ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)

೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ ಮೆತ್ತಗೆ ಐದನೇ ಮಹಡಿಗೆ ಬಂದು ನನ್ನ ಮೇಜಿನ ಮೇಲೆ ಒಂದೆರಡು ಪತ್ರಿಕೆಗಳನ್ನು ಚೆಲ್ಲಿ `ಒಂದು ಲೇಖನ ಕೊಡಿ’ ಎಂದು ತಣ್ಣಗೆ ಹೇಳಿ ಹೊರಟುಹೋಗುತ್ತಿದ್ದರು. ನಾನು ಬರೆದ ಮೇಲೆ ಅದನ್ನು ತಿದ್ದಿ ಪ್ರಕಟಿಸುತ್ತಿದ್ದರು. ನನ್ನನ್ನು ವಿಜ್ಞಾನ ಲೇಖಕನನ್ನಾಗಿ ಮಾಡಿದವರೇ ಅವರು ಎಂದು ಈ ಹೊತ್ತಿನಲ್ಲೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಈ ಲೇಖನದ ಚಿತ್ರವನ್ನೂ ಅವರೇ ನನ್ನಿಂದ ಬರೆಯಿಸಿದರು. ಈಗ, ೨೭ ವರ್ಷಗಳ ನಂತರ ಈ ಲೇಖನವನ್ನು ಓದಿದರೆ, ಪರವಾಗಿಲ್ಲ, ತಪ್ಪಾಗೇನೂ ಬರೆದಿಲ್ಲ;…

"ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)"

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ…

"ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’"

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ. 

"‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ"

SHANKAR SHARMA: CREATION OF A SUSTAINABLE URBAN ENERGY SYSTEM

Synopsis: IISc, Bangalore and BESCOM conducted a workshop on 27-28 February, 2007 at Bangalore to discuss the creation of a sustainable urban energy system for Bangalore city. This article makes an effort to discuss larger issues in this regard and contains, among other things, many issues raised in the workshop.

"SHANKAR SHARMA: CREATION OF A SUSTAINABLE URBAN ENERGY SYSTEM"

National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)

In a significant decision in the matter of M.P Patil Versus Union of India and ors (Appeal No 12 of 12), the Principal Bench of the National Green Tribunal (NGT) on 13-3-2014 suspended the Environmental Clearance granted by the Ministry of Environment and Forest on 25-1-2012 for setting up the 3x 800 MW Super Thermal Power Plant in Bijapur and directed that the Environmental Clearance  be reappraised and a fresh decision be taken as to whether the project…

"National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)"

ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!

ಮಾರುತಿ ತಂತ್ರಾಂಶ ಸಂಸ್ಥೆ, ಹಾಸನ, ಇವರ ತಂತ್ರಾಂಶ ಕುರಿತಂತೆ ತಂತ್ರಾಂಶ ಸಮಿತಿಯ ಅಧ್ಯಕ್ಷರು, ಸದಸ್ಯರು, ಮತ್ತು ಐಐಐಟಿ-ಬಿ ( ಈ ಸಂಸ್ಥೆಯು ತೃತೀಯ ತಂಡವಾಗಿ ತಂತ್ರಾಂಶವನ್ನು ವ್ಯಾಲಿಡೇಟ್‌ ಮಾಡಿತ್ತು) – ಈ ಸಂಬಂಧವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆದ ಪತ್ರ ವ್ಯವಹಾರದ ಪ್ರಮುಖ ಕಂತನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಸಾರ್ವಜನಿಕರು, ತಂತ್ರಾಂಶ ತಜ್ಞರು ಈ ದಾಖಲೆಗಳನ್ನು ಓದಿ ತಮ್ಮದೇ ನಿರ್ಧಾರಕ್ಕೆ ಬರಬಹುದಾಗಿದೆ. 

"ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!"

`ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?

ಮದ್ದೂರಿನ ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆಯಲ್ಲಿ ೨ನೆ ನೆರವಿಗ (SDA) ಆಗಿರುವ ಶ್ರೀ ಶ್ರೀನಿವಾಸಮೂರ್‍ತಿಯವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯ, ಮತ್ತು ಈ ತಂತ್ರಾಂಶಗಳ ತಯಾರಿ ಸಮಯದಲ್ಲಿ ಸಮಿತಿಯ ವತಿಯಿಂದ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಿದ್ದ ಡಾ|| ಯು ಬಿ ಪವನಜರಿಗೆ ಮತ್ತು ಮಾರುತಿ ತಂತ್ರಾಂಶ ಸಂಸ್ಥೆಗೆ  ಬರೆದ ಪತ್ರ ಇಲ್ಲಿದೆ. ಮುಖ್ಯವಾಗಿ ಇದು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದ ಬ್ರೈಲ್‌ ತಂತ್ರಾಂಶದ ಕುರಿತಾಗಿದೆ.  

"`ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?"

ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು

ಸಮಕಾಲೀನ ಸಂದರ್ಭದಲ್ಲಿ  ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆ­ಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸ­ದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿ­ನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್‌ ತಂತ್ರಾಂಶ; ಆಂಡ್ರಾಯ್ಡ್‌ ಗೊತ್ತಿರುವ ಪ್ರಾಥ­ಮಿಕ ಹಂತದವರೂ ಕೆಲ ತಾಸು­ಗಳಲ್ಲಿ  ರೂಪಿಸಬಹುದಾದ ಮೊಬೈಲ್‌ ಕೀಲಿಮಣೆ;  ಒಮ್ಮೆ ವಕ್ಕರಿಸಿದರೆ ಎಂದೆಂದೂ ಬೇರೆ ಫಾಂಟ್‌ಗಳನ್ನು ಬಳ­ಸಲು ಬಿಡದ ಕೀಲಿಮಣೆ ಎಂಜಿನ್‌ ಮತ್ತು ಪ್ರಸ್ತುತತೆ  ಕಳೆದುಕೊಂಡಿರುವ ಯೂನಿ­ಕೋಡ್‌ ಪರಿವರ್ತಕ!

"ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು"

ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ

ನಿನ್ನೆ ಅಂದರೆ ೨೨ ಜನವರಿ ೨೦೧೪ರಂದು ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಮೇಲ್ವಿಚಾರಣೆಯಲ್ಲಿ ಯುನಿಕೋಡ್ ಶಿಷ್ಟತೆಯನ್ನು ಅಂಗೀಕರಿಸಿ ಕನ್ನಡ ತಂತ್ರಾಂಶಗಳನ್ನು ‘Unicode compliant’ ಆಗಿ ಅಭಿವೃದ್ಧಿಪಡಿಸಿ ಬಳಕೆಗೆ ಬಿಡುಗಡೆ ಮಾಡಿರುವುದು ಒಂದು ಉತ್ತಮ ಹಾಗು ಸ್ವಾಗತಾರ್ಹ ಬೆಳವಣಿಗೆ. ಈ ತಂತ್ರಾಂಶಗಳ ಪೈಕಿ “ಕನ್ನಡ Braille” ತಂತ್ರಾಂಶವನ್ನೂ (type ಮಾಡಿದ ಅಕ್ಷರಗಳನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ ಹೆಳುವ ಸೌಲಭ್ಯ) ಇದೆ ಎಂದು ಕೇಳಿ ಸಂತಸವಾಗಿತ್ತು. ಸರಕಾರಕ್ಕೆ ಅಂಧರಿಗೂ ಸಾಮಾನ್ಯರಂತೆ ತಂತ್ರಜ್ಞಾನವನ್ನು ಒದಗಿಸಿಕೊಡುವ ಕಾಳಜಿ ಇದೆ ಎಂಬ ವಿಚಾರ ತಿಳಿದು ಹರ್ಷವೆನಿಸಿತು. ಆ ತಂತ್ರಾಂಶವನ್ನು ನಾನೂ ಉಪಯೋಗಿಸಿ ನೋಡಬೇಕೆಂದು ಅದರ ಬಿಡುಗಡೆಯಾದ ತಕ್ಷಣ ನನ್ನ Computerನಲ್ಲಿ install ಮಾಡಿಕೊಂಡೆ. ಆದರೆ ಆ ತಂತ್ರಾಂಶವು ನನ್ನ ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿ…

"ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ"

Prayer for consideration in front of the Hon’ble High Court for the purpose of granting relief to the Endosulfan Victims

Below is the prayer for consideration in front of the Hon’ble High Court for the purpose of granting relief to the Endosulfan Victims:- (Dr. Ravindranath Shanbhag writes: Our impleading petition on Public Interest Litigation on Endosulfan case is coming before the Hon’ble High Court of Karnataka on 17th December 2013. In addition to the prayer made in our petition we have requested our advocates to present our views on the basis of recent developments in respect of…

"Prayer for consideration in front of the Hon’ble High Court for the purpose of granting relief to the Endosulfan Victims"