ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!

ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ ದಿನಪತ್ರಿಕೆಗಳು ಮತ್ತು ಅಪರೂಪದ ಪುಸ್ತಕಗಳನ್ನು ನೋಡಿದೆ. ಮೆಲುವಾಗಿ ಮುಟ್ಟಿ ನಮ್ಮ ಪರಂಪರೆಗೆ ಮನದಲ್ಲೇ ನಮಸ್ಕರಿಸಿದೆ. ಈ ಪುಸ್ತಕಗಳ ಜೊತೆಗೇ ಒಂದು ದಪ್ಪನೆಯ ಕನ್ನಡ- ಇಂಗ್ಲಿಶ್‌ ನಿಘಂಟೂ ಇತ್ತು. ಅದರ ಕೆಲವು ಪುಟಗಳ ಛಾಯಾಗ್ರಹಣ ಮಾಡಿಕೊಂಡು ಬಂದಿದೆ. ಅತಿದೊಡ್ಡ ಕನ್ನಡ – ಇಂಗ್ಲಿಶ್‌  ನಿಘಂಟು ರೂಪಿಸಿರುವ ಶ್ರೀ ವಿ ಕೃಷ್ಣ ಅವರಿಗೆ ಈ ಪುಟಗಳನ್ನು ಕಳಿಸಿದೆ. ಅದು  ರೆವರೆಂಡ್‌ ವಿಲಿಯಂ ರೀವ್‌ (೧೭೯೪-೧೮೫೦) ಸಂಪಾದಿಸಿದ ಕನ್ನಡ-ಇಂಗ್ಲಿಶ್‌ ನಿಘಂಟು ಎಂದು ಮಾಹಿತಿ…

"ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!"