರಿಂದ ಒಂದಷ್ಟು ಜಾಗೃತಿಯಂತೂ ಮೂಡಿತು ಅನ್ನಿ.

shankar-sharma

ಅದಾಗಿ ೨೦೧೫ರಲ್ಲಿ ಶ್ರೀ ಶಂಕರ ಶರ್ಮರ ನಾಯಕತ್ವದಲ್ಲಿ  (ಡಾ|| ವಾಮನ ಆಚಾರ್ಯ ಅಧ್ಯಕ್ಷತೆಯಲ್ಲಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯಾದ್ಯಂತ ಹವಾಗುಣ ಬದಲಾವಣೆ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ತೊಡಗಿದಾಗ ಅವರೊಂದಿಗೆ ಹಲವು ಕಡೆಯ ಸಭೆಗಳಲ್ಲಿ ಭಾಗವಹಿಸಿದ ಅನುಭವ ನನ್ನದು. ಈ ವರದಿಯನ್ನು ಅವರು ಸಿದ್ಧಪಡಿಸಿದ ಮೇಲೆ ಅವರ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದ್ದು ನನ್ನ ಖುಷಿ.

ಕಳೆದ ವರ್ಷ ಬೆಂಗಳೂರಿನಿಂದ ಮೈಸೂರಿಗೆ ಬಂದಮೇಲೆ ಅವರೊಂದಿಗೆ ಹೆಚ್ಚು ಕಾಲ ಕಳೆಯಲಾಗದಿದ್ದರೂ, ಅವರ ಮನೆಯಲ್ಲೇ ಕೂತು ಸುಸ್ಥಿರ ಇಂಧನ ನೀತಿಯ ಬಗ್ಗೆ ಎಷ್ಟೋ ತಾಸುಗಳ ಕಾಲ ಮಾತನಾಡಿದ್ದು ನನ್ನ ಭಾಗ್ಯವೇ ಎನ್ನಬೇಕು.

30052015-kspcb-cc-report-cover

24april2016-tn-energy-book-shankar-sharma-cover

Mitramaadhyama 008

ಶಂಕರ ಶರ್ಮರು ಕಟು ವಾಸ್ತವವಾದಿ; ಅವರು ಯಾವ ಸಂಘಟನೆಯ ಜೊತೆಗೂ ಸೇರದೆ, ಎಲ್ಲರೊಂದಿಗೂ ಸಂಪರ್ಕ ಇರಿಸಿಕೊಂಡು ತಮ್ಮ ನೀತಿ ನಿಲುವುಗಳನ್ನು ಖಚಿತವಾಗಿ ತಿಳಿಸುತ್ತಾರೆ; ಸರ್ಕಾರಗಳು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ತಮಗೆ ಗೊತ್ತಿರುವ ಎಲ್ಲಾ ಮಾಹಿತಿಗಳನ್ನೂ ಮುಕ್ತವಾಗಿ ನೀಡುತ್ತಾರೆ. ತಮಿಳುನಾಡಿನ ವಿದ್ಯುತ್ ಭವಿಷ್ಯದ ಬಗ್ಗೆಯೂ ಪುಸ್ತಕ ಬರೆಯುತ್ತಾರೆ; ದೇಶಕ್ಕಾಗಿ ಏಕೀಕೃತ ಇಂಧನ ನೀತಿ ಹೇಗಿರಬೇಕು ಎಂಬ ಬಗ್ಗೆ ವಿದ್ವತ್ಪೂರ್ಣ ಪುಸ್ತಕವನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಮಿತ್ರಮಾಧ್ಯಮದ ವತಿಯಿಂದ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೂ ಒಂದು ಸವಿನೆನಪು.

vk-20100311a_009101001-688x1024

ಯಾವುದೇ ಪತ್ರಿಕೆಯಲ್ಲಿ ಇಂಧನ / ವಿದ್ಯುತ್‌ ರಂಗದ ಬಗ್ಗೆ ಅವೈಜ್ಞಾನಿಕ ಮತ್ತು ಅಸಮರ್ಥನೀಯ ವರದಿ / ಲೇಖನ ಬಂದರೆ ಅವತ್ತೇ ಅದಕ್ಕೆ ಸುದೀರ್ಘವಾದ ಪ್ರತಿಕ್ರಿಯೆ ನೀಡುವ, ಒಳ್ಳೆಯ ಸಂಗತಿ ಬಂದರೆ ಶ್ಲಾಘಿಸುವ, ಯಾವುದೇ ಕೇಂದ್ರ, ರಾಜ್ಯ ಸಚಿವರನ್ನೂ ಬಿಡದೆ ನಿರಂತರವಾಗಿ ಮನವಿಗಳನ್ನು ಬರೆಯುತ್ತಲೇ ಇರುವ, ಯಾವುದೇ ಪತ್ರಕ್ಕೂ ಗೌರವ ನೀಡಿ ಉತ್ತರಿಸುವ ಶಂಕರ ಶರ್ಮರದು ಸದಾ ಸುಸ್ಥಿರ ಬದುಕಿಗಾಗಿ ತುಡಿಯುವ ಪ್ರಾಮಾಣಿಕ ಮನಸ್ಸು.

ಈಗ ಅವರು ಉನ್ನತ ಅಧ್ಯಯನ ಮಾಡಲೆಂದು ನ್ಯೂಝಿಲೆಂಡ್‌ಗೆ ಹೊರಟಿದ್ದಾರೆ ಎಂದರೆ ಅವರ ಕಲಿವ ತವಕವನ್ನು ಊಹಿಸಿ.  ಈ ಕುರಿತು ತನ್ನೆಲ್ಲ ಮಿತ್ರರಿಗೆ ಅವರು ಬರೆದ ಈಮೈಲ್‌ನ ಭಾಗ ಹೀಗಿದೆ:

Dear all,

Greetings from Mysore.

I am scheduled to start from Bengaluru on 15th Sept. to Auckland, New Zealand to undertake a PhD course at Auckland University of Technology (AUT). The topic I have chosen for the PhD thesis is “Aggressive penetration of Renewable Energy(RE) sources in the existing power network of developing countries with a case study in India”.

As you may appreciate, this can be a topic of huge interest to the developing countries in moving away from the conventional electricity sources such as coal, natural gas, nuclear and dam based hydro power plants.  Whereas there have been a wealth of literature on some of he related issues, and there are clear moves towards micro-grids based on various kinds of power sources in different parts of the world, I have not come across any literature or research on specific case of how the existing power network in a developing country would respond to high levels of RE penetration (say 50%, 75% or even 100%). The technical, regulatory and logistical issues (and of course commercial issues) associated with such a high level penetration of RE need to be addressed satisfactorily, and enough confidence need to be gained as far as the ability of RE to meet all our electricity needs on a sustainable basis, before we can expect our authorities to move away from the conventional power sources. This is my primary objective in the proposed study.

I plan and hope to come back by 2019 with a credible and peer reviewed thesis which would have done a satisfactory simulation of one or more existing power networks around Mysore city in Karnataka. On the basis of such a study, the civil society organisations may like to plan to launch an information campaign, and approach the authorities for a planned approach to move away from conventional power sources towards a sustainable power sector. By 2019, there also would have been very many examples of RE based micro/smart grids operating satisfactorily in many parts of the world (hopefully few in India too). Such a scenario will help CSOs in India to put forth our arguments more forcefully, and I imagine our political leaders would be in a position to accept our views by then.

My e-mail id will remain the same.

Thank you all.

​Best wishes and regards.

Shankar Sharma

ಅವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ, ಹಲವನ್ನು ಮಿತ್ರಮಾಧ್ಯಮ ಜಾಲತಾಣದಲ್ಲಿ ಪ್ರಕಟಿಸಿದ ನನಗೆ, ಅವರ ಗಂಭೀರ ಕಾಳಜಿಯಲ್ಲಿ ಸ್ವಲ್ಪವಾದರೂ ಭಾಗವಹಿಸಿದ ಅಲ್ಪ ಸಮಾಧಾನ; ಅವರು ಹೇಳಿದ್ದನ್ನೆಲ್ಲ ಮಾಡಿಲ್ಲ ಎಂಬ ಅಸಮಾಧಾನ ಇದೆ. ನನಗೂ ಮಿತಿಗಳಿವೆ ಎಂಬುದನ್ನು ಒಪ್ಪಿಕೊಂಡಿರುವ ಅವರು ನನ್ನನ್ನೆಂದೂ ಟೀಕಿಸಿಲ್ಲ; ಬೇಜಾರುಪಡಿಸಿಲ್ಲ.

ಹವಾಗುಣ ಬದಲಾವಣೆ ಜನಾಭಿಪ್ರಾಯದ ಸಭೆಗಳಲ್ಲೂ ಇಂಧನ ವ್ಯರ್ಥವಾಗುವುದನ್ನು ತಡೆಯುತ್ತಿದ್ದ, ಜನರ ಅಭಿಪ್ರಾಯಗಳನ್ನು ಗೌರವಿಸಿ ಪ್ರತಿಯೊಂದನ್ನೂ ದಾಖಲು ಮಾಡಿಕೊಳ್ಳುತ್ತಿದ್ದ ಅವರ ಬದುಕು ಅನುಕರಣೀಯ.

ಇಂಥ ಸಜ್ಜನ, ಮೇಧಾವಿ, ಸುಸ್ಥಿರತೆಯ ಚಿಂತಕ, ಇಂಧನ ತಜ್ಞರ ಸ್ನೇಹ ನನಗೆ ದೊರಕಿದ್ದು ನನ್ನ ಅದೃಷ್ಟ.

ಅವರ ಉನ್ನತ ಅಧ್ಯಯನವು ಯಶಸ್ವಿಯಾಗಲಿ, ಅದರಿಂದ ಈ ಸಮಾಜಕ್ಕೆ, ವಿಶೇಷವಾಗಿ ಭಾರತದ ಇಂಧನ ನೀತಿಗೆ ಹೊಸದಿಕ್ಕು ಸಿಗಲಿ ಎಂದು ಆಶಿಸೋಣ.