ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!

ಗರಿಷ್ಠ ಪ್ರಮಾಣದ ಮತದಾನ; ಕನಿಷ್ಠ ಪ್ರಮಾಣದ ಹಿಂಸಾ ಪ್ರಕರಣಗಳು, `ಮೇಲಿನ ಯಾರೂ ಅಲ್ಲ’ ಎಂದು ದಾಖಲಿಸುವ ಅವಕಾಶ; ಪಕ್ಷಬೇಧವಿಲ್ಲದೆ ಹಿರಿಯ ನಾಯಕರ ವಿರುದ್ಧವೂ ಎಫ್‌ಐಆರ್…;೩೦ ವರ್ಷಗಳ ನಂತರ ಕಾಂಗ್ರೆಸೇತರ ಏಕಪಕ್ಷಕ್ಕೆ ಬಹುಮತ; ಸ್ವಾತಂತ್ರ್ಯದ ನಂತರದ ಕಾಂಗ್ರೆಸೇತರ ಪಕ್ಷದ ಮೊಟ್ಟಮೊದಲ ಸಾಧನೆ – ಲೋಕಸಭಾ ಚುನಾವಣೆಯ ವಿಶೇಷಗಳು ನನ್ನನ್ನು ಬೆರಗುಗೊಳಿಸಿವೆ. ಬಡತನ, ಹಸಿವು, ಪರಿಸರ ನಾಶ, ಕೊಳ್ಳುಬಾಕತನ, ಭ್ರಷ್ಟಾಚಾರ, ನಿರುದ್ಯೋಗದ ಹಲವು ಸಮಸ್ಯೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡೇ ಈ ಸಾಧನೆ ತೋರಿದ್ದೇವೆ.    

"ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!"

ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ

`ನನ್ನ ಕಚೇರಿಯಲ್ಲಿ ಯಾರಿಗಾದರೂ ಪನಿಶ್‌ಮೆಂಟ್ ಕೊಡಬೇಕು ಅಂತ ಇದ್ರೆ ಅವರಿಗೆ ವಿಂಡೋಸ್ ಆಪರೇಟೆಡ್ ಕಂಪ್ಯೂಟರ್ ಕೊಟ್ಟು ಕೂಡಿಸಿದರೆ ಆಯ್ತು!’ ತನ್ನ ಸಿಗ್ನೇಚರ್ ನಗುವನ್ನು ಬೀರುತ್ತಲೇ ರಾಧಾಕೃಷ್ಣನ್ ಹೇಳುವಾಗ ನಾನು ಪೆದ್ದುಪೆದ್ದಾಗಿ ಬರೆದುಕೊಳ್ಳುತ್ತೇನೆ. `ನೀವು ಇನ್ನೂ ವೈಸ್ವಿಗ್ (wysiwyg) ಮತ್ತು ಬಣ್ಣಬಣ್ಣದ ಪರದೆಗಳಿಂದ ಮುಕ್ತಿ ಹೊಂದಿಲ್ಲವೇ?’ ರಾಧಾಕೃಷ್ಣನ್ ಕಣ್ಣರಳಿಸಿ ಕೇಳಿದಾಗ `ಇಲ್ಲ ಸರ್, ನಾನಿನ್ನೂ ಇನ್‌ಡಿಸೈನ್ ಬಳಸುತ್ತಿದ್ದೇನೆ’ ಎಂದು ಪೆಚ್ಚುಪೆಚ್ಚಾಗಿ ಉತ್ತರಿಸುತ್ತೇನೆ. 

"ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ"

ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!

೨೦೧೩. ಜಯನಗರದ ದೊಡ್ಡ ಹೋಟೆಲಿನಲ್ಲಿ ಕುಳಿತಿದ್ದೇನೆ. ಒಂದು ಪಾರ್ಟಿಗಾಗಿ ನನ್ನನ್ನ ಕರೆದಿದ್ದಾರೆ. ಮೊದಲು ಸ್ಟಾರ್ಟರ್‌; ತಿಳಿಹಳದಿ  ಹೋಳುಗಳ ಒಂದು ರಾಶಿ ಹೊತ್ತ ಪ್ಲೇಟು ನನ್ನ ಮುಂದಿದೆ. ಇದೇನು ಎಂದು ಕೇಳುತ್ತೇನೆ. ಪಪಾಯ ಕಾಯಿಯಿಂದ ಮಾಡಿದ ಸ್ಟಾರ್ಟರ್‌, ತುಂಬಾ ಫೇಮಸ್‌ ಎಂಬ ಉತ್ತರ ಸಿಗುತ್ತದೆ. ನಾನು ಅದರ ರುಚಿ ನೋಡುತ್ತೇನೆ. ಹುಳಿನೀರಲ್ಲಿ ತೋಯಿಸಿದ ಆ ಪಪಾಯಿ ಚೂರುಗಳು ರಬ್ಬರ್‌ ತುಂಡುಗಳಂತೆ ಕಾಣಿಸುತ್ತವೆ. ಮೈನ್‌ ಕೋರ್ಸ್‌ ಬರುವ ಮುನ್ನ ನನ್ನ ಮನಸ್ಸು ೪೧ ವರ್ಷಗಳ ಹಿಂದಕ್ಕೆ ಓಡುತ್ತದೆ. ನನ್ನ ಅಕ್ಕಪಕ್ಕದವರು ಅದನ್ನೆಲ್ಲ ಮರೆತಿರಬಹುದು ಎಂಬುದು ಅವರ ಮಾತಿನಿಂದಲೇ ಖಚಿತವಾಗುತ್ತಿದೆ. ನೆನಪಿರಬಹುದಾದ ಒಬ್ಬಳೇ ಅಕ್ಕ, ಅವಳು ಈಗಿಲ್ಲ. ಪಪಾಯಿ ಕಾಯಿಯ ಕಥೆ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು.  ಪಪಾಯಿಯು ತೂಕ…

"ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!"

ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ ಎಂದು ಭಾವಿಸಿದ್ದೆ ಮತ್ತು ೨೦೦೨ರಲ್ಲಿ ವಿಜಯ ಕರ್ನಾಟಕದಲ್ಲಿ ಇದ್ದಾಗ ಅಂಥದ್ದೊಂದು ಲೇಖನವನ್ನೂ ಪ್ರಕಟಿಸಿದ್ದೆ. ಆದರೆ `ದಿ ಈಮೈಲ್‌ ರೆವೊಲುಶನ್‌: ಅನ್‌ಲೀಶಿಂಗ್‌ ದಿ ಪವರ್‌ ಟು ಕನೆಕ್ಟ್‌’ ಎಂಬ ಪುಸ್ತಕವನ್ನು ಓದಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ.  ಪುಸ್ತಕವನ್ನು ಓದಿದ ಮೇಲೆ ನನ್ನದೇ ಆಳ ಗೂಗಲಿಂಗ್‌ ನಡೆಸಿ, ಅಲ್ಲಲ್ಲಿ ವಿವಿಧ ಆಯಾಮಗಳ ಹೇಳಿಕೆಗಳನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ.

"ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!"

THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!

ಪ್ರಧಾನಮಂತ್ರಿ, ಮುಖ್ಯಮಂತ್ರಿಯವರ ಕಚೇರಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಗರಿಷ್ಠ ಪ್ರಮಾಣದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು ಎನ್ನುವುದು, ನನ್ನ ಪುಟ್ಟ ಅನುಭವ. ಗೌಪ್ಯತೆಯ ಬಗ್ಗೆ ಬೇರೆ ಹೇಳಬೇಕೆ? ಇಂಥ ಸೇವೆಗಳಲ್ಲಿ ಇದ್ದಾಗ ವ್ಯಕ್ತಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುತ್ತದೆ. ಅದನ್ನೇ ನಮ್ಮ ಹೆಚ್ಚುಗಾರಿಕೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ಹೀಗೆ ವ್ಯವಸ್ಥೆಯ ಮೇಲ್ಪದರದಲ್ಲಿ ಇರುವ ಉದ್ಯೋಗಿಗಳೂ ಗೌಪ್ಯತೆಗೆ ಬದ್ಧರು.

"THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!"

`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ

ಉಳಿದವರು ಕಂಡಂತೆ ಎಂಬ ಸಿನೆಮಾ ಬಂದಿದೆ, ಚೆನ್ನಾಗಿದೆಯಂತೆ ಎಂದು ಮಾತು ಕೇಳಿಬಂದಾಗ ಹೇಳಿದಾಗ ಹೌದೆ ಎಂದು ನನ್ನ ಮಗನನ್ನು ಕೇಳಿದೆ. `ನಾನು ಕಾಮಾಖ್ಯದಲ್ಲಿ ನೋಡಿದೆ. ಚೆನ್ನಾಗಿದೆ. ನೀನೂ ನೋಡು’ ಎನ್ನಬೇಕೆ? ಎಲಾ ಇವನ, ಕನ್ನಡ ಸಿನೆಮಾ ಎಂದರೆ ಮೂಗು ಮುರೀತಿದ್ದವನಿಗೆ ಇದು ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ. ಆದರೆ ಈ ಹಿಂದೆ `ಲೂಸಿಯಾ’ ಸಿನೆಮಾವನ್ನೂ ಅವನೇ ಮೊದಲು ನೋಡಿ ನನಗೆ ಒತ್ತಾಯಿಸಿದ್ದು ನೆನಪಾಯಿತು. ಲೂಸಿಯಾ ನಿರ್ದೇಶಕ ಪವನ್‌ ಕುಮಾರರೇ ನನ್ನ ಮಗನನ್ನು ಮಹಾ ಅಭಿಮಾನಿ ಎಂದು ಫೇಸ್‌ಬುಕ್ಕಿನಲ್ಲಿ ಕೊಂಡಾಡಿದ್ದನ್ನೂ ನಾನು ಓದಿದ್ದೆ. ಆದ್ದರಿಂದ `ಉಳಿದವರು ಕಂಡಂತೆ’ ನೋಡುವಾ ಎಂದು ತೀರ್ಮಾನಿಸಿ ನಿನ್ನೆ ನೋಡಿದೆ. ರಾತ್ರಿಯೇ ಸಿನೆಮಾದ ಬಗ್ಗೆ  ಗೂಗಲ್‌ ಮಾಡಿದೆ. ಕನ್ನಡ ಪತ್ರಿಕೆಗಳಲ್ಲಿ (ಉದಯವಾಣಿ ಹೊರತುಪಡಿಸಿ)…

"`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ"

ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)

೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ ಮೆತ್ತಗೆ ಐದನೇ ಮಹಡಿಗೆ ಬಂದು ನನ್ನ ಮೇಜಿನ ಮೇಲೆ ಒಂದೆರಡು ಪತ್ರಿಕೆಗಳನ್ನು ಚೆಲ್ಲಿ `ಒಂದು ಲೇಖನ ಕೊಡಿ’ ಎಂದು ತಣ್ಣಗೆ ಹೇಳಿ ಹೊರಟುಹೋಗುತ್ತಿದ್ದರು. ನಾನು ಬರೆದ ಮೇಲೆ ಅದನ್ನು ತಿದ್ದಿ ಪ್ರಕಟಿಸುತ್ತಿದ್ದರು. ನನ್ನನ್ನು ವಿಜ್ಞಾನ ಲೇಖಕನನ್ನಾಗಿ ಮಾಡಿದವರೇ ಅವರು ಎಂದು ಈ ಹೊತ್ತಿನಲ್ಲೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಈ ಲೇಖನದ ಚಿತ್ರವನ್ನೂ ಅವರೇ ನನ್ನಿಂದ ಬರೆಯಿಸಿದರು. ಈಗ, ೨೭ ವರ್ಷಗಳ ನಂತರ ಈ ಲೇಖನವನ್ನು ಓದಿದರೆ, ಪರವಾಗಿಲ್ಲ, ತಪ್ಪಾಗೇನೂ ಬರೆದಿಲ್ಲ;…

"ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)"

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ…

"ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’"

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ. 

"‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ"

SHANKAR SHARMA: CREATION OF A SUSTAINABLE URBAN ENERGY SYSTEM

Synopsis: IISc, Bangalore and BESCOM conducted a workshop on 27-28 February, 2007 at Bangalore to discuss the creation of a sustainable urban energy system for Bangalore city. This article makes an effort to discuss larger issues in this regard and contains, among other things, many issues raised in the workshop.

"SHANKAR SHARMA: CREATION OF A SUSTAINABLE URBAN ENERGY SYSTEM"