ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!

ಸ್ಥಾವರಕ್ಕಳಿವಿಲ್ಲ: ನಿಜ, ವಸುಂಧರೆಯ ಒಡಲಿನ ಮೇಲಿನ ಹುಣ್ಣಾದ ಛಿದ್ರ ಪರಮಾಣು ಸ್ಥಾವರಗಳಿಗೂ…. ಈ ಮನುಷ್ಯರು ಕೆಲವೊಮ್ಮೆ ಏನೆಲ್ಲ ದಾಖಲೆಗಳನ್ನು ಸ್ಥಾಪಿಸುತ್ತಾರೆ ಎಂದರೆ… ಮೂವತ್ತೊಂದು ವರ್ಷಗಳ ಹಿಂದೆ ಇಡೀ ಜಗತ್ತೇ ತತ್ತರಿಸುವಂತಹ ಚೆರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಕ್ಕೆ ಈ ಮನುಷ್ಯರೇ ಕಾರಣರಾದರು. ಸ್ಥಾವರದ ೨೦೦೦ ಟನ್‌ ಭಾರದ ಕವಚವೇ ಸಿಡಿದು, ಹಿರೋಶಿಮಾ ಬಾಂಬ್‌ಗಿಂತ ೯೦ ಪಟ್ಟು (ಇನ್ನೊಂದು ಸಾಕ್ಷ್ಯಚಿತ್ರದಲ್ಲಿ ೪೦೦ ಹಿರೋಶಿಮಾ ಬಾಂಬ್‌ಗೆ ಸಮ ಎಂಬ ಉಲ್ಲೇಖವಿದೆ) ಹೆಚ್ಚಿನ ಪ್ರಮಾಣದ ವಿಕಿರಣವು ಎಲ್ಲೆಡೆ ಆವರಿಸಿತ್ತು. ಅಧಿಕೃತವಾಗಿ ೨೫೦ ಚಿಲ್ಲರೆ ಜನರು ಸತ್ತರೆಂದು ರಶಿಯಾ ಪ್ರಕಟಿಸಿ ಕೈ ತೊಳೆದುಕೊಂಡಿತು. ನಿಜವಾಗಿ ಸತ್ತವರು ೫ ಸಾವಿರಕ್ಕೂ ಹೆಚ್ಚು ಜನರು. ಸ್ಫೋಟಗೊಂಡ ೪ ನೇ ಕ್ರಮಸಂಖ್ಯೆಯ ಸ್ಥಾವರದ ಮೇಲೆ ಅವಸರದಿಂದ ಒಂದು…

"ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!"

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ ಮೇಲೆ ಅನ್ನಿಸಿದ್ದು: ಕೆಲಸ ಬಿಟ್ಟದ್ದಕ್ಕೆ ಏನಾದರೂ ನೆನಪಿನ ಕಾಣಿಕೆಯನ್ನು ನನಗೆ ನಾನೇ ಕೊಟ್ಟುಕೊಳ್ಳಬೇಕು.

"ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  "

ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!

`ಡಿಸೆಂಟಿಂಗ್‌ ಡಯಾಗ್ನೊಸಿಸ್‌’ ಎಂಬ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದ ವಿಮರ್ಶೆಯನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಬರೋ ಹಾಸ್ಕಿಟಲ್‌ ಗೈಡ್‌ ಫೌಂಡೇಶನ್‌ ಎಂಬ ಸಂಸ್ಥೆಯ ಬಗ್ಗೆ ಕೊಂಚ ವಿವರವಾಗಿ ಮಾಹಿತಿ ಕೊಡಲು ಈ ಬ್ಲಾಗ್‌ ಬರೆಯುತ್ತಿದ್ದೇನೆ. ನಿಮಗೆ, ಅಥವಾ ನಿಮ್ಮ ಬಂಧು-ಬಳಗ, ಸ್ನೇಹಿತವರ್ಗದಲ್ಲಿ ಯಾರಿಗಾದರೂ ದೊಡ್ಡ ಕಾಯಿಲೆ ಇದ್ದರೆ, ನಿಮಗೆ ನೈತಿಕ ಪ್ರಜ್ಞೆ ಇರುವ ನೀತಿವಂತ ವೈದ್ಯರನ್ನು ಹುಡುಕಿಕೊಡಲು ಈ ಸಂಸ್ಥೆಯು ಯತ್ನಿಸುತ್ತದೆ.

"ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!"

Are we above Supreme Court?

By filing a writ petition (Writ Petition (Civil) No. 888/1996), Almitra Patel of Bengaluru won the case concerning managing solid waste in urban areas. She was just a citizen without any political background. As a result of this, the whole nation was forced to establish a system for managing solid waste scientifically. I had an opportunity to spend few hours with her a couple of years ago. She is still fighting for the complete and…

"Are we above Supreme Court?"

`ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!

ಎದೆಗಪ್ಪಳಿಸೋ ದೃಶ್ಯಗಳು, ಬರಡು ಬದುಕಿನ ಕಥೆಗಳು ಎಲ್ಲೆಲ್ಲೂ ನೀರಿಲ್ಲ; ನೀರಿದ್ದವರೇ ಸಿರಿವಂತರು – ಉಳ್ಳವರು. ಕಣ್ಣು ಹಾಯಿಸಿದಷ್ಟೂ ಕೆಂಪು ಮಣ್ಣು; ಹಸಿರನ್ನೇ ಕಾಣದ ಅಕರಾಳ ವಿಕರಾಳ ಗುಡ್ಡಬೆಟ್ಟಗಳು, ಎದ್ದರೆ ಧೂಳಿನದೇ ತ್ಸುನಾಮಿ. ಬಿದ್ದರೆ ಅದೇ ವಿಷಪೂರಿತ ಜವುಗು ನೆಲ. ಇಂಥ ಪ್ರಪಂಚದಲ್ಲಿ ಚಲಿಸಲು ಇರುವ ಏಕೈಕ ವಿಧಾನ – ಅಳಿದುಳಿದ ಪೆಟ್ರೋಲ್‌ ಕಬಳಿಸುವ ವಾಹನಗಳು. ಕ್ಷಣಕ್ಷಣವೂ ರೋಮಾಂಚನ ಉಂಟುಮಾಡುವ ದೃಶ್ಯಗಳ  `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’ ನೋಡುವಾಗ ಕಥೆಗೂ ಗಮನ ಹರಿಸಿದರೆ ಇದೆಂಥ ಕಾಲ್ಪನಿಕ ಜಗತ್ತು ಎಂಬ ಅಚ್ಚರಿಗೆ ನೀವು ಬಿದ್ದರೆ, ಕ್ಷಮಿಸಿ. ಇದು ವಾಸ್ತವಕ್ಕೆ  ತೀರ ಹತ್ತಿರವಾದ ಕಥೆ-ವ್ಯಥೆ.

"`ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!"

ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?

ರಾಮಾನುಜನ್‌ ಸೂತ್ರಗಳಲ್ಲಿ ಈ ಸುಳಿವು ಇದೆ ಎನ್ನುತ್ತಾರೆ ಈ ಕಾಲದ ಭೌತವಿಜ್ಞಾನಿ ಮಿಶಿವೋ ಕಾಕು. ೨೦೧೨ರ ಅಕ್ಟೋಬರ್‌ ೧. ಪೆನ್ಸಿಲ್ವೇನಿಯಾ ಪ್ರಾಂತದ ಸ್ಕ್ರಾಂಟನ್‌ ಕಲ್ಚರಲ್‌ ಸೆಂಟರಿನಲ್ಲಿ ಕಿಕ್ಕಿರಿದ ಸಭಿಕರೆದುರು ಭೌತ ವಿಜ್ಞಾನಿ ಮಿಶಿವೋ ಕಾಕು ಅವರಿಂದ  ಭವಿಷ್ಯದ ಜಗತ್ತಿನ ಬಗ್ಗೆ  ಅಪರೂಪದ ಭಾಷಣ. ಪ್ರಶ್ನೋತ್ತರದ ಹೊತ್ತಿಗೆ ಸಹಜವಾಗೇ ಪ್ರಶ್ನೆಯೊಂದು ತೂರಿ ಬಂತು. `ಎಲ್ಲ ಸರಿ,  ಆದ್ರೆ ಈಗ ಬೆಳಕಿನ ವೇಗವನ್ನೂ ೭೩೦ ಕಿಮೀ ಮೀರಿ ನ್ಯೂಟ್ರಿನೋ ಕಣವೊಂದು ಸೆನ್‌ನಿಂದ ಇಟೆಲಿಗೆ ಹಾರಿದೆಯಂತೆ.. ನೀವು ಏನು ಹೇಳ್ತೀರಿ?’ 

"ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?"

ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ

ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್‌ನಲ್ಲಿ ಹೀಗೇ ಹುಡುಕಾಡುತ್ತಿದ್ದಾಗ ಆಲಿಯಾ ರಶೀದ್‌ ಎಂಬ ಪಾಕಿಸ್ತಾನಿ ಗಾಯಕಿಯ ಧ್ರುಪದ್‌ ಶೈಲಿಯ ಹಿಂದುಸ್ತಾನಿ ಸಂಗೀತದ ವಿಡಿಯೋ ಸಿಕ್ಕಿತು. `ಆಹಾ ಎಂಥ ಪ್ರತಿಭೆ!’ ಎಂದು ಅಚ್ಚರಿಪಡುತ್ತಿದ್ದಂತೆ ಗೊತ್ತಾಗಿದ್ದು, ಆಕೆ ಕಲಿತಿದ್ದು ಭಾರತದಲ್ಲಿ, ಗುಂಡೇಚಾ ಸೋದರರಿಂದ! ಇನ್ನೂ ವಿಶೇಷ ಎಂದರೆ ಆಕೆ ತನ್ನ ಅಂಧತ್ವವನ್ನು ಗೆದ್ದು ಸಂಗೀತವನ್ನು ಬದುಕಿನ ಮುಖ್ಯ ಭಾಗವಾಗಿ ಸ್ವೀಕರಿಸಿದ್ದು. ಆಲಿಯಾ ರಶೀದ್‌ ಈಗ ಪಾಕಿಸ್ತಾನದ ಮೊದಲ ಮತ್ತು ಏಕೈಕ ಧ್ರುಪದ್‌ ಗಾಯಕಿ!!  ಒಳಗಣ್ಣಿನ ಅಧಿನಾಯಕಿ.

"ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ"

`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 

(ಸೂಚನೆ: ಇದು ವಯಸ್ಕ ಸಿನೆಮಾದ ವಿಮರ್ಶೆ)  `ರೇಪ್‌’ – ಲೈಂಗಿಕ ಅತ್ಯಾಚಾರವನ್ನು ವೈಭವೀಕರಿಸುವುದು ಸರ್ವಥಾ ತರವಲ್ಲ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಹಲವು ಸಲ `ರೇಪ್‌’ನ್ನು ವರ್ಣಿಸುವ ಕೃತ್ಯಗಳೂ ಹಲವು ಜನಪ್ರಿಯರೆನ್ನಲಾದ ವ್ಯಕ್ತಿಗಳಿಂದಲೇ ನಡೆಯುತ್ತಿರುತ್ತದೆ. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಪಾಲ್‌ ವೀರೋವೆನ್‌ `ಎಲ್ಲೆ’ ಸಿನೆಮಾದಲ್ಲಿ ಇಂಥ ವಿಷಯವೊಂದನ್ನು ಎತ್ತಿಕೊಂಡು ತನ್ನ ನಿರ್ಭೀತ ಚಿತ್ರಕಥೆ-ದೃಶ್ಯಗಳಿಂದ ಶಾಕ್‌ ಕೊಟ್ಟಿದ್ದಾರೆ. ನಾನು ನೋಡಿದ ವಯಸ್ಕರ ಸಿನೆಮಾಗಳಲ್ಲೇ ಇದು ಅತ್ಯಂತ ಗಂಭೀರವಾದ ಮತ್ತು ಹಾಲಿವುಡ್‌ ನಿರ್ಮಾಣದಲ್ಲಿ ತುಂಬಾ ಆಳವಾದ ಬಹುಸ್ತರದ ಸಿನೆಮಾ ಆಗಿದೆ. `ಬೇಸಿಕ್‌ ಇನ್‌ಸ್ಟಿಂಕ್ಟ್‌’ ಎಂಬ ಇಂಥದ್ದೇ ಸಿನೆಮಾವನ್ನೂ ಪಾಲ್‌ ವೀರೋವೆನ್‌ ನಿರ್ದೇಶಿಸಿದ್ದಾರಾದರೂ, ಈ ಕಾಲದಲ್ಲಿ ರೇಪ್‌ ಕುರಿತ ಇಂಥದ್ದೊಂದು ಚಿತ್ರವನ್ನು ನಿರ್ಮಿಸುವುದು ಬಹುದೊಡ್ಡ ಸವಾಲಿನ ವಿಷಯ. ಅದನ್ನೂ ಪಾಲ್‌ ವೀರೋವೆನ್‌ `ಸಮರ್ಥವಾಗಿ’…

"`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? "

Publish All the Radia Tapes

The debate about Privacy vs. Right to knowledge (Information) is being fought in the Honorable Supreme Court of India. This entire debate is the result of the “leaks” of the Radia tapes. It is important to note that nobody has said or challenged the legality of the tapings of conversations between Ms Niira Radia and her various contacts (as it was properly authorized by competent authority). Nobody figuring in the conversation has denied that they…

"Publish All the Radia Tapes"

ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?

ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ? ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ ಹಲವರ ಸಹಜ ಕೃತ್ಯವಾಗಿದೆ.

"ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?"