ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ

ಇವರಿಗೆ, ಶ್ರೀ ಎಲ್. ಕೆ. ಆಡ್ವಾನಿಜಿ, ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿಆರೆಂಜ್ ಕೌಂಟಿ ಕರಡಿಗೋಡು ಪೋಸ್ಟ್ ಸಿದ್ದಾಪುರ ಕೊಡಗು ಜಿಲ್ಲೆ ೫೭೧೨೫೩ ಪ್ರಿಯ ಆಡ್ವಾನಿಜಿ,ಇತಿಹಾಸ ಆಗುವುದು ಬೇರೆ, ಬರೆಯುವುದು ಬೇರೆ, ನೆನಪಿಸಿಕೊಳ್ಳುವುದು ಬೇರೆ. ಅಲ್ಲವೆ ಆಡ್ವಾನಿಜಿ……. ?ಕಳೆದ ವರ್ಷ ಇದೇ ದಿನ, ಜೂನ್ ೨೫ರಂದು ನೀವು ಬೆಂಗಳೂರಿನಲ್ಲಿದ್ದಿರಿ. ಫ್ರೀಡಂ  ಪಾರ್ಕ್ ಉದ್ಘಾಟಿಸಲು. ಅದೇ, ನೀವೇ ಬರೆದಿದ್ದೀರಿ, ಒಂದು ಕಾಲದಲ್ಲಿ ಬೆಂಗಳೂರು ಸೆಂಟ್ರಲ್ ಜೈಲಾಗಿತ್ತು. ನೀವಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದಿರಿ. ಎಷ್ಟೋ ವರ್ಷಗಳಿಂದ ಅದೇ ದಿನ, ಜೂನ್ ೨೫ – ನೀವು ಬೆಂಗಳೂರಿಗೆ ಬರುತ್ತಿದ್ದಿರಿ. ಸೆರೆಮನೆಗೊಂದು ಭೇಟಿ ಕೊಟ್ಟು ನಾಸ್ಟಾಲ್ಜಿಯಾಕ್ಕೆ ಜಾರುತ್ತಿದ್ದಿರಿ. ಪತ್ರಕರ್ತರೊಂದಿಗೆ ತುರ್ತು…

"ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ"

ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್

ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು ಬರೆಯುತ್ತಿದ್ದೇನೆ. ಪದೇ ಪದೇ ಬೆಂಗಳೂರಿನ ತೊಂದರೆ ತಾಪತ್ರಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಸುದ್ದಿಗಳನ್ನು, ಛಾಯಾಚಿತ್ರಗಳನ್ನು ನಿಮ್ಮಲ್ಲಿ ಬಹಳಷ್ಟು ಜನ ನೋಡಿರುತ್ತೀರಿ. ಹಲವು ಕಾಲಮಿಷ್ಟುಗಳು ಒಳ್ಳೆ ವಿಷಯ ಸಿಗದಿದ್ದಾಗೆಲ್ಲ ಬೆಂಗಳೂರಿನ ಸಮಸ್ಯೆಯನ್ನು ಎತ್ತಿಕೊಂಡು ಬರೆದಿದ್ದೂ ಇದೆ. ತಪ್ಪೇನಲ್ಲ. ಕೋಟಿ ತಲುಪುತ್ತಿರುವ ಜನಸಂಖ್ಯೆಯ ಈ ಮಹಾನ`ಗರ’ದ ಬಗ್ಗೆ ಬರೆದಷ್ಟೂ ಇದೆ.

"ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್"

“ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ

ನಿಕೋಲಾಸ್ ಕೇಜ್ ನನ್ನ ನೆಚ್ಚಿನ, ಮೊದಲ ದರ್ಜೆಯ ಹಾಲಿವುಡ್ ನಟ. ಅವನಿಗೆ ತುಂಬಾ ಅಭಿಮಾನಿಗಳಿದ್ದಾರೆ. ನೋಡಲು ಹಾಲಿವುಡ್ ಫಾರ್ಮುಲಾದ ಸ್ಫುರದ್ರೂಪಿಯಾಗೇನೂ ಕಾಣುವುದಿಲ್ಲ. ಕೆಲವೊಮ್ಮೆ ಬೋಳು ಬೋಳು ತಲೆ ಕಾಣಿಸುವುದೂ ಇದೆ. ಏನೇ ಹೇಳಿ, ನಿಕೋಲಾಸ್ ಕೇಜ್ ನಿಜಕ್ಕೂ ಅದ್ಭುತ ಕಲಾವಿದ. ಅವನ ೮ಎಂಎಂ ಸಿನಿಮಾ ನೋಡಿದರೆ ನಿಮಗೆ ಕಣ್ಣೀರು ಬರದಿದ್ದರೆ ಕೇಳಿ ಅಥವಾ ಕಾನ್ ಏರ್ನಲ್ಲಿ ಅವನ ಸಾಹಸಗಳು ನಿಮ್ಮ ಮೈ ನವಿರೇಳಿಸದಿದ್ದರೆ ಕೇಳಿ. ಅಥವಾ ಫೇಸ್ ಆಫ್ ನಲ್ಲಿ ಜಾನ್ ಟ್ರವೋಲ್ಟಾನಿಗೆ ಸವಾಲೊಡ್ಡಿದ ಅವನ ಪರಿಗೆ ನೀವು ಮೆಚ್ಚದಿದ್ದರೆ ಕೇಳಿ.

"“ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ"

ರೆಡ್ಡಿ ಏರಿಗೆ ಎಳೆದರೆ ಈಶ್ವರಪ್ಪ ನೀರಿಗೆ ಎಳೆದ್ರಂತೆ!

ಏನೋ, ಬಿಜೆಪಿಯಲ್ಲಿ ಎಲ್ರೂ  ರಾಜಿಯಾಗ್ಬಿಟ್ಟಿದಾರೆ  ಅಂತ ನಾನು ಸುಮ್ಕೆ ಕೂತಿದ್ರೆ ಒಂದೇ ಕಿತ ಎಲ್ರೂ ಎದ್ದು ಯಾರ ಬಗ್ಗೆ ಏನು ಬರೀಬೇಕಂತ್ಲೇ ಗೊಂದಲ ಹುಟ್ಸಿಬಿಟ್ಟಿದಾರಲ್ಲಪ್ಪ!

"ರೆಡ್ಡಿ ಏರಿಗೆ ಎಳೆದರೆ ಈಶ್ವರಪ್ಪ ನೀರಿಗೆ ಎಳೆದ್ರಂತೆ!"

ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ

ಮೇ ೧೫ ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಅವತ್ತು ನಾನು ನನ್ನ ಎಸೆಸೆಲ್ಸಿ ಮ್ಯಾಥ್ಸ್ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಬಾಗಿಲು ತೆರೆದವರೇ ಗುರುತಿದೆಯಾ ಮಾರಾಯಾ ಎಂದು ಅಚ್ಚರಿ ಮತ್ತು ಪ್ರೀತಿಯಿಂದ ವಿಚಾರಿಸಿಕೊಂಡರು. ಎಂದಿನಂತೆ ಪ್ರಾಕ್ಟಿಕಲ್ ಮಾತುಗಳು.  

"ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ"

ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು

ನಾನೇನೂ ಸಂಗೀತಗಾರನೂ ಅಲ್ಲ, ವಿಧೇಯ ಸಂಗೀತಾರ್ಥಿಯೂ ಅಲ್ಲ. ಆದರೆ ಆರು ವರ್ಷಗಳ ಹಿಂದೆ ಆರಂಭಿಸಿದ, ಎರಡು ವರ್ಷಗಳಿಂದ ತಡವರಿಸಿಕೊಂಡು ಬಂದ ಸಂಗೀತ ಕ್ಲಾಸಿನ ನಂತರದ ಕ್ಷಣಗಳಲ್ಲಿ ನನ್ನ ಜೊತೆಗೆ ಇದ್ದ, ಇರುವವರ ಬಗ್ಗೆ ಬರೆಯಬೇಕು ಅಂತ ಈ ಬೆಳಗ್ಗೆ ಅನ್ನಿಸಿ…… ನಿಮ್ಮೆದುರು ಆ ನೆನಪು ಹಂಚಿಕೊಳ್ಳಲು ಕೂತಿದ್ದೇನೆ.

"ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು"

ಪಾಕಿಸ್ತಾನಿ ಗಝಲ್‌ಗಳ ಖಜಾನೆ

ಪಾಕಿಸ್ತಾನಿ ಗಝಲ್‌ಗಳನ್ನು ಕೇಳುವುದು ನನಗೊಂದು ವಿಚಿತ್ರ ಹುಚ್ಚು. ಅದರಲ್ಲೂ ಪಠಾಣ್ ಖಾನ್‌ನಂಥ ಗಝಲ್ ಗಾಯಕರ ಚೀಸ್ ಸಿಕ್ಕರೆ ಮುಗಿದೇ ಹೋಯ್ತು…. ಎಷ್ಟೋ ವರ್ಷಗಳ ಹಿಂದೆ ನನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಪಾಕಿಸ್ತಾನಿ ಗಝಲ್‌ಗಳು ದೊರೆಯುವ ಕೆಲವು ಕೊಂಡಿಗಳನ್ನು ಪ್ರಕಟಿಸಿದ್ದೆ. ಈಗ ಕಾಲ ಬದಲಾಗಿದೆ.

"ಪಾಕಿಸ್ತಾನಿ ಗಝಲ್‌ಗಳ ಖಜಾನೆ"

ನನ್ನ ಮೇಡಂ ಜಯಲಕ್ಷ್ಮಿ

`ನನ್ನ ಮೇಡಂ ಜಯಲಕ್ಷ್ಮಿ ‘ಎಂಬ ಕವನವನ್ನು ಬರೆದು ಎಟೋ ವರ್ಷಗಳಾದ ಮೇಲೆ….. ಅವರನ್ನು ಖುದ್ದು ಕಾಣುವುದಕ್ಕೆ ಹರಸಾಹಸ ಮಾಡುತ್ತಿದ್ದೇನೆ. ನಿಮ್ಮ ಹರಕೆಯೂ ಸಏರಿಕೊಂಡರೆ ಖಂಡಿತ ಮೇ ತಿಂಗಳಲ್ಲಿ ಅವರನ್ನು ಕಾಣುವೆ. ನನ್ನ ಕವನ ಸಂಕಲನ `ವರ್ತಮಾನದ ಬಿಸಿಲುನಲ್ಲೂ ಈ ಕವನವನ್ನು ನೀವು ಕಾಣಬಹುದು. ಅಷ್ಟಮಟ್ಟಿಗೆ ಜಯಲಕ್ಷ್ಮಿ ಮೇಡಂ ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಅವರನ್ನು ನಾನು ಕಾಣದೇ ಸುಮಾರು ೨೬ ವರ್ಷಗಳಾದವು. ಅವರ ಪಾಠ ಕೇಳಿಯೇ ಇಪ್ಪತ್ತೊಂಬತ್ತು ವರ್ಷಗಳಾಗಿವೆ. ಆದರೆ ಈಗಲೂ ಅವರ ಮುಖ, ಅವರು ನನಗೆ ಹೇಳಿದ ಮಾತುಗಳು, ಬರೆದ ಪತ್ರಗಳು, ತರಗತಿಯೊಳಗೆ ಅವರು ನನ್ನನ್ನು ಪರಿಚಯ ಮಾಡಿಕೊಂಡ ಕ್ಷಣ  ಎಲ್ಲವೂ ಸ್ಪಷ್ಟವಾಗಿ ನೆನಪಿವೆ.

"ನನ್ನ ಮೇಡಂ ಜಯಲಕ್ಷ್ಮಿ"

ನನ್ನ ಪ್ರೀತಿಯ ದತ್ತಾಜಿ

ದತ್ತಾತ್ರೇಯ ಹೊಸಬಾಳೆ, – ನನ್ನ ಪ್ರೀತಿಯ ದತ್ತಾಜಿ – ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರು. ಅವರಿಗೊಂದು ಪುಟ್ಟ ಅಭಿನಂದನೆ ಹೇಳಿ ಈ ಬ್ಲಾಗ್. ದತ್ತಾಜಿ ವಿದ್ಯಾರ್ಥಿ ಪರಿಷತ್ತಿನಿಂದಾಗಿ ನನಗೆ ೨೮ ವರ್ಷಗಳಿಂದ ಪರಿಚಿತರು; ಈವರೆಗೂ ಪ್ರತೀ ಭೇಟಿಯಲ್ಲೂ ನನ್ನನ್ನು ಬೆರಗಿಗೆ, ಅಚ್ಚರಿಗೆ ಮೆಲುವಾಗಿ ತಳ್ಳಿದವರು. ಮಧುರ ಸ್ನೇಹದಲ್ಲಿ ನನ್ನನ್ನು ಕಂಡವರು …

"ನನ್ನ ಪ್ರೀತಿಯ ದತ್ತಾಜಿ"