ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ತದಡಿಯಲ್ಲಿ ೨೧೦೦ ಮೆಗಾವಾಟ್‌ಗಳ ಉತ್ಪಾದನಾ ಸಾಮರ್ಥ್ಯದ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕರ್ನಾಟಕ ವಿದ್ಯುತ್  ನಿಗಮದ ಪ್ರಸ್ತಾಪಕ್ಕೆ ಮೊದಲ ಹಿನ್ನಡೆ ಉಂಟಾಗಿದೆ. ಇದೇ ಜನವರಿ ೧೧-೧೨ರಂದು ನಡೆದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞ ಪರಾಮರ್ಶನಾ ಸಮಿತಿ (ಎಕ್ಸ್‌ಪರ್ಟ್ ಅಪ್ರೈಸಲ್ ಕಮಿಟಿ , ಇ ಎ ಸಿ)ಯ ೬೦ನೇ  ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವನ್ನು ಕೈಗೊಳ್ಳಲಾಗಿದೆ:

"ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ"

ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ

ನಾಡಿನ ವಿದ್ಯುತ್ ಸಮಸ್ಯೆಗೆ ಪರಿಸರ ಸ್ನೇಹಿ ಪರಿಹಾರ ಹುಡುಕಲೆಂದೇ ಭಾರತಕ್ಕೆ ಬಂದು ಈಗ ತೀರ್ಥಹಳ್ಳಿಯಲ್ಲಿ ನೆಲೆಸಿರುವ ಶ್ರೀ ಶಂಕರ್ ಶರ್ಮರವರ ಹಲವು ಲೇಖನಗಳು ಇನ್ನುಮುಂದೆ ಮಿತ್ರಮಾಧ್ಯಮದಲ್ಲಿ  ಪ್ರಕಟವಾಗಲಿವೆ. ಅವರ ಮೂಲ ಲೇಖನಗಳು ಇಂಗ್ಲಿಶಿನಲ್ಲಿದ್ದು, ಸಾಧ್ಯವಾದಾಗಲೆಲ್ಲ ಅವನ್ನು ಕನ್ನಡ ರೂಪದಲ್ಲಿ ಪ್ರಕಟಿಸಲಾಗುವುದು.

"ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ"