ದಶಕದ ಹಿಂದಿನ ಡಿಜಿಟಲ್ ಕಾವ್ಯ

ನಾನು ಎಂದೋ ಬರೆದ ಕವನಗಳಿವು. `ಗೂಗಲ್ ಎಂಬ ಸರ್ಚ್ ಇಂಜಿನ್ ಕವನ `ಭಾವನಾ’ದ ವಿಶೇಷಾಂಕದ ಪ್ರಕಟವಾಗಿತ್ತು. ಈ ಕವನ ಎಲ್ಲಿದೆ ಎಂದು ಆನ್‌ಲೈನ್‌ನಲ್ಲಿ ಯಾರೋ ಹುಡುಕುತ್ತಿದ್ದರು ಎಂದೂ ಇತ್ತೀಚೆಗೆ ಗಮನಿಸಿದೆ. ಇಂಟರ್‌ನೆಟ್ ಅದೇ ತಾನೆ ನಮ್ಮ ದೇಹವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಸಮಯ. ಆಗ ಬರೆದ ಈ ಕವನಗಳನ್ನು ಈಗ ನೋಡಿದರೆ ತಮಾಷೆ ಎನಿಸುತ್ತದೆಯೇನೋ. ಹೊಸಬಗೆಯ ಕಾವ್ಯವನ್ನು ಕೆತ್ತಿಬಿಡಬೇಕೆಂಬ ಧಾವಂತವೂ ಅಲ್ಲಿತ್ತು. Please follow and like us:

"ದಶಕದ ಹಿಂದಿನ ಡಿಜಿಟಲ್ ಕಾವ್ಯ"

ಮೂರು ಜೈವಿಕ ಇಂಧನ ಹಾಡುಗಳು

1. ಜೈವಿಕ ಇಂಧನ ಚಿರಂತನ   ಹೊಂಗೆಯ ದೀಪವ ಹೊತ್ತಿಸಬನ್ನಿ ಬೇವಿನೆಣ್ಣೆಯನು ಬಸಿಯುವ ಬನ್ನಿ ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ ಜೈವಿಕ ಇಂಧನ ಒಳ್ಳೆಯದಣ್ಣ ಡೀಸೆಲ್ ಪೆಟ್ರೋಲ್ ಎಷ್ಟು ದಿನ? ಜೈವಿಕ ಇಂಧನ ಚಿರಂತನ ! Please follow and like us:

"ಮೂರು ಜೈವಿಕ ಇಂಧನ ಹಾಡುಗಳು"

ನೀನೇನಂಥ ಮೆದು ಹುಡುಗನಲ್ಲ

ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ.  ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು.    ಒಂದು ದಿನವೂ ನೀನು ಹೀಗೆ ಕರ್ಟನು ಸರಿಸಿದವನಲ್ಲ,  ಒಂದು ಹುಸಿಜೋಕಿಗೂ ನಕ್ಕವನಲ್ಲ,  ಬೆಳಗ್ಗೆ ಎದ್ದು ಹದವಾಗಿ ಮಾತಾಡುವುದಿಲ್ಲ ಚಾ ಕುಡಿವಾಗ ಕಣ್ಣು ವಾರೆನೋಟಕ್ಕೂ ಗತಿಯಿಲ್ಲದಂತೆ  ಪೇಪರಿಗೆ ಅಂಟಿಕೊಂಡಿರುತ್ತೆ. ಆ ಪೇಪರಿನಲ್ಲಿ ಯಾರದ್ದೋ  ರಕ್ತ, ಪೋಲಿಯೋ ಲಸಿಕೆ ಎಲ್ಲ ರಾಡಿ.  ನೀನು ತಣ್ಣಗೆ ಲೋಟ ಎತ್ತಿಕೊಂಡ ಮೇಲೆ  ನಾನು ಹಾಗೇ ಜಾರಿಕೊಳ್ಳುತ್ತೇನೆ  ಮೆತ್ತಗೆ, ಬೆಳ್ಳಂಬೆಳಗ್ಗೆಯೇ ಕಾಣಬೇಕಾದ ಕನಸಿಗೆ.    ಡೈನಿಂಗ್ ಟೇಬಲ್ಲಿನ ಮೇಲೆ ಅರಳುತ್ತಿರೋ ಎಲೆಗೂ ಕಿಟಕಿಯಾಚೆ ಇಣುಕುತ್ತಿರೋ ಮಂಗಕ್ಕೂ  ರಸ್ತೆಯಾಚೆ ಬರುತ್ತಿರೋ ಕಸದ ಗಾಡಿಗೂ ಸಂಬಂಧ…

"ನೀನೇನಂಥ ಮೆದು ಹುಡುಗನಲ್ಲ"

ಅಪಾರ, ನಿನ್ನ ಜೊತೆ…

I wrote this poem as a small reaction in Apara’s blog stanzas of Madyasaara. Those poems are now a book…  ಅಪಾರ, ನಿನ್ನ ಜೊತೆ ಕೆಲವೊಮ್ಮ್ಮೆ  ನಾನೂ ಕೂತಿದ್ದೆ  ಖಾಸಾ ಖಾಸ್ ಮಾತುಗಳನ್ನು ಎಗ್ಗಿಲ್ಲದೆ ಕಿರುಚುತ್ತ ಮಾತ್ರ ಎಗ್ ಬೋಂಡಾಗಳನ್ನು ಕಚಕಚ ಜಗಿಯುತ್ತ!  ಖಂಡವಿದೆಕೋ ಎಂದು ಕತ್ತರಿಸಿಕೊಂಡ  ಅಂಜಲ್ ಮೀನಿನ ತುಂಡನ್ನು ಕೊಂಚ ಖಂಡಿಸುತ್ತ…..   ನಮ್ಮ ಜತೆ ತೂರಾಡಬಾರದೆಂದು ಕುರ್ಚಿಗಳನ್ನು  ಮೇಜಿನ ಕಾಲುಗಳನ್ನು  ಹುಗಿದೇ ಬಿಟ್ಟಿದ್ದರು ಆ ಬಾರಿನಲ್ಲಿ ಎಂಬುದು  ಅಂಥ ಕತ್ತಲೆಂಬ ಬೆಳ್ಳಂಬೆಳಕಿನಲ್ಲೂ ಗೊತ್ತಾಗಿ  ನಮಗೆ ನಗು ಬಂದಿತ್ತಲ್ಲ?    ಹೊರಗೆ ಮಳೆಯೆ, ಬಿಸಿಲೆ, ವಿಷಾದದ ಬಿಸಿ ಅಲೆಯೆ ಅಥವಾ ನಿಟ್ಟುಸಿರಿನ ಬಿರುಗಾಳಿಯೆ ಮೌನದ ಬರಸಿಡಿಲೆ, …

"ಅಪಾರ, ನಿನ್ನ ಜೊತೆ…"

ಶೂನ್ಯಗಳ ಕುರಿತು

ನನ್ನ ಹಿರಿಯ ಗೆಳೆಯ, ನನ್ನೊಳಗಿನ ಕವಿಯನ್ನು ತಿದ್ದಿ ತೀಡಿದ ಕಣಜನಹಳ್ಳಿ ನಾಗರಾಜ್ ಈಗಿನ ಪೀಳಿಗೆಯ ಸಾಹಿತಿಗಳಿಗೆ ಗೊತ್ತಿಲ್ಲದ ಕವಿ. ಅವರು ಕವನದ ಮಾರುಕಟ್ಟೆಯಲ್ಲಿ ಏನಾದರೂ ಸ್ಟ್ರಾಟೆಜಿ ಮಾಡಿದ್ದರೆ ಇಷ್ಟು ಹೊತ್ತಿಗೆ ನಾಡಿನ ಪ್ರಖ್ಯಾತ ಕವಿಯಾಗುತ್ತಿದ್ದರು. ಏನೋ, ಗೊತ್ತಿಲ್ಲ, ಒಂಥರದ ನಿಗೂಢ, ಮೌನದ ಹಳ್ಳಿ ಬದುಕಿಗೆ ಹಿಂದಿರುಗಿದರು. ಅವರು ೧೯೮೪ರ ಒಂದು ಚಳಿಗಾಲದ ದಿನ ಭದ್ರಾವತಿ ಆಕಾಶವಾಣಿಯಲ್ಲಿ ನನ್ನೊಂದಿಗೆ ಇದ್ದು ಕವನ ಓದಿದರು. ಅದೇ ಕವನ ಈಗಲೂ ನನ್ನೊಳಗೆ ಭದ್ರವಾಗಿದೆ. ನಿಮಗಾಗಿ ಈ ಕವನ….. ಇಲ್ಲಿದೆ.  ಅಲ್ಪಜೀವಿಯು ನಾನು, ಓ ಗೆಳೆಯರೆ, ಸ್ತಬ್ಧ ಮೌನದ ಹಾಡ ನುಡಿಸಲಾರೆ. ಅಗಾಧತೆಯ ಒಂದಂಶ ನಾನೇ ಆಗಿ ಹೊಸ ನಕ್ಷತ್ರಗಳ ಸ್ನೇಹ ಬಯಸಲಾರೆ.   ಯಾವುದೋ ನದಿಯ ಹೊಸ ರೋಮಾಂಚನದ ಧ್ವನಿಯು…

"ಶೂನ್ಯಗಳ ಕುರಿತು"

ತಣ್ಣಗೆ ಮಲಗಿದೆ ರಸ್ತೆ

ಮಗು, ತಣ್ಣಗೆ ಮಲಗಿದೆ ರಸ್ತೆ, ಎಬ್ಬಿಸಬೇಡ. ಭರ್ರನೆ ಬೀಸೋ ಗಾಳಿಗೆ ಬೀಗಬೇಡ.  ಟಾರು ಗೀರುತ್ತ ಹಾಗೆ ರೊಯ್ಯನೆ ಹೋಗಬೇಡ.  ಹೆದ್ದಾರಿಯಿದು. ನಗರದುದ್ದಕ್ಕೂ ಹರಿದಿರೋ ರಕ್ತನಾಳ ಕೆಲವೊಮ್ಮೆ ಬಿಗಿಯಾಗಿ ಸುತ್ತುತ್ತೆ ನಮ್ಮನ್ನೆ.  ಉಸಿರುಗಟ್ಟಿಸೋದಿರಲಿ, ಕಪಾಲವನ್ನೇ ಒಡೆದು ಮೈಮೇಲೆ ಚೆಲ್ಲಿಕೊಳ್ಳುತ್ತೆ ಮಾಂಸ-ಮಜ್ಜನ.     ಮಗು, ತಣ್ಣಗೆ ಮಲಗಿದೆ ರಸ್ತೆ ಎಬ್ಬಿಸಬೇಡ.  ಜಡೆ ಕಟ್ಟಿ ಕುಳಿತುಕೋ, ನಿನ್ನ ಝರಿ ಲಂಗ ಹುಷಾರು ನಿನ್ನ ಕೊರಳೊಳಗೆ ಹರಿದಿರೋ ಸರ ಕೊಯ್ಯಬಹುದು ಟಯರುಗಳು ಎಳೆದಾಡಿದರೆ.  ನಿನ್ನೊಳಗೆ ಕ್ಷಣಮಾತ್ರ ಆತಂಕ ಹುಟ್ಟಿ ಕಣ್ಣು ತೆರೆದಂತೆಯೇ  ನಿಂತೇಹೋಗುತ್ತೆ ಮಗು, ನಿನ್ನ ದಿನಚರಿ.  ಶುರುವಾಗುತ್ತೆ ಪೋಲೀಸರ ಮಹಜರು.  ಮಗೂ, ಈ ಊರು ಸ್ವಲ್ಪ ಭಾವವಿಕಲ ಸಕಲವಿಕೃತಿಗಳ ಗೋಜಲು. ಹೂಗಿಡದ ತೋಟದ ಪಕ್ಕದಲ್ಲೇ  ಹೊಸಕಿಹೋಗುತ್ತೆ ಗುಲಾಬಿ ಹೂವು. …

"ತಣ್ಣಗೆ ಮಲಗಿದೆ ರಸ್ತೆ"

ಕುರುಹಿಲ್ಲದ ನೆರಳು

ಮತ್ತೆ ನೋಡಿದರೆ ಕಾಣದ ಹಾಗೆ ನೆಲದಲ್ಲೇ ಕರಗಿಹೋಗಿದ್ದ ಕುರುಹಿಲ್ಲದ ನೆರಳು ಎಲ್ಲಿಯವರೆಗೆ ಹಾದು ಹೋಗಿರಬಹುದು ಒಳಗೆ ನೆಲ ಕದಡಿರಬಹುದು, ನೀರು ತಣ್ಣಗೆ ಕೊಯ್ದಿರಬಹುದು ಅಥವಾ ಲಾವಾರಸ ಹೀಗೆ ಮುಟ್ಟಿ ಮುಟ್ಟಿ ಸುಟ್ಟಿರಬಹುದು ನನ್ನ ನೆರಳಿನ ಕೋಮಲತೆಯನ್ನು ಬರಿದೆ ಭಾವಿಸಬಾರದು ಎಂದು ಕರೆದಿದ್ದೆ ಯಾರದೋ ಹೆಸರು ನೆರಳು ಬೆರಗಾಗಬಾರದು ಎಂದು ಬರೆದಿದ್ದೆ ಎಂಥದೋ  ಹಾಳೆ ಯಾರ ಎದೆಯೊಳಗೂ ಕವಿಯದೆ, ನಿಲ್ಲದೆ, ನಡೆಯದೆ ಬಂದುಬಿಡಬೇಕು ಎಂದು ಉಸುರಿದ್ದೆ ಅದಕ್ಕೆ ಇರಬೇಕು ಹೀಗೆ ಪಾತಾಳ ಹೊಕ್ಕ ಭಾವಗಳೆಲ್ಲ ಕೊರೆಯುತ್ತಿವೆ ನನ್ನ ಹಣೆ, ಕೆನ್ನೆ, ಕಿವಿಯಂಚು. ಈ ಭಾವಗುಚ್ಚಗಳ ಹೀಗೆಯೇ ಕಟ್ಟಿ ಎಸೆದರೆ ಹೇಗೆ ಯಾರೂ ಗಮನಿಸದ ಮಾತಿನ ಹಾಗೆ ಕಳೆದೇಹೋಗಬಹುದು ಗಾಳಿಯಲ್ಲಿಯೂ ಕಣವಾಗದೆ ಕೆಂಪು ಪಕಳೆಗಳಲ್ಲಿ ಅಣುವಾಗದೆ ಯಾರ ಬೆರಳಿಗೂ…

"ಕುರುಹಿಲ್ಲದ ನೆರಳು"

ಆಶಾ ನನ್ನ ಆಶಾ

ಎಲ್ಲಿರಬಹುದು ಈ ಆಶಾ ಎಟ್ ಯಾಹೂ ಡಾಟ್‌ಕಾಮ್ ಎಂಬ ಹುಡುಗಿ/ಹುಡುಗ/ಮುದುಕ/ಮುದುಕಿ/ಪೋರ? ಯಾವ ಕಂಪ್ಯೂಟರಿನಲ್ಲಿ ಟಕಟಕಾಯಿಸುತ್ತಿರಬಹುದು ಯಾವ ಪ್ರಾಸೆಸರಿನಲ್ಲಿ ಎಷ್ಟು ರಭಸವಾಗಿ ಧುಮ್ಮಿಕ್ಕಬಹುದು ಊಹಿಸಿದ್ದೀರ? ಎಲ್ಲಿಂದಳೋ ಬರೆಯುತ್ತಾಳೆ ಭ್ರಮಾಧೀನ ವಿಶ್ವದೊಳಗೆ ಬೆಳಕಿನಂತೇ ತೂರಿ ನನ್ನ ಮೇಜಿನ ಮೇಲೆ ಬಿದ್ದಿದೆ ಅವಳ ಮೇಲು. ಏನೋ? ನೀನು ಯಾರೋ? ಬೇಕಾ ನನ್ನ ಸ್ನೇಹ? ಬರೀತೀಯಾ ಕಾಗದ? ಕೇಳಿದ್ದಾಳೆ ಸ್ಫುಟವಾಗಿ ಎರಡೇ ವಾಕ್ಯಗಳಲ್ಲಿ ಆಶಾಭಾವನೆಯಿಂದ ಇದ್ದೀತೆ ಒಳಗೊಳಗೆ ಹತಾಶೆಯ ದನಿ ಹುಡುಕಿದರೆ ಸಿಕ್ಕೀತೇನೋ ಅಪ್ಪ-ಅಮ್ಮ ಬಿಟ್ಟುಹೋಗಿರುವ ಸೌಕರ್ಯಗಳು ಚೆಲ್ಲಾಪಿಲ್ಲಿಯಾಗಿ ಫ್ರಿಜ್ಜಿನಲ್ಲಿ. ಆಶಾ ನನ್ನ ಆಶಾ ಎಂದು ಕರೆಯಲೆ? ನಿನ್ನ  ಹುಡುಕಲೇಬೇಕು ಮಾತುಕತೆ ಕೋಣೆಯಲ್ಲಾದರೂ ಮುತ್ತಿಡುವ ಗೆಳತಿಯರನ್ನು ಅಂದುಕೊಂಡೇ ತಾಸುಗಳ ಕಳೆಯುತ್ತ ಬಂದ ಹೊತ್ತೇ  ಆಶಾ ಬರೆದ ಪತ್ರ.ಕೊನೆಗೂ ಸಿಕ್ಕಿದಳಲ್ಲ ಅಂದರೂನೂ ಒಳಗೆ…

"ಆಶಾ ನನ್ನ ಆಶಾ"

ನಿನಗಾಗಿ

ನಿನಗಾಗಿ ಉಡುಗೊರೆಯ ತಂದಿರುವೆ ನೋಡೇ ತೆಗೆದುಕೋ ನನ್ನನ್ನೆ ಪೂರ್ಣವಾಗಿ ಸುಖಮಜಲುಗಳ ನಿನಗೆ ತೋರಿಸುವೆ ತೆರೆದರೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ಗತನೆನಪುಗಳ ಭಗ್ನ ಗೋಡೆಗಳ ಮರೆತುಬಿಡು ತೆಗೆದುಕೋ ನನ್ನನ್ನೆ ಪೂರ್ಣವಾಗಿ ಹಿತ ರಾತ್ರಿಗಳು , ನವಿರು ಹಗಲುಗಳು ಅರಳಲಿವೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ನಮ್ಮ ಸ್ನೇಹದ ನೂರು ಗಳಿಗೆಗಳು ಕಾಯುತಿವೆ ತೆಗೆದುಕೋ ನನ್ನನ್ನೆ ಪೂರ್ಣವಾಗಿ. ನಿನ್ನೊಳಗೆ ಹೊರಗೆ ಆವರಿಸಿರುವೆ ನಾನೇ ಪಡೆದುಕೋ ನನ್ನನ್ನೆ ಪೂರ್ಣವಾಗಿ. ರೆಪ್ಪೆ ತೆರೆದರೆ ದಾರಿ, ಜತೆಗಾರ ನಾನೇ ತೆಗೆದುಕೋ ನನ್ನನ್ನೆ ಪೂರ್ಣವಾಗಿ. ಕಣ್ಣು ಮುಚ್ಚಿದ ಮೇಲೆ ಕಾಣೊ ಕನಸೂ ನಾನೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ನಾವು ನಾವೇ ಆದ ಖುಷಿಯ ಹರಹೇ ನಾನು ತೆಗೆದುಕೋ ನನ್ನನ್ನೆ ಪೂರ್ಣವಾಗಿ. ನೀನು ಹೊಳೆ, ನಾನೇ ದಂಡೆ…

"ನಿನಗಾಗಿ"

ಆಪ್ಟಿಮಿಸಮ್

ಬೆರಳುಗಳ ತಟ್ಟದಿರು ಹುಡುಗಿ ನಾನು ನಡುಗುವೆ ನಿನ್ನ ಸ್ಪರ್ಶಕ್ಕೆ ಕಣ್ಣುಗಳ ಕೂಡಿಸದಿರು ಕಡುಸಂಜೆ ನಾನು ನಡುಗುವೆ ನಿನ್ನ ಪ್ರೀತಿಗೆ ಅಂಗೈ ಹಿಡಿದು ಬಿಸಿಯೇರಿದಂತೆ ನಾನು ನಡುಗುವೆ ಕಣೇ ನಿನ್ನ ಹಣೆಮುಟ್ಟಿ ಹೇಳುವೆ ಕೇಳು ನಾನು ನಡುಗುವೆ ನಿನ್ನ ಹಿತಕ್ಕೆ ನನ್ನ ಈ ಹೆದರಿಕೆಗೆ ದಿನಮಾನಗಳು ಬೆದರೋ ಹಕ್ಕಿಗಳು, ಅಳುವ ಹೃದಯಗಳು ದಿಕ್ಕಿಲ್ಲದೆ ಅದುರುವ ಹಣೆಗೆರೆಗಳು ಕಾರಣ ಎಂಬ ಮಾತಿದೆ. ನಿಜವಿರಬಹುದು. ನಿನ್ನ ಈ ಪ್ರೀತಿಗೆ ಸುಖದ ನೆನಪುಗಳು ದುಃಖದ ದರಿದ್ರ ಕ್ಷಣಗಳು ಭಾವುಕತೆಯ ಬಿಂದುಗಳು ಬರದ ಗಳಿಗೆಗಳು ಕಾರಣ ಎಂಬ ಮಾತೂ ನಿಜ. ಗಲ್ಲ ತಟ್ಟಿ ಹೇಳುವೆ ಕಣೇ ಈ ಪ್ರೀತಿ-ಹೆದರಿಕೆ-ತಲ್ಲಣ ಎಲ್ಲ ಹೇಳುವುದಿಷ್ಟೆ : ಬಾರೆ , ಹೆದರಿಕೆಯನ್ನು ಪ್ರೀತಿಸೋಣ. ಬೆದರಿಕೆಗೆ ಮುತ್ತಿಡೋಣ. ತುಟಿ…

"ಆಪ್ಟಿಮಿಸಮ್"