ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ

ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಸ್ಥೆಗೆ ಈ ವರ್ಷದ ಹ್ಯಾರಿಯೆಟ್ ಟಬ್‌ಮನ್ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ನೀಡುವ ಸಂಸ್ಥೆ ‘ಫ್ರೀ ದಿ ಸ್ಲೇವ್ಸ್’ ನವರು ಜೀವಿಕದ ಸಾಧನೆಗಳ ಬಗ್ಗೆ ಚಿತ್ರೀಕರಣ ಮಾಡಲು ಬಂದಾಗ ನಾನೂ ಅವರೊಂದಿಗೆ ಹೆಗ್ಗಡದೇವನಕೋಟೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಓಡಾಡಿದ್ದೆ. ಈ ಪ್ರಶಸ್ತಿ ೨೫ ಸಾವಿರ ಡಾಲರ್‌ಗಳ ನಗದು ಬಹುಮಾನ, ೧೫ ಸಾವಿರ ರೂ.ಗಳ ಅಧ್ಯಯನ ನೆರವನ್ನು ಒಳಗೊಂಡಿದೆ. ಜೀವಿಕದ ಮುಖ್ಯಸ್ಥ ಕಿರಣ ಕಮಲ್ ಪ್ರಸಾದ್ ಮತ್ತು ಜೀತವಿಮುಕ್ತ ಹೋರಾಟಗಾರ ಶಿವಣ್ಣ ಸದ್ಯದಲ್ಲೇ ಅಮೆರಿಕಾಗೆ ಹೋಗಲಿದ್ದಾರೆ. Please follow and like us:

"ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ"

ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!

ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ – ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. Please follow and like us:

"ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!"

ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ

ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು  ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆನೆ ಕುರಿತ ಕಾರ್ಯಪಡೆಯ ವರದಿಯನ್ನು ಬಿಡುಗಡೆ ಮಾಡಿ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಕೊನೆಗೂ ಆನೆಗೂ ಕೊಂಚ ಹೆಚ್ಚಿನ ಸ್ಥಾನ – ಮಾನ – ಸಂರಕ್ಷಣೆ ಸಿಗೋ ಲಕ್ಷಣಗಳು ಕಾಣುತ್ತಿವೆ. Please follow and like us:

"ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ"

ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ ಸೀಮೆನ್ಸ್ ಎಸ್ ೬ ಎಂಬ ಇಟ್ಟಿಗೆ ಗಾತ್ರದ ಮೊಬೈಲ್ ಪಡೆದು ಎಲ್ಲೆಲ್ಲಿಗೋ ಮಾತನಾಡುತ್ತಿದ್ದ. ಅವತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಚುನಾವಣೆ ನಡೆಯುವುದಿತ್ತು. ಕೊನೆಗೆ ಎಲ್ಲವೂ ಸಮಾಧಾನದಿಂದಲೇ ಮುಗಿಯಿತು. ಎಚ್. ಕೆ. ಪಾಟೀಲರ ಮುಕ್ತ ಆಹ್ವಾನ ಅವನಿಗೆ ಬಂದಿತ್ತು. ಮಂಡಳಿಯ ಒಬ್ಬ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ. Please follow and like us:

"ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?"

ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !

ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್‌ಪ್ರೈಸಸ್ ಅನ್ನೋ ಪಾರ್ಟನರ್‌ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್‌ನರ್‌ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್ ರಿಫಿಲ್ ಕಾರ್ಟ್‌ರಿಜ್‌ಗಳ ರಾಜ್ಯವ್ಯಾಪ್ತಿಯ ಮಾಸ್ಟರ್ ಫ್ರಾಂಚೈಸ್ ಪಡೆದುಕೊಂಡಿದ್ದ ಮನೋಹರ ಮಸ್ಕಿ ಈಗ ಈ ಸುದ್ದಿ ಕೇಳಿ ಏನು ಕ್ರಮ ತೆಗೆದುಕೊಳ್ಳುತ್ತಾನೆ ಎಂಬುದು ಕುತೂಹಲಕರವಾಗಿದೆ. Please follow and like us:

"ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !"

ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?

ಮಂತ್ರಿ ಸ್ವ್ಕೇರ್ ಬಗ್ಗೆ ನಾನು ಬರೆದ ಲೇಖನವನ್ನು ಓದಿದ್ದೀರಿ. ಧನ್ಯವಾದಗಳು. ಈ ಮಂತ್ರಿ ಸ್ಕ್ವೇರ್‌ನ ಮಾಲೀಕ ಸುಶೀಲ್ ಮಂತ್ರಿ ಯಾರು ಎಂದು ಇಂಟರ್‌ನೆಟ್‌ನಲ್ಲಿ ಸ್ವಲ್ಪ ಹುಡುಕಿದಾಗ ಈ ಕಾನೂನಾತ್ಮಕ ವಿಷಯಗಳು ಸಿಕ್ಕವು. ಸುಶೀಲ್ ಬಗ್ಗೆ ಬೇಕಾದಷ್ಟು ಒಳ್ಳೆಯ ವರದಿಗಳೂ ಬಂದಿವೆ. ಆದರೆ ಅಧಿಕೃತ , ಸಾಂಸ್ಥಿಕ ದಾಖಲೆಗಳನ್ನು ನೋಡಿದರೆ, ಈ ವ್ಯಕ್ತಿ ಮತ್ತು ಇತರೆ ಹಲವು ವ್ಯಕ್ತಿಗಳು ಸೇರಿ ಹೂಡಿಕೆ ವ್ಯವಹಾರದಲ್ಲಿ ಸಾಕಷ್ಟು ಅಕ್ರಮವನ್ನು ಮಾಡಿದ ಆರೋಪಗಳಿಗೆ, ದಂಡಕ್ಕೆ ತುತ್ತಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. Please follow and like us:

"ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?"