ರಾಮಣ್ಣ

ನನ್ನಂಥ ಕ್ರಿಯಾಶೀಲ ವ್ಯಕ್ತಿಗಳ ದಿನಚರಿ ಯಾಕೆ ಯಾವಾಗಲೂ ಬೆಳಗಿನಿಂದಲೇ ಆರಂಭವಾಗಬೇಕು ಎಂಬ ಹುಚ್ಚು ಆಲೋಚನೆ  ಬಂದಕೂಡಲೇ ನಮ್ಮ ರಾಮಣ್ಣ ಅವತ್ತು ಹಗಲಿಡೀ ಮಲಗೇ ಇದ್ದ. ಎಷ್ಟು  ಹೊತ್ತು ಅಂತ ಮಲಗ್ತಾನೆ..! ಅವನೇನು ರಾತ್ರಿ ಮನೆ ಕಾಯೋ ನಾಯಿ ಅಲ್ವಲ್ಲ!! ರಾತ್ರಿ ಎಂಟು ಗಂಟೆ ಆದಕೂಡಲೇ ಎದ್ದ. ಇನ್ನೂ ತಡರಾತ್ರಿ ಆದರೆ ದರ್ಶಿನಿಗಳಲ್ಲಿ ಇಡ್ಲೀನೂ ಸಿಗಲ್ಲ ಅನ್ನೋದು ಅವನಿಗೆ  ಯಾವಾಗಲೇ ಖಾತ್ರಿ ಆಗಿದೆ. ಎದ್ದ ಕೂಡಲೇ ಹಲ್ಲುಜ್ಜಿದ. ಹೇಗೂ ಸೋಲಾರ್ ಹೀಟರ್ ಇದ್ದದ್ದರಿಂದ ನೀರು ಕಾಯಿಸಬೇಕಿರ್‍ಲಿಲ್ಲ. ಆರಾಮಾಗಿ ಶವರ್ ಬಾತ್ ಮಾಡಿದ. ಎಂಟೂ ಮುಕ್ಕಾಲಿಗೆ ಸರಿಯಾಗಿ ಕನ್ನಡಿ ಮುಂದೆ ನಿಂತ.

"ರಾಮಣ್ಣ"